ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಅಧಿಕಾರಿಗೆ ಪ್ರಧಾನಿಗಿಂತ 10ಪಟ್ಟು ಹೆಚ್ಚು ಸಂಬಳ

By Srinath
|
Google Oneindia Kannada News

ನವದೆಹಲಿ, ಆ. 24: ಹೌದು ಈ ಅಧಿಕಾರಿ ಪ್ರಧಾನ ಮಂತ್ರಿಗಿಂತ 10 ಪಟ್ಟು ಹೆಚ್ಚು ಸಂಬಳ ಪಡೆಯುತ್ತಾರೆ! ಮತ್ತು ಅದಕ್ಕೆ ಅರ್ಹರೂ, ವಿಶ್ವಾಸಾರ್ಹರೂ ಆಗಿದ್ದಾರೆ. ಇವರಿಂದಾಗಿ ಆ ಹುದ್ದೆಯ ಗೌರವವೇ ಹೆಚ್ಚಾಗಿದೆ. ಅಷ್ಟೇ ಅಲ್ಲ. ಅವರ ಮೇಲೆ ಭಾರ ಹಾಕಿ ನಾವು ಸುರಕ್ಷಿತವಾಗಿ ಇರಬಹುದಾಗಿದೆ. ಇಂತಹವರೊಬ್ಬರಿದ್ದಾರಲ್ಲಾ ಎಂಬುದೇ ನಮ್ಮ ಹೆಮ್ಮೆ.

ಯಾರಪ್ಪಾ ಅಂತಹ ಅಧಿಕಾರಿ ಅಂದರೆ ಅವರೇ ನಮ್ಮ ರಾಷ್ಟ್ರೀಯ ಗುಪ್ತಚರ ಸಂಸ್ಥೆಯ ಮುಖ್ಯಸ್ಥ ಪಿ. ರಘು ರಾಮನ್. (ಈ ನ್ಯಾಟ್ ಗ್ರಿಡ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ- National Intelligence Grid-NATGRID)

employnt-natgrid-chief-raghu-pay-10-times-more-pm-singh

ಇವರು ತಿಂಗಳಿಗೆ 10 ಲಕ್ಷ ರೂ. ಜತೆಗೆ ಅದೂ ಇದೂ ಅಂತ ಪಡೆಯುತ್ತಾರೆ. (ಅದೂ ಇದೂ ಅಂದರೆ ಅದೇ ಮಾಮೂಲಿನಾ ಎಂದು ಮರು ಪ್ರಶ್ನಿಸಬೇಡಿ!) ಇವರ ಸಂಬಳ ಸವಲತ್ತು ಪ್ರಧಾನಿ ಮನಮೋಹನ್ ಸಿಂಗ್ ಗಿಂತ ಹತ್ತಾರು ಪಟ್ಟು ಹೆಚ್ಚು. ಏನು ಪ್ರಧಾನಿಗಿಂತ ಹೆಚ್ಚು ಸಂಬಳ ಪಡೆಯುವ ಅಧಿಕಾರಿಯೊಬ್ಬರು ನಮ್ಮ ಮಧ್ಯೆ ಇದ್ದಾರಾ? ಎಂದು ಪ್ರಶ್ನಿಸಬೇಡಿ. ಏಕೆಂದರೆ ರಾಷ್ಟ್ರಪತಿ ಪ್ರಣಬ್ ದಾ ನಂತರ ಅತಿ ಹೆಚ್ಚು ಸಂಬಳ ಪಡೆಯುತ್ತಿರುವವರು ಇವರೇ.

ಅಂದಹಾಗೆ ಇವರು ನ್ಯಾಟ್ ಗ್ರಿಡ್ ಚೀಫ್ ಆಗಿ ಅಧಿಕಾರ ಸ್ವೀಕರಿಸಿದ 2009ರ ಡಿಸೆಂಬರ್ ತಿಂಗಳಿನಿಂದಲೂ 10 ಲಕ್ಷ ರೂಪಾಯಿಯ ಸಂಬಳ ಪಡೆಯುತ್ತಿದ್ದಾರೆ. ಅದಕ್ಕೂ ಮುನ್ನ ಅವರು ಮಹೀಂದ್ರಾ ಲ್ಯಾಂಡ್ ಸಿಸ್ಟಮ್ಸ್ ಸಂಸ್ಥೆಯ ಸಿಇಒ ಆಗಿದ್ದರು. ಕುತೂಹಲದ ಸಂಗತಿಯೆಂದರೆ ಈಗೆಲ್ಲಾ ಕಾಂಟ್ರಾಕ್ಟ್ ಉದ್ಯೋಗದ ಯುಗ. ಹಾಗಾಗಿ, ಇವರು ಮೂರು ವರ್ಷಗಳ ಅವಧಿಗೆ ಕಾಂಟ್ರಾಕ್ಟ್ ಮೇಲೆ ನೇಮಕಗೊಂಡಿದ್ದಾರೆ.

ರಘು ರಾಮನ್ ಅವರು ಪಡೆಯುವ ಇತರೆ ಸವಲತ್ತುಗಳೆಂದರೆ ಭಾರತ ಸರಕಾರದಲ್ಲಿ ಯಾವುದೇ ಅಧಿಕಾರಿ ಪಡೆಯಬಹುದಾದ ಉನ್ನತ ವರ್ಗದ ಸಾರಿಗೆ, ವಸತಿ ಸವಲತ್ತನ್ನು ಪಡೆಯಬಹುದು. ಜತೆಗೆ, ಕಾರು, 1.25 ಲಕ್ಷ ರುಪಾಯಿಯ ಲ್ಯಾಪ್ ಟಾಪ್, ಬ್ಲಾಕ್ ಬೆರ್ರಿ ಫೋನ್, ವಗೈರೆ ವಗೈರೆ... ಆದರೆ ಗಮನಿಸಿ, ಸರಕಾರದ ದುಡ್ಡು ಎಂದು ಸಿಕ್ಕಿದ್ದನ್ನೆಲ್ಲ ಇವರು ಬಳಸುತ್ತಿಲ್ಲ. ತೀರಾ ಅಗತ್ಯವಾಗಿ ಬೇಕಾದಷ್ಟನ್ನೇ ಪಡೆಯುತ್ತಿದ್ದಾರೆ.

ಇನ್ನು, ನಮ್ಮ ಪ್ರಧಾನಿ ಮನಮೋಹನ್ ಸಿಂಗ್ ಸಾಹೇಬರ ಸಂಬಳ ತಿಂಗಳಿಗೆ 1.6 ಲಕ್ಷ ರುಪಾಯಿಯಷ್ಟೇ. ಅದೇ ಹೆಚ್ಚು ಎಂದು ಮೂಗೆಳೆಯಬೇಡಿ. ಏಕೆಂದರೆ, ರಾಜಕೀಯ ಏನೇ ಇರಲಿ, ಇವರು ಖ್ಯಾತ ಅರ್ಥಶಾಸ್ತ್ರಜ್ಞರು ಎಂಬುದನ್ನು ಮರೆಯಬೇಡಿ. ನಮ್ಮ ದೇಶದ ಅರ್ಥ ವ್ಯವಸ್ಥೆಗೆ ಹೊಸ ದಿಕ್ಕು ನೀಡಿದ ಶ್ರೇಯಸ್ಸು ಇವರಿಗೇ ಸಲ್ಲಬೇಕು.

ಉಳಿದಂತೆ ಅತಿ ಹೆಚ್ಚು ಸಂಬಳದಾರರು ಅಂದರೆ ಪ್ರಧಾನಿ ಕ್ಯಾಬಿನೆಟ್ ಸೆಕ್ರೆಟರಿ (ಅಜಿತ್ ಸೇನ್) 90 ಸಾವಿರ, ಪ್ರಧಾನಿಯ ಪ್ರಿನ್ಸಿಪಾಲ್ ಸೆಕ್ರೆಟರಿ (ಪಿ. ಚಟರ್ಜಿ) 1.1 ಲಕ್ಷ ರೂ. ಸಂಬಳ ಪಡೆಯುತ್ತಾರೆ.

English summary
Employment NATGRID chief Raghu Raman salarry is 10 times more PM Manamohan Singh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X