ವಿಧವೆ ಮೇಲೆ ಅತ್ಯಾಚಾರ ಎಸೆಗಿದ ಆಸಿಡ್ ಆಚಾರಿ

ಕಿದಿಯೂರು ಗ್ರಾಮದ ಬೂದೇಶ ಎಂಬುವವರನ್ನು ಮದುವೆಯಾಗಿದ್ದ ಯಮುನಾ ಎಂಬ ಯುವತಿಯೇ ಈ ದುರಂತಕ್ಕೆ ಈಡಾದವಳು. ಎರಡು ವರ್ಷಗಳ ಹಿಂದೆ ಬೂದೇಶ ಮೃತಪಟ್ಟಿದ್ದ. ಗಂಡನನ್ನು ಕಳೆದುಕೊಂಡ ಯಮುನಾ ತನ್ನ ತಾಯಿ ಮನೆಗೆ ಬಂದು ವಾಸವಾಗಿದ್ದಳು.
ಕಪ್ಪೆಟ್ಟುಪಾದೆ ಎಂಬಲ್ಲಿ ತಾಯಿ ಜೊತೆ ವಾಸವಾಗಿದ್ದ ಯಮುನಾ ಅವರ ಮೇಲೆ ಸುಮಾರು 8 ತಿಂಗಳ ಹಿಂದೆ ನೆರಮನೆಯವ ಲೋಕೇಶ್ ಆಚಾರಿ ಕಣ್ಣು ಹಾಕಿದ್ದ. ಮನೆಯಲ್ಲಿ ಯಮುನಾ ಒಂಟಿಯಾಗಿದ್ದ ಸಂದರ್ಭ ನೋಡಿಕೊಂಡು ವೀಪರೀತ ಪಾನಮತ್ತನಾಗಿ ಮನೆಗೆ ನುಗ್ಗಿದ್ದಾನೆ.
ಆಕೆ ಎಷ್ಟೇ ಪ್ರತಿರೋಧ ವ್ಯಕ್ತಪಡಿಸಿದರೂ ಲೆಕ್ಕಿಸಿದೆ ಅತ್ಯಾಚಾರ ಎಸೆಗಿದ್ದಾನೆ. ನಂತರ ಅತ್ಯಾಚಾರ ಮಾಡಿದ ಬಗ್ಗೆ ಯಾರಲ್ಲಾದರೂ ತಿಳಿಸಿದಲ್ಲಿ ನಿನ್ನ ಮುಖಕ್ಕೆ ಆಸಿಡ್ ಎರಚಿ ಸಾಯಿಸುತ್ತೇನೆ ಮತ್ತು ನಿನ್ನ ಮನೆಯವರನ್ನು ಕೊಂದು ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.
ಅತ್ಯಾಚಾರದ ವಿಷಯ ಯಾರಲ್ಲೂ ಹೇಳದೆ ನೋವು ನುಂಗಿಕೊಂಡಿದ್ದ ಯಮುನಾಳಿಗೆ ತನ್ನ ಹೊಟ್ಟೆಯಲ್ಲಿ ಬೆಳೆಯುತ್ತಿದ್ದ ಪಾಪದ ಕೂಸನ್ನು ತೆಗೆಸಲು ಮನಸ್ಸು ಬಾರದೆ ಹಾಗೆ ಉಳಿಸಿಕೊಂಡಿದ್ದಾಳೆ. ಯಮುನಾಳ ಗರ್ಭದಲ್ಲಿ ತನ್ನ ಮಗು ಬೆಳೆಯುತ್ತಿದೆ ಎಂಬುದನ್ನು ತಿಳಿದ ಲೋಕೇಶ್, ಏನೋ ಕುಡಿದ ಮತ್ತಿನಲ್ಲಿ ಹಾಗೆ ಮಾಡಿಬಿಟ್ಟೆ. ಮಗುವನ್ನು ಹೆತ್ತುಕೊಡು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾನೆ.
ಇದೇ ಭರವಸೆ ಮೇರೆಗೆ ಆಕೆ ಕೂಡಾ ಎಂಟು ತಿಂಗಳು ಗರ್ಭ ಹೊತ್ತುಕೊಂಡು ನೋವು ನುಂಗಿಕೊಂಡಿದ್ದಾಳೆ. ಆದರೆ, ಯಮುನಾಳಿಗೆ ಅವಧಿಗೆ ಮುಂಚಿತವಾಗಿ ಹೇರಿಗೆ ನೋವು ಕಾಣಿಸಿಕೊಂಡು ಮಣಿಪಾಲ ಆಸ್ಪತ್ರೆಗೆ ಸೇರಿಸಲಾಗಿದೆ. ಯಮುನಾಳ ದುರದೃಷ್ಟಕ್ಕೆ ಮಗು ಸತ್ತು ಹುಟ್ಟಿದೆ.
ಇತ್ತ ಈ ವಿಷಯ ಹೇಗೊ ತಿಳಿದುಕೊಂಡ ಆಚಾರಿ ಪರಾರಿಯಾಗಿದ್ದಾನೆ. ಲೋಕೇಶ್ ಆಚಾರಿ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಯಮುನಾ ನೋವಿನಿಂದ ಮಲ್ಪೆ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಮಲ್ಪೆ ಠಾಣಾಧಿಕಾರಿಗಳು ಅಪರಾಧ ಕ್ರಮಾಂಕ 128/2012 ಕಲಂ 506, 448, 376 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ
ಯಮುನಾ ನೀಡಿದ ದೂರಿನ ಪ್ರತಿ ಇಲ್ಲಿದೆ: ಫಿರ್ಯಾದಿ ಯಮುನಾ ಗಂಡ: ದಿ. ಬೂದೇಶ ವಾಸ: ಕಪ್ಪೆಟ್ಟು ಪಾದೆ, ಅಂಬಲಪಾಡಿ ಅಂಚೆ, ಕಿದಿಯೂರು ಗ್ರಾಮ ಇವರ ಗಂಡ ಬೂದೇಶ ಎಂಬವರು 2 ವರ್ಷಗಳ ಹಿಂದೆ ಮೃತಪಟ್ಟಿದ್ದು ತನ್ನ ತಾಯಿಯೊಂದಿಗೆ ಕಿದಿಯೂರು ಗ್ರಾಮದ ಕಪ್ಪೆಟ್ಟುಪಾದೆ ಎಂಬಲ್ಲಿ ವಾಸಮಾಡಿಕೊಂಡಿದ್ದು, ಸುಮಾರು 8 ತಿಂಗಳ ಹಿಂದೆ ಹಗಲು ಹೊತ್ತಿನಲ್ಲಿ ಯಮುನಾರವರು ಒಂಟಿಯಾಗಿ ಮನೆಯಲ್ಲಿದ್ದ ಸಮಯ ಆರೋಪಿ ನೆರಮನೆಯ ಲೋಕೇಶ್ ಆಚಾರಿ ಎಂಬಾತನು ವಿಪರೀತ ಪಾನಮತ್ತನಾಗಿ ಇವರ ಮನೆಗೆ ಅಕ್ರಮ ಪ್ರವೇಶ ಮಾಡಿ ಇವರನ್ನು ಎಳೆದಾಡಿ ಅತ್ಯಾಚಾರವೆಸಗಿರುತ್ತಾನೆ. ಅತ್ಯಾಚಾರ ಮಾಡಿದ ಬಗ್ಗೆ ಯಾರಲ್ಲಾದರೂ ತಿಳಿಸಿದಲ್ಲಿ ನಿನ್ನ ಮುಖಕ್ಕೆ ಆಸಿಡ್ ಎರಚಿ ಸಾಯಿಸುತ್ತೇನೆ ಮತ್ತು ನಿನ್ನ ಮನೆಯವರನ್ನು ಕೊಂದು ಹಾಕುತ್ತೇನೆ ಎಂದು ಬೆದರಿಕೆ ಹಾಕಿರುವುದಾಗಿದೆ.
ಪಿರ್ಯಾದಿಯು ಆರೋಪಿ ಲೊಕೇಶ್ ಆಚಾರಿಯು ಹಾಕಿದ ಬೆದರಿಕೆಯಿಂದಲೂ ಹಾಗೂ ಮರ್ಯಾದೆಗೆ ಅಂಜಿ ವಿಷಯವನ್ನು ಮುಚ್ಚಿಟ್ಟಿದ್ದು ಅತ್ಯಾಚಾರ ಕ್ಕೊಳಗಾದ ಯಮುನಾರವರು 8 ತಿಂಗಳ ಗರ್ಭವತಿಯಾಗಿದ್ದು ನೋವು ಕಾಣಿಸಿಕೊಂಡಿದ್ದರಿಂದ ಉಡುಪಿಯ ಹೈಟೆಕ್ ಆಸ್ಪತ್ರೆಗೆ ದಾಖಲಿಸಿದ್ದು ವೈದ್ಯರು ಪರೀಕ್ಷಿಸಿ ಮಗುವು ಗರ್ಭದಲ್ಲೇ ಮೃತಪಟ್ಟಿರುವುದಾಗಿ ತಿಳಿಸಿ ಮಣಿಪಾಲ ಆಸ್ಪತ್ರೆಗೆ ಸೂಚಿಸಿದ ಮೇರೆಗೆ ಮಣಿಪಾಲದ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಆರೋಪಿ ಲೋಕೇಶ್ ಆಚಾರಿ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎನ್ನುವುದಾಗಿ ಯಮುನಾರವರು ಮಲ್ಪೆ ಠಾಣೆಗೆ ದೂರು ನೀಡಿದ್ದು ಠಾಣಾ ಅಪರಾಧ ಕ್ರಮಾಂಕ 128/2012 ಕಲಂ 506, 448, 376 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ,












Click it and Unblock the Notifications