ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಸಿಬಿ ಬಲೆಗೆ ಹೈದರಾಬಾದಿನಲ್ಲಿ ಪ್ರಮುಖ ಶಂಕಿತ ಉಗ್ರ

By Mahesh
|
Google Oneindia Kannada News

CCB police arrested suspected Terrorist
ಹೈದರಾಬಾದ್, ಆ.31: ರಾಜ್ಯದ ಪ್ರಮುಖ ಪತ್ರಕರ್ತರು, ರಾಜಕಾರಣಿಗಳು ಹಾಗೂ ಹಿಂದೂ ಸಂಘಟನೆಗಳ ಮುಖಂಡರ ಹತ್ಯೆಗೆ ಸಂಚು ರೂಪಿಸಿದ್ದ ಶಂಕಿತ ಉಗ್ರರ ಬೇಟೆಯನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಮುಂದುವರೆಸಿದ್ದಾರೆ. ಶುಕ್ರವಾರ(ಆ.31) ಸಂಜೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಟರ್ ಮೈಂಡ್ ಎನ್ನಬಹುದಾದ ಶಂಕಿತನೊಬ್ಬನನ್ನು ಹೈದರಾಬಾದಿನಲ್ಲಿ ಬಂಧಿಸಲಾಗಿದೆ.

ಹೈದರಾಬಾದಿನಲ್ಲಿ ಸೆರೆ ಸಿಕ್ಕಿರುವ ಶಂಕಿತ ಉಗ್ರನನ್ನು ಉಬೇದುಲ್ಲಾ ರೆಹಮಾನ್ ಅಲಿಯಾಸ್ ಇರ್ಶಾದ್ ಮಹಮದ್ ಎಂದು ಗುರುತಿಸಲಾಗಿದೆ. ರೆಹಮಾನ್ ಬಿಕಾಂ ಪದವೀಧರ ನಾಗಿದ್ದು, ಎಂಬಿಎ ಓದುತ್ತಿದ್ದ ಎಂದು ತಿಳಿದು ಬಂದಿದೆ. ಕರ್ನಾಟಕದಲ್ಲಿ ಸಿಕ್ಕಿ ಬಿದ್ದಿರುವ 11 ಜನ ಶಂಕಿತ ಉಗ್ರರ ಜೊತೆ ಈತ ಸಂಪರ್ಕ ಹೊಂದಿದ್ದ ಎಂದು ತಿಳಿದು ಬಂದಿದೆ.

ಶಂಕಿತ ಉಗ್ರರ ಜಾಲವನ್ನು ಹುಡುಕಿ ಹೊರಟಿರುವ ಸಿಸಿಬಿ ಪೊಲೀಸರ ಮತ್ತೊಂದು ತಂಡ ಉಡುಪಿ, ಭಟ್ಕಳ, ಶಿವಮೊಗ್ಗಕ್ಕೆ ತೆರಳಿ ಕೆಲವು ಶಂಕಿತರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.

ಈ ವಾರ ಬಸವೇಶ್ವರ ನಗರ ಬಳಿ ಕನ್ನಡ ಪ್ರಭ ಪತ್ರಿಕೆಯ ಪತ್ರಕರ್ತರ ಹತ್ಯೆಗೆ ಸಂಚು ಸಿದ್ಧವಾಗಿತ್ತು. ಕದ್ದ ಬೈಕ್ ಗಳನ್ನು ಬಳಸಿ ಪತ್ರಕರ್ತನನ್ನು ಮಟ ಮಟ ಮಧ್ಯಾಹ್ನ ಹತ್ಯೆ ಮಾಡಲು ಸ್ಕೆಚ್ ಹಾಕಲಾಗಿತ್ತು ಎಂದು ತಿಳಿದು ಬಂದಿದೆ.

ನಿಷೇಧಿತ ಎಲ್ ಇಟಿ ಮತ್ತು ಹುಜಿ ಸಂಘಟನೆಯ ಬಂಧಿತ 11 ಮಂದಿಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ. 14 ದಿನಗಳ ಪೊಲೀಸ್ ಕಸ್ಟಡಿಗೆ ಅವರನ್ನು ಕಳಿಸಲಾಗಿದೆ.

ಬಂಧಿತ ಶಂಕಿತ ಉಗ್ರರ ಪಟ್ಟಿ:
* ಉಬೇದುಲ್ಲಾ ರೆಹಮಾನ್ ಅಲಿಯಾಸ್ ಇರ್ಶಾದ್ ಮಹಮದ್
* ಮತಿ ಉರ್ ರೆಹಮಾನ್ ಸಿದ್ಧಿಕಿ
* ಇಜಾಜ್ ಮಹಮ್ಮದ್ ಮಿರ್ಜಾ
* ಶೋಯಿಬ್ ಅಹ್ಮದ್ ಮಿರ್ಜಾ ಅಲಿಯಾಸ್ ಛೋಟು
* ಮೊಹಮ್ಮದ್ ಯೂಸುಫ್ ನಾಲಬಂದ್
* ರಿಯಾಜ್ ಅಹಮ್ಮದ್ ಬ್ಯಾಹಟ್ಟಿ

* ಒಬೇದುಲ್ಲಾ ಅಲಿಯಾಸ್ ಇಮ್ರಾನ್ ಬಹದ್ದೂರ್ ಅಲಿಯಾಸ್ ಸಮೀರ್
* ಮೊಹಮ್ಮದ್ ಸಾಧಿಕ್ ಲಷ್ಕರ್ ಅಲಿಯಾಸ್ ರಾಜು
* ವಾಹಿದ್ ಹುಸೇನ್ ಅಲಿಯಾಸ್ ಸಾತಿಲ್
* ಬಾಬಾ ಅಲಿಯಾಸ್ ಮೆಹಬೂಬ್ ಬಾಗಲಕೋಟೆ
* ಜಾಫರ್ ಇಕ್ಬಾಲ್ ಸೋಲಾಪುರ್

English summary
CCB police arrested suspected Terrorist in Hyderabad in connection with Karnataka terror sketch. The Govt will seek Interpol assistance to get more information on those who had been allegedly associated with the terror ring.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X