ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್ ನೀಲಿಮಾ ನಂತರ ಮತ್ತೆ ಟೆಕ್ಕಿ ಆತ್ಮಹತ್ಯೆ

By Mahesh
|
Google Oneindia Kannada News

After Infosys' Neelima, another techie kills self
ಹೈದರಾಬಾದ್, ಸೆ.3: ಇಲ್ಲಿನ ಇನ್ಫೋಸಿಸ್ ಸಂಸ್ಥೆಯ ಉದ್ಯೋಗಿ ನೀಲಿಮಾ ಆತ್ಮಹತ್ಯೆಯ ನಿಗೂಢತೆ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ಸಿಗದಿರುವ ಬೆನ್ನಲ್ಲೇ ಮತ್ತೊಬ್ಬ ಇನ್ಫೋಸಿಸ್ ಟೆಕ್ಕಿ ಭಾನುವಾರ(ಸೆ.3) ಆತ್ಮಹತ್ಯೆಗೆ ಶರಣಾಗಿರುವ ಪ್ರಸಂಗ ವರದಿಯಾಗಿದೆ. ಮತ್ತೊಬ್ಬ ಟೆಕ್ಕಿ ಸಾವಿನಿಂದ ಹೈದಾರಾಬಾದಿನ ಸಾಫ್ಟ್ ವೇರ್ ಕ್ಷೇತ್ರ ಶಾಕ್ ಗೆ ಒಳಗಾಗಿದೆ.

ಮೃತಪಟ್ಟ ಸಾಫ್ಟ್ ವೇರ್ ಉದ್ಯೋಗಿಯನ್ನು ಇ. ಅನಿಲ್ ಕುಮಾರ್ ಎಂದು ಗುರುತಿಸಲಾಗಿದೆ.30 ವರ್ಷ ವಯಸ್ಸಿನ ಅನಿಲ್ ಕುಮಾರ್ ಅವರು ಗುಂಟೂರು ಜಿಲ್ಲೆ ಮೂಲದವರು ಎಂದು ತಿಳಿದು ಬಂದಿದೆ. ಹೈದಾರಾಬಾದಿನ ಪ್ರತಿಷ್ಠಿತ ಜನವಸತಿ ಹಾಗೂ ವಾಣಿಜ್ಯ ಪ್ರದೇಶವಾದ ಕುಕಟ್ಪಲ್ಲಿಯಲ್ಲಿ ಅನಿಲ್ ಅವರ ಕಾರಿನಲ್ಲಿ ಅವರ ಶವ ಪತ್ತೆಯಾಗಿದೆ. ಕೀಟನಾಶಕ ವಿಷ ಸೇವಿಸಿ ಅನಿಲ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಪೊಲೀಸರ ಕೈಗೆ ಟೆಕ್ಕಿ ಅನಿಲ್ ಸಾಯುವ ಮುನ್ನ ಬರೆದಿಟ್ಟಿರುವ ಸೂಸೈಡ್ ನೋಟ್ ಸಿಕ್ಕಿದೆ. ಅದರಲ್ಲಿ "I am ending my life as life was not convenient as I had desired." ಎಂದು ಬರೆಯಲಾಗಿದೆ.

ಶನಿವಾರವಷ್ಟೇ ಅಮೆರಿಕದಿಂದ ಹಿಂತಿರುಗಿದ್ದ ಅನಿಲ್, ಸ್ಥಳೀಯ ಹೋಟೆಲ್ ವೊಂದರಲ್ಲಿ ತಂಗಿದ್ದಾನೆ. ಶನಿವಾರ ಹೈದರಾಬಾದಿಗೆ ಬಂದ ಮೇಲೆ ತನ್ನ ಮನೆಯವರ ಜೊತೆ ಮಾತಾಡಿದ್ದಾನೆ. ಆದರೆ, ಆತ್ಮಹತ್ಯೆ ಬಗ್ಗೆ ಯಾವುದೇ ಸುಳಿವು ಸಹ ನೀಡಿರಲಿಲ್ಲ. ಎಲ್ಲರೊಂದಿಗೆ ಚೆನ್ನಾಗಿ ಮಾತಾಡಿದ್ದ ಅನಿಲ್, ಭಾನುವಾರ ಏಕಾಏಕಿ ಸಾವಿನ ದವಡೆಗೆ ಸಿಲುಕಿದ ಎಂಬುದು ಅನಿಲ್ ಮನೆಯವರಿಗೆ ತಿಳಿಯದಾಗಿದೆ.

ಪೊಲೀಸರು ಗುಂಟೂರಿನ ಅನಿಲ್ ಮನೆಗೆ ಕರೆ ಮಾಡಿ ವಿಷಯ ತಿಳಿಸಿದಾಗ ಅನಿಲ್ ಮನೆಯವರು ಆಘಾತಕ್ಕೊಳಗಾಗಿದ್ದಾರೆ.

ಇತ್ತೀಚೆಗೆ ಜು.31 ರಂದು 27 ವರ್ಷದ ಇನ್ಫೋಸಿಸ್ ಉದ್ಯೋಗಿ ನಿಲೀಮಾ ಕಚೇರಿ ಆವರಣದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರು. 2011ರಲ್ಲಿ ಅಮೆರಿಕಕ್ಕೆ ತೆರಳಿದ್ದ ನಿಲೀಮಾ ಭಾರತಕ್ಕೆ ಜು.21, 2012ರಂದು ವಾಪಾಸ್ ಆಗಿದ್ದರು.

ನಂತರ ಕೆಲ ದಿನಗಳಲ್ಲೇ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದರು. ನಿಲೀಮಾ ಆತ್ಮಹತ್ಯೆ ಮಾಡಿಕೊಂಡಿಲ್ಲ. ಕೊಲೆ ಮಾಡಲಾಗಿದೆ ಎಂದು ನಿಲೀಮಾ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು.

English summary
Another tragic news of suicide shocked all, especially the people working in software industry. Months after Infosys employee Neelima's death, another techie committed suicide on Sunday, Sep 2.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X