• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದ್ರಾವಿಡ್ ನಂತರ ಟ್ರಾಫಿಕ್ ತಂಡಕ್ಕೆ ಹೆಗ್ಗಡೆ

By Mahesh
|
Dr. Veerendra Heggade as traffic ambassador
ಬೆಂಗಳೂರು, ಆ.30: ಧರ್ಮಸ್ಥಳ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆ ಅವರು ರಾಜ್ಯ ಟ್ರಾಫಿಕ್ ರಾಯಭಾರಿಯಾಗಲಿದ್ದಾರೆ. ಕ್ರಿಕೆಟರ್ ರಾಹುಲ್ ದ್ರಾವಿಡ್ ನಂತರ ವೀರೇಂದ್ರ ಹೆಗ್ಗಡೆ ಅವರನ್ನು ತನ್ನ ಜಾಹೀರಾತುಗಳಲ್ಲಿ ಬಳಸಿಕೊಳ್ಳಲು ರಾಜ್ಯ ಟ್ರಾಫಿಕ್ ಪೊಲೀಸ್ ಚಿಂತನೆ ನಡೆಸಿದ್ದಾರೆ.

ಸರ್ಕಾರಿ ಮೂಲಗಳ ಪ್ರಕಾರ ರಾಹುಲ್ ದ್ರಾವಿಡ್ ಅವರನು ಟ್ರಾಫಿಕ್ ಇಲಾಖೆ ರಾಯಭಾರಿಯಾಗಿ ಬಳಸಿಕೊಂಡಿದ್ದು ಕ್ಲಿಕ್ ಆಗಿದೆ. ಇದೇ ರೀತಿ ಈಗ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಕರ್ನಾಟಕದ ಟ್ರಾಫಿಕ್ ರಾಯಭಾರಿಯಾಗಿ ಬಳಸಿಕೊಳ್ಳಲು ಇಲಾಖೆ ಯೋಜಿಸಿದೆ.

ಟ್ರಾಫಿಕ್ ನಿಯಮ ಪಾಲನೆ, ಜನ ಜಾಗೃತಿ, ರಸ್ತೆ ಸುರಕ್ಷತೆ ಬಗ್ಗೆ ವೀರೇಂದ್ರ ಹೆಗ್ಗಡೆ ಅವರಿಂದ ಹಿತವಚನಗಳನ್ನು ಪಡೆದು ಎಲ್ಲೆಡೆ ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತದೆ. ರಸ್ತೆ ಸುರಕ್ಷತೆ ಬಗ್ಗೆ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಹೆಗ್ಗಡೆ ಅವರು ಸೂಕ್ತ ವ್ಯಕ್ತಿಯಾಗಿದ್ದಾರೆ. ರಸ್ತೆ ಸುರಕ್ಷತೆ ಅಭಿಯಾನಕ್ಕೆ ಸಂಪೂರ್ಣ ಸಹಕಾರ ನೀಡುವ ಭರವಸೆಯನ್ನು ಹೆಗ್ಗಡೆ ಅವರು ನೀಡಿದ್ದಾರೆ ಎಂದು ಟ್ರಾಫಿಕ್ ತಜ್ಞ ಎಂಎನ್ ಶ್ರೀಹರಿ ಹೇಳಿದ್ದಾರೆ.

ರಸ್ತೆ ಸುರಕ್ಷತೆ ಬಗ್ಗೆ ಹೆಗ್ಗಡೆ ಅವರು ಆಸಕ್ತಿ ವಹಿಸಲು ಕಾರಣವೂ ಇದೆ. ವೀರೇಂದ್ರ ಹೆಗ್ಗಡೆ ಅವರ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಅವರು ಜ.21,2006 ರಲ್ಲಿ ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಅಪಘಾತದಲ್ಲಿ ಕಾರಿನ ಚಾಲಕನೂ ಸಾವನ್ನಪ್ಪಿದ್ದ. ಇದು ಧರ್ಮಾಧಿಕಾರಿಗಳಿಗೆ ತೀವ್ರ ಆಘಾತ ನೀಡಿತ್ತು. ಹೀಗಾಗಿ ಅಪಘಾತದ ಬಗ್ಗೆ ಜಾಗೃತಿ ಮೂಡಿಸಲು ಹೆಚ್ಚಿನ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ.

ಮೊದಲ ಹಂತದಲ್ಲಿ ವೀರೆಂದ್ರ ಹೆಗ್ಗಡೆ ಅವರ ಭಾವಚಿತ್ರದೊಂದಿಗೆ ಟ್ರಾಫಿಕ್ ನಿಯಮಗಳ ಬಗ್ಗೆ ಜನಜಾಗೃತಿ ಸಂದೇಶಗಳನ್ನು ಹೊತ್ತ ಬ್ಯಾನರ್ ಗಳು ಬೆಂಗಳೂರಿನಲ್ಲಿ ಕಾಣಿಸಲಿದೆ. ನಂತರ ಇತರೆ ಜಿಲ್ಲೆಗಳಲ್ಲಿ ಈ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ಟ್ರಾಫಿಕ್ ಇಲಾಖೆ ಹೇಳಿದೆ.

'ರಾಹುಲ್‌ ದ್ರಾವಿಡ್‌ ಬಳಿಕ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ರಸ್ತೆ ಸುರಕ್ಷತೆ ಮತ್ತು ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲು ರಾಯಭಾರಿಯನ್ನಾಗಿ ಪಡೆದುಕೊಳ್ಳಲು ಯತ್ನಿಸಿದ್ದೇವೆ. ಡಾ. ವೀರೇಂದ್ರ ಹೆಗ್ಗಡೆ ಬಗ್ಗೆ ಜನರಿಗೆ ಬಹಳ ಪ್ರೀತಿ, ಅಭಿಮಾನ, ಭಯ-ಭಕ್ತಿಯಿದೆ. ಹೀಗಾಗಿ, ಹೆಗ್ಗಡೆ ಅವರನ್ನು ಅವರ ಧ್ವನಿ, ಫೋಟೊ ಸೇರಿದಂತೆ ನಾನಾ ರೀತಿಯಲ್ಲಿ ನಮ್ಮ ಐಕಾನ್‌ ಆಗಿ ಬಳಸಿಕೊಳ್ಳಲು ಉದ್ದೇಶಿಸಿದ್ದೇವೆ ಎಂದು ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್‌ ಆಯುಕ್ತ(ಸಂಚಾರ) ಎಂ ಎ ಸಲೀಂ ಹೇಳಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೂ ಅಪಘಾತಗಳಲ್ಲಿ ಸಾವನ್ನಪ್ಪಿದವರ ಕುಟುಂಬ ವರ್ಗದವರು ಆರ್ಥಿಕ ನೆರವು ಕೋರಿ ಪ್ರತಿನಿತ್ಯ ಬರುತ್ತಾರೆ. ಅವರ ಬದುಕಿನ ಕಥೆ ಕೇಳಿದರೆ ತುಂಬಾ ದುಃಖವಾಗುತ್ತದೆ.

ಈ ಹಿನ್ನೆಲೆಯಲ್ಲಿ ಸಂಚಾರ ನಿಯಮಗಳ ಬಗ್ಗೆ ಸವಾರರು ಮತ್ತು ಸಾರ್ವಜನಿಕರಲ್ಲಿ ದೊಡ್ಡ ಮಟ್ಟದಲ್ಲಿ ಜಾಗೃತಿ ಮೂಡಿಸಬೇಕು ಎನ್ನುವ ಚಿಂತನೆ ನನ್ನ ಮನಸ್ಸಿನಲ್ಲಿಯೂ ಇತ್ತು. ಅದರಲ್ಲಿಯೂ ವಾಹನಗಳ ದಟ್ಟಣೆ ಹೆಚ್ಚಾಗುತ್ತಿರುವ ನಗರ ಪ್ರದೇಶದಲ್ಲಿ ಅರಿವು ಮೂಡಿಸುವ ಅಗತ್ಯ ಬಹಳವಿದೆ. ಈ ಕುರಿತು ಕೆಲವು ಸಾರಿಗೆ ತಜ್ಞರ ಜತೆಗೂ ಚರ್ಚಿಸಿದ್ದೆ. ಹೀಗಾಗಿ, ಈಗ ಬೆಂಗಳೂರು ಸಂಚಾರ ಪೊಲೀಸರು ನನ್ನನ್ನೇ ಆ ಕೆಲಸಕ್ಕೆ ಬಳಸಿಕೊಳ್ಳಲು ಮುಂದಾಗಿರುವುದು ನಿಜಕ್ಕೂ ತುಂಬಾ ಖುಷಿ ತಂದಿದೆ' ಎಂದು ಹೆಗ್ಗಡೆ ಹರ್ಷ ವ್ಯಕ್ತಪಡಿಸಿದ್ದಾರೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka state will soon see a new but familiar face explaining the essentials of road safety rules to its citizens, if talks currently under way go as planned.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more