ನನಗೆ ರಾಜ್ಯಾಧ್ಯಕ್ಷ ಸ್ಥಾನ ಬೇಡ ; ಯಡಿಯೂರಪ್ಪ

ಮಲ್ಲೇಶ್ವರಂನ ಜನ ಸಂಪರ್ಕ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ಅವರು ನಾನು ಯಾವುದೇ ಹುದ್ದೆ ಮೇಲೆ ಕಣ್ಣಿಟ್ಟಿಲ್ಲ. ಪಕ್ಷದ ಸಂಘಟನೆ, ಮುಂದಿನ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸುವುದು ಮಾತ್ರ ನನ್ನ ಗುರಿಯಾಗಿದೆ ಎಂದರು.
ನನಗೆ ರಾಜ್ಯಾಧ್ಯಕ್ಷ ಪಟ್ಟ ಕೊಡಿಸಲು ಹೈ ಕಮಾಂಡ್ ಮುಂದೆ ಯಾವುದೆ ಶಾಸಕರು, ಸಚಿವರು ನನ್ನ ಪರವಾಗಿ ವಕಾಲತ್ತು ವಹಿಸುವ ಅಗತ್ಯವಿಲ್ಲ. ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತನಾಗೆ ಇರಲು ಬಯಸಿದ್ದೇನೆ ಎಂದು ಯಡಿಯೂರಪ್ಪ ಹೇಳಿದರು.
ದೆಹಲಿಯಲ್ಲಿ ಲಾಬಿ ನಡೆಸುತ್ತಿದ್ದು, ಅದನ್ನು ತಡೆಯಲು ಅನಂತ್‍ಕುಮಾರ್ ಮತ್ತು ಸದಾನಂದ ಗೌಡ ಜಂಟಿಯಾಗಿ ಪ್ರತಿತಂತ್ರ ರೂಪಿಸುತ್ತಿದ್ದಾರೆ. ಖಾಸಗಿ ಸುದ್ದಿವಾಹಿನಿ ನಡೆಸಿದ ಸಮೀಕ್ಷೆ ತಮ್ಮ ಪರವಾಗಿರುವುದನ್ನು ಮುಂದಿಟ್ಟುಕೊಂಡಿರುವ ಯಡಿಯೂರಪ್ಪ, ತಮಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಬೇಕು, ಇಲ್ಲದಿದ್ದರೆ ಪಕ್ಷ ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂದು ವರಿಷ್ಠರ ಮುಂದೆ ಪ್ರತಿಪಾದಿಸಲು ದೆಹಲಿಗೆ ತೆರಳಿದ್ದಾರೆ ಎಂದು ಸುದ್ದಿ ಹಬ್ಬಿತ್ತು.
ಅರುಣ್ ಜೇಟ್ಲಿ ಹೊರತುಪಡಿಸಿ ಉಳಿದ ನಾಯಕರ ಭೇಟಿ ಸಾಧ್ಯವಾಗಿಲ್ಲ. ಹೀಗಾಗಿ ದೆಹಲಿಯಲ್ಲೇ ಠಿಕಾಣಿ ಹೂಡಿದ್ದಾರೆ. ಗಣಿ ಅಕ್ರಮ ಸೇರಿದಂತೆ ಹಲವು ಭ್ರಷ್ಟಾಚಾರ ಯಡಿಯೂರಪ್ಪ ಮರಳಿ ಪ್ರಯತ್ನ ನಡೆಸುತ್ತಲೇ ಇದ್ದಾರೆ.
ಈಗ ರಾಜ್ಯಾಧ್ಯಕ್ಷ ಹುದ್ದೆ ಅಲಂಕರಿಸಿದರೆ ವಿಧಾನಸಭೆ ಚುನಾವಣೆಯನ್ನು ತಮ್ಮ ನೇತೃತ್ವದಲ್ಲೇ ಎದುರಿಸಬಹುದು ಎಂಬ ಆಲೋಚನೆ ಯಡಿಯೂರಪ್ಪ ಅವರಿಗಿದೆ. ಮತ್ತೊಬ್ಬ ಮಾಜಿ ಸಿಎಂ ಸದಾನಂದ ಗೌಡರೂ ರೇಸ್ ನಲ್ಲಿರುವುದನ್ನು ಗಮನದಲ್ಲಿಟ್ಟುಕೊಂಡಿರುವ ಯಡಿಯೂರಪ್ಪ ಅವರ ಈ ನಿರಾಕರಣೆಯ ಅರ್ಥ ಇನ್ನೂ ಹೈಕಮಾಂಡ್ ಆಗಿಲ್ಲ
ಹಗರಣಗಳಲ್ಲಿ ವಿಚಾರಣೆ ಎದುರಿಸುತ್ತಿರುವ ಯಡಿಯೂರಪ್ಪ ಬೆಂಬಲಕ್ಕೆ ಅರುಣ್ ಜೇಟ್ಲಿ ಹಾಗೂ ನಿತಿನ್ ಗಡ್ಕರಿ ಅವರು ನಿಂತರೂ ಉಳಿದ ಹೈಕಮಾಂಡ್ ನಾಯಕರು ಯಡಿಯೂರಪ್ಪಗೆ ಉನ್ನತ ಹುದ್ದೆ ನೀಡಬಾರದು ಎಂದಿದ್ದಾರೆ. ಈ ನಡುವೆ ರಾಜ್ಯಾಧ್ಯಕ್ಷ ಸ್ಥಾನ ನನಗೂ ಬೇಡ ಎಂದು ಸದಾನಂದ ಗೌಡರು ಹಲವು ಬಾರಿ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.
ಬರ ಅಧ್ಯಯನ ಮುಂದುವರಿಕೆ: ಮೊದಲ ಹಂತದ ಬರ ಅಧ್ಯಯನ ಯಶಸ್ವಿಯಾಗಿದ್ದು, ಅಧ್ಯಯನದ ವರದಿಯನ್ನು ಜಗದೀಶ್ ಶೆಟ್ಟರ್ ಅವರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಹಲವು ಕಡೆ ಕಾಮಗಾರಿಗಳು ಸಮರ್ಥವಾಗಿ ನಡೆಯುತ್ತಿದೆ. ಕೆಲವೆಡೆ ಕೊಂಚ ವೇಗ ಕುಂಠಿತವಾಗಿದೆ. ಸೆ.11 ರಿಂದ ಮುಂದಿನ ಹಂತದ ಬರ ಅಧ್ಯಯನ ಆರಂಭವಾಗಲಿದೆ ಎಂದು ಬಿಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ.












Click it and Unblock the Notifications