ಮಕ್ಕಳೇ ಸಂಸ್ಕಾರ ಕಲಿಯಿರಿ: ಶೋಭಾ ಮೇಡಂ

our-children-should-learn-values-shobha-karandlaje
ಬೆಂಗಳೂರು, ಆ.29: ಹಾದಿ ತಪ್ಪುತ್ತಿರುವ ಇಂದಿನ ಮಕ್ಕಳ ಬಗ್ಗೆ ಬೇಜಾರು ಮಾಡಿಕೊಂಡಿರುವ ಸಚಿವೆ ಶೋಭಾ ಕರಂದ್ಲಾಜೆ ಅವರು 'ಮಕ್ಕಳೇ! ಒಂದಷ್ಟು ಸಂಸ್ಕಾರ ಕಲಿಯಿರಪ್ಪಾ' ಎಂದು ನಾಲ್ಕು ಬುದ್ಧಿ ಮಾತುಗಳನ್ನು ಹೇಳಿದ್ದಾರೆ.

ಮತ್ತು, ಮುಂದಿನ ಪೀಳಿಗೆಗೆ ನಮ್ಮ ಸಂಸ್ಕಾರವನ್ನು ಕಲಿಸುವ ಜವಾಬ್ದಾರಿಯನ್ನು ಮಹಿಳಾ ಸಂಘಟನೆಗಳು ಹೊರಬೇಕು ಎಂದೂ ಇಂಧನ ಸಚಿವೆ ಆದೇಶಿಸಿದ್ದಾರೆ. ಸಂದರ್ಭ: ರವೀಂದ್ರ ಕಲಾಕ್ಷೇತ್ರದಲ್ಲಿ ಮಹಿಳಾ ಸಂಘದ ಸಾಂಸ್ಕೃತಿಕ ಮೇಳವನ್ನು ಮಂಗಳವಾರ ಉದ್ಘಾಟಿಸಿದ ವೇಳೆ.
ದುರ್ಗಾಪೂಜೆ ಮತ್ತು ಇನ್ನಿತರ ಪೂಜೆಗಳಿಗೆ ಹೋಗುವಾಗ ಮಹಿಳೆಯರು ತಮ್ಮ ಮನೆ ಮಕ್ಕಳನ್ನು ಕರೆದುಕೊಂಡು ಹೋಗಿ ಸಂಸ್ಕಾರ ಕಲಿಸಬೇಕು ಎಂಬುದು ಅವರ ಸಂದರ್ಭೋಚಿತ ಸಲಹೆ.

'ಇಂದಿನ ದಿನಮಾನದಲ್ಲಿ ಯುವ ಪೀಳಿಗೆಯಲ್ಲಿ ಸಂಸ್ಕಾರ, ಮೌಲ್ಯಗಳು ನಶಿಸುತ್ತಿವೆ. ಹೈಸ್ಕೂಲು ವಿದ್ಯಾರ್ಥಿಗಳೇ ಹುಕ್ಕ, ಗಾಂಜಾ ಸೇವಿಸಿ ಸಿಕ್ಕಿಬೀಳುವ ಪ್ರಕರಣಗಳು ದಿನಾ ಪತ್ರಿಕೆಯಲ್ಲಿ ವರದಿಯಾಗುತ್ತಿವೆ' ಎಂದು ಅವರು ನೊಂದು ನುಡಿದರು.

'ಹಿಂದಿನ ಕಾಲದಲ್ಲಿ ದೇವರ ಭಯವಾದರೂ ಇತ್ತು. ನಂತರದ ಬ್ರಿಟಿಷರ ಕಾಲದಲ್ಲಿ ಕಾನೂನುಗಳ ಭಯವಿದ್ದುದರಿಂದ ಜನ ತಪ್ಪು ಮಾಡಲು ಹೆದರುತ್ತಿದ್ದರು. ಆದರೆ, ಇಂದಿನ ಕಾಲದಲ್ಲಿ ಆ ಕಡೆ ದೇವರ ಭಯವೂ ಇಲ್ಲ ಈ ಕಡೆ ಕಾನೂನಿನ ಭಯವೂ ಇಲ್ಲವಾಗಿದೆ' ಎಂದು ಮೇಡಂ ಶೋಭಾ ಅವರು ವಿಷಾದಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+