• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯುಎಸ್ ಓಪನ್ ಫೈನಲ್ ಗೇರಿದ ಪೇಸ್-ಸ್ಟೇಪನೆಕ್

By Mahesh
|
ನ್ಯೂಯಾರ್ಕ್, ಸೆ.7: ಭಾರತದ ಲಿಯಾಂಡೆರ್ ಪೇಯಸ್ ಹಾಗೂ ಜೆಕ್ ಗಣರಾಜ್ಯದ ರಾಡೆಕ್ ಸ್ಟೇಪನೆಕ್ ಜೋಡಿ ಯುಎಸ್ ಓಪನ್ ಪುರುಷರ ಡಬಲ್ಸ್ ಫೈನಲ್ ಪ್ರವೇಶಿಸಿದೆ. ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಎದುರಾಳಿ ಸ್ಪೇನ್ ಜೋಡಿ ಮಾರ್ಸೆಲ್ ಹಾಗೂ ಮಾರ್ಕ್ ಲೊಪೇಜ್ ಮೊದಲ ಸೆಟ್ ನಂತರ ಗಾಯಗೊಂಡು ಪಂದ್ಯದಿಂದ ನಿವೃತ್ತಿ ಹೊಂದಿದರು.

ಸೆಮಿಫೈನಲ್ ಪಂದ್ಯದಲ್ಲಿ ಮೊದಲ ಸೆಟ್ ನಲ್ಲಿ 6-6ರ ಸಮಬಲ ಹೋರಾಟ ನಡೆದಿತ್ತು. 6ನೇ ಶ್ರೇಯಾಂಕ ಸ್ಪೇನ್ ಜೋಡಿ ನಿವೃತ್ತಿ ಘೋಷಿಸುತ್ತಿದ್ದಂತೆ 5ನೇ ಶ್ರೇಯಾಂಕದ ಇಂಡೋ ಜೆಕ್ ಜೋಡಿ ಫೈನಲ್ ಪ್ರವೇಶ ಖಚಿತವಾಯಿತು.

ಶುಕ್ರವಾರ ನಡೆಯಲಿರುವ ಫೈನಲ್ ನಲಿ ಅಮೆರಿಕದ ಅವಳಿ ಜೋಡಿ ಮೈಕ್ ಹಾಗೂ ಬಾಕ್ ಬ್ರಯಾನ್ ಅವರನ್ನು ಪೇಸ್-ಸ್ಟೆಪನೆಕ್ ಎದುರಿಸಲಿದ್ದಾರೆ. 12ನೇ ಗ್ರಾಂಡ್ ಸ್ಲಾಮ್ ಬೇಟೆಯಲ್ಲಿರುವ ಬ್ರಯಾನ್ ಜೋಡಿಯನ್ನು ಪೇಸ್ ಹಾಗೂ ಸ್ಟೆಪನೆಕ್ ಆಸ್ಟ್ರೇಲಿಯನ್ ಓಪನ್ ಫೈನಲ್ ನಲ್ಲಿ ಸೋಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

9 ನೇ ಸೀಡ್ ನ ಪಾಕಿಸ್ತಾನದ ಅಯಿಸಂ ಉಲ್ ಹಕ್ ಖುರೇಷಿ ಹಾಗೂ ಡಚ್ ಜೀನ್ ಜುಲಿಯನ್ ರೋಜರ್ ಜೋಡಿಯನ್ನು ಸೆಮಿಫೈನಲ್ ನಲ್ಲಿ ಬ್ರಯಾನ್ ಜೋಡಿ 6-3,6-4ರಲ್ಲಿ ಸೋಲಿಸಿದರು.

ಯುಎಸ್ ಓಪನ್ ಗ್ರಾಂಡ್ ಸ್ಲಾಮ್ ಅನ್ನು ಬ್ರಯಾನ್ ಸೋದರರು ಮೂರು ಬಾರಿ ಗೆದ್ದಿದ್ದಾರೆ. 2005, 2008 ಹಾಗೂ 2010 ರಲ್ಲಿ ಗೆದ್ದಿದ್ದು 2003ರಲ್ಲಿ ಫೈನಲ್ ಪ್ರವೇಶಿಸಿದ್ದರು. ಬ್ರಯಾನ್ ಸೋದರರ ಪೈಕಿ ಮೈಕ್ ಹಾಗೂ ಲೀಸಾ ರೇಮಂಡ್ ಜೊತೆ ಮಿಶ್ರ ಡಬಲ್ಸ್ ನಲ್ಲಿ 2002ರಲ್ಲಿ ಪ್ರಶಸ್ತಿ ಗೆದ್ದಿದ್ದರೆ.

ಬಾಬ್ ಅವರು ನಾಲ್ಕು ಬಾರಿ ಮಿಶ್ರ ಡಬಲ್ಸ್ ಪ್ರಶಸ್ತಿ ಗೆದ್ದಿದ್ದಾರೆ. 2003 (ಕಟಾರಿನಾ ಸ್ರೆಬೊಟ್ನಿಕ್), 2004 (ವೆರಾ ಜ್ವನೊರೆವಾ), 2006 (ಮಾರ್ಟಿನಾ ನವತ್ರಿಲೋವಾ ಹಾಗೂ 2010 (ಲಿಜೆಲ್ ಹೂಬರ್)

ಲಿಯಾಂಡರ್ ಪೇಸ್ ಅವರ ವಿರುದ್ಧ ಡಜನ್ ಗಟ್ಟಲೆ ಸಲ ಆಡಿದ್ದೇವೆ. ಅವರ ತ್ವರಿತ ಹೊಡೆತಗಳನ್ನು ತಡೆಗಟ್ಟುವ ಬಗ್ಗೆ ತಂತ್ರ ರೂಪಿಸುತ್ತೇವೆ ಎಂದು ಬ್ರಯಾನ್ ಸೋದರರು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಟೆನಿಸ್ ಸುದ್ದಿಗಳುView All

English summary
India's ace tennis player Leander Paes and his Czech partner Radek Stepanek cruised into the final of US Open men's doubles after Spaniards Marcel Granollers and Marc Lopez retired in the first set of the semi-final clash. Indo czech will clash with second seeded American twins Mike and Bon Bryan in the final

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more