• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೇವ್ ಪಾರ್ಟಿ, ಎಟಿಎಸ್ ಅಧಿಕಾರಿ ಸೇರಿ 300 ಸೆರೆ

By Mahesh
|
300 Pune rave party revellers held;ATS officer under scanner
ವಾಘೋಲಿ(ಪುಣೆ), ಸೆ.3: ಇತ್ತೀಚಿನ ದಿನಗಳಲ್ಲಿ ಪುಣೆಯ ಸಂಸ್ಕೃತಿ ನುಚ್ಚು ನೂರಾಗುತ್ತಿದೆ. ಟಿವಿ ನಟಿಯರು ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ ಪ್ರಕರಣ ಕಣ್ಮುಂದೆ ಇರುವಾಗಲೇ ರೇವ್ ಪಾರ್ಟಿಯೊಂದರಲ್ಲಿ ಮಜಾ ಉಡಾಯಿಸುತ್ತಿದ್ದ ನೂರಾರು ಮಂದಿಯನ್ನು ಪುಣೆ ಗ್ರಾಮಾಂತರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಸೆರೆಸಿಕ್ಕ 300ಕ್ಕೂ ಅಧಿಕ ಜನರ ಪೈಕಿ ಉಗ್ರಗಾಮಿ ನಿಗ್ರಹ ದಳ(ATS) ಅಧಿಕಾರಿ ಹಾಗೂ ಆತನ ಪತ್ನಿ ಇರುವುದು ಪತ್ತೆಯಾಗಿದೆ.

ವೀಕೆಂಡ್ ಪಾರ್ಟಿ ಹೆಸರಿನಲ್ಲಿ ವಾಘೋಲಿಯ ಮಾಯಾ ರೆಸ್ಟೋರೆಂಟ್ ಕಮ್ ಲಾಂಜ್ ನಲ್ಲಿ ಎಲ್ಲರೂ ಪಾರ್ಟಿ ಮಾಡುತ್ತಾ ತೇಲಾಡುತ್ತಿದ್ದಾಗ ಪುಣೆ ಪೊಲೀಸರು ಹಠಾತ್ ದಾಳಿ ನಡೆಸಿ, ಎಲ್ಲರಲ್ಲೂ ವಶಕ್ಕೆ ಪಡೆದಿದ್ದಾರೆ.

ಬಂಧಿತ 300 ಜನರ ಪೈಕಿ 114 ಜನ ಮಹಿಳೆಯರಿದ್ದಾರೆ. ಇವರಲ್ಲಿ ವಿದ್ಯಾರ್ಥಿಗಳು, ಐಟಿ ವೃತ್ತಿಪರರು ಹಾಗೂ ಸಮಾಜದ ಗಣ್ಯವ್ಯಕ್ತಿಗಳು ಸೇರಿದ್ದಾರೆ. ನಿಯಮ ಮೀರಿ ಶಬ್ದ ಮಾಲಿನ್ಯ ಮಾಡುತ್ತಿದ್ದ ಪಾರ್ಟಿಯಲ್ಲಿ ಮದ್ಯ ಪೂರೈಕೆಗೆ ಯಾವುದೇ ಅನುಮತಿ ಪಡೆದಿರಲಿಲ್ಲ ಎಂದು ತಿಳಿದು ಬಂದಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ, ಈ ರೆಸ್ಟೋರೆಂಟ್ ಪೊಲೀಸ್ ಅಧಿಕಾರಿ ರಜನೀಶ್ ನಿರ್ಮಲ್ ಹಾಗೂ ಆತನ ಪತ್ನಿ ಹೆಸರಿನಲ್ಲಿದೆ. ಇದನ್ನು ಅವರು ಭೋಗ್ಯಕ್ಕೆ ನೀಡಿದ್ದಾರೆ. ಅದರೆ, ಇನ್ನೂ ಭೋಗ್ಯದ ಕ್ರಯಪತ್ರಗಳನ್ನು ಪಡೆದಿಲ್ಲ ಎಂದು ತಿಳಿದು ಬಂದಿದೆ.

ರೆಸ್ಟೋರೆಂಟ್ ಮಾಲೀಕರು, ಪಾರ್ಟಿ ಆಯೋಜಕರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ದಾಳಿ ವೇಳೆ 9.8 ಲಕ್ಷ ಮೌಲ್ಯದ ಮದ್ಯ ಹಾಗೂ ಅಪಾರ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಎಸ್ಪಿ ರವೀಂದ್ರ ಸಿನ್ಹಾ ಪರ್ದೇಶಿ ಹೇಳಿದ್ದಾರೆ.

ಈ ಪಾರ್ಟಿ ಆಯೋಜಕರಿಗೆ ಒಂದು ದಿನದ ಮಟ್ಟಿಗೆ ಪಾರ್ಟಿ ಮಾಡಲು ಅವಕಾಶ ನೀಡಲಾಗಿತ್ತು. ಸಂಜೆ 7 ರಿಂದ ರಾತ್ರಿ 11 ರವರೆಗೆ ಮದ್ಯ ಪೂರೈಕೆಗೆ ಅಬಕಾರಿ ಇಲಾಖೆ ಅನುಮತಿ ನೀಡಿತ್ತು. ಆದರೆ, ರಾತ್ರಿ 1 ಗಂಟೆ ದಾಟಿದರೂ ಮದ್ಯ ಪೂರೈಕೆಯಾಗುತ್ತಿತ್ತು. ತಡರಾತ್ರಿಯಾದರೂ ಸಸ್ಸೂನ್ ಆಸ್ಪತ್ರೆ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ಪಾರ್ಟಿಯಲ್ಲಿದ್ದವರ ವೈದ್ಯಕೀಯ ತಪಾಸಣೆ ನಡೆಸಿ, ಎಲ್ಲರೂ ಮದ್ಯ ಸೇವಿಸಿರುವುದನ್ನು ದೃಢಪಡಿಸಿದರು.

ಹರ್ಮಿತ್ ಸಹಾನಿಯಾ ಹಾಗೂ ಅಬ್ದುಲ್ ಜಹೀರ್ ಅಬ್ಬಾಸ್ ಜಲೀಲ್ ಎಂಬುವರು ಈ ಪಾರ್ಟಿ ಆಯೋಜಿಸಿದ್ದರು. ಹಾಗೂ ಘಟನೆ ಸಂದರ್ಭದಲ್ಲಿ ಸೌದ್ ಅನ್ವಾರಿ ಹಾಗೂ ಶ್ರೇಯಾಸ್ ತನ್ನ ಎಂಬ ಮ್ಯಾನೇಜರ್ ಗಳಿದ್ದರು ಎಲ್ಲರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಎಸ್ಪಿ ರವೀಂದ್ರ ಹೇಳಿದ್ದಾರೆ.

ನಾವು ಈ ಜಾಗವನ್ನು 5 ವರ್ಷಕ್ಕೆ ಭೋಗ್ಯಕ್ಕೆ ನೀಡಿದ್ದೆವು. ಅವರು ನಿಯಮ ಮೀರಿ ಪಾರ್ಟಿ ಮಾಡಿ ಗದ್ದಲ ಮಾಡಿದರೆ ನಾವು ಏನು ಮಾಡಲು ಸಾಧ್ಯ ಎಂದು ಬಂಧಿತ ಎಟಿಎಸ್ ಅಧಿಕಾರಿ ಪ್ರತಿಕ್ರಿಯಿಸಿದ್ದಾರೆ.

ಲಭ್ಯ ಮಾಹಿತಿ ಪ್ರಕಾರ ಪಾರ್ಟಿ ಸ್ಥಳದಿಂದ ಸ್ವಲ್ಪ ದೂರದಲ್ಲಿ ಬಿಎಂಡಬ್ಲ್ಯೂ ಕಾರು ನಿಂತಿದ್ದು, Municipal corporation member ಎಂಬ ಸ್ಟಿಕರ್ ಕಾರಿನ ಗಾಜಿಗೆ ಅಂಟಿಸಲಾಗಿದೆ. ಪೊಲೀಸ್ ಹಿರಿಯ ಅಧಿಕಾರಿಗಳು ಹಾಗೂ ಸಂಬಂಧಿಕರು ಈ ಪಾರ್ಟಿ ಆಯೋಜಿಸಿರುವ ಸಾಧ್ಯತೆಯಿದೆ. ಪಾರ್ಟಿಯಲ್ಲಿ ಭಾಗವಹಿಸಿದ್ದವರ ಹೆಸರು ವಿವರಗಳ ಪಟ್ಟಿ ತಯಾರಿಸಲಾಗಿದ್ದು ಸದ್ಯದಲ್ಲೇ ಸುದ್ದಿಗೋಷ್ಠಿ ನಡೆಸಿ ಬಹಿರಂಗಗೊಳಿಸಲಾಗುತ್ತದೆ ಎಂದು ಎಸ್ಪಿ ರವೀಂದ್ರ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ರೇವ್ ಪಾರ್ಟಿ ಸುದ್ದಿಗಳುView All

English summary
Pune rural police raided a weekend party at the Maya Restaurant-cum-Lounge at Wagholi early hours on Sunday(Sep.2). The joint located in the outskirts of the city is owned by a Maharashtra Anti-Terrorism Squad (ATS) officer and his wife and has been leased out.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more