ಇಂದಿನಿಂದಲೇ BIAL ಸುಂಕ ಸಂಗ್ರಹಕ್ಕೆ ಕೋರ್ಟ್ ಅಸ್ತು

ಸುಂಕದವನ ಮುಂದೆ ಸುಖ-ದುಃಖವೇ?: ಈ ಸಂಬಂಧ ದೇವನಹಳ್ಳಿ ಕೋರ್ಟ್ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ತೆರವುಗೊಳಿಸಿದೆ. ಆದ್ದರಿಂದ ರಸ್ತೆ ನಿರ್ವಹಣೆ ಹೊಣೆ ಹೊತ್ತಿರುವ ನವಯುಗ ದೇವನಹಳ್ಳಿ ಟೋಲ್ ವೆ ಪ್ರೈವೇಟ್ ಲಿಮಿಟೆಡ್ (NDTPL) ಕಂಪನಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಚಿಕ್ಕಜಾಲ ಟೋಲ್ ಗೇಟಿನಲ್ಲಿ (NH-7 Bangalore-Bellary road) ಇಂದಿನಿಂದಲೇ ವಾಹನ ಸವಾರರಿಂದ ಸುಂಕ ವಸೂಲಿ ಮಾಡಬಹುದಾಗಿದೆ.
'ಟೋಲ್ ಸಂಗ್ರಹವು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವವರನ್ನು ಗಮನದಲ್ಲಿಟ್ಟುಕೊಂಡು ದುಬಾರಿಗೊಳಿಸಲಾಗಿದೆ. ಆದರೆ ಸುತ್ತಮುತ್ತಲ ರೈತಾಪಿ ವರ್ಗದವರು ರಾಜಧಾನಿಗೆ ಕೃಷ್ಯುತ್ಪನ್ನ ತರುವಂತಾಗಲು ಅನೇಕ ಕಾಲದಿಂದ ಈ ರಸ್ತೆಯು ಅನುಕೂಲಕರವಾಗಿದೆ.
ಆದ್ದರಿಂದ ದುಬಾರಿ ಸುಂಕ ಬೇಡವೆಂದು ಕೆಲ ವಕೀಲರು ಸ್ಥಳೀಯ ಕೋರ್ಟಿಗೆ ಮೊರೆಹೋಗಿದ್ದರು.
ಕಳೆದ ಫೆಬ್ರವರಿಯಲ್ಲಿ ಈ ಮಾರ್ಗದಲ್ಲಿ ಸಂಚರಿಸುವ BMTC ವಾಯುವಜ್ರ ಬಸ್ ಸಂಚಾರ ಪ್ರಯಾಣ ದರವನ್ನೂ ಹೆಚ್ಚಿಸಲಾಗಿತ್ತು. ದುಬಾರಿ ಟೋಲ್ ಪಾವತಿ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ, ಲಾರಿ ಚಾಲಕರು ಭಾರಿ ಮುಷ್ಕರ ನಡೆಸಿದ್ದರು.












Click it and Unblock the Notifications