ಕುಕ್ಕೆ ದೇಗುಲಕ್ಕೆ ವಿಜಯ್ ಮಲ್ಯ ಸ್ವರ್ಣದ್ವಾರ ಸಮರ್ಪಣೆ

Golden door to Kukke Temple by Vijay Mallya
ಬೆಂಗಳೂರು, ಆ 23: ಮುಜರಾಯಿ ವ್ಯಾಪ್ತಿಗೆ ಬರುವ ರಾಜ್ಯದ ನಂಬರ್ ಒನ್ ಶ್ರೀಮಂತ ದೇವಾಲಯ ಕುಕ್ಕೆ ಸುಬ್ರಮಣ್ಯ ದೇವಾಲಯಕ್ಕೆ ಉದ್ಯಮಿ ವಿಜಯ್ ಮಲ್ಯ ಗುರುವಾರ (ಆ 23) ಚಿನ್ನದ ಬಾಗಿಲನ್ನು ಸಮರ್ಪಿಸಲಿದ್ದಾರೆ.

ಯುಬಿ ಗ್ರೂಪಿನ ಮಾಲೀಕರಾದ ವಿಜಯ್ ಮಲ್ಯ ಕಳೆದ ಎಪ್ರಿಲ್ ತಿಂಗಳಲ್ಲಿ ದೇವಾಲಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಚಿನ್ನದ ಬಾಗಿಲನ್ನು ದೇವರಿಗೆ ಅರ್ಪಿಸುವುದಾಗಿ ಸಂಕಲ್ಪ ಮಾಡಿದ್ದರು.

ಸುಮಾರು 80ಲಕ್ಷ ರೂಪಾಯಿ ವೆಚ್ಚದಲ್ಲಿ ದೇವಾಲಯದ ಗರ್ಭಗುಡಿಗೆ ಚಿನ್ನದಬಾಗಿಲು ಸಿದ್ದವಾಗಿದ್ದು ಇಂದು ನಾಲ್ಕು ಗಂಟೆ ಸುಮಾರಿಗೆ ದೇವರಿಗೆ ಸಮರ್ಪಣೆಯಾಗಲಿದೆ.

ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಸುಧಾಕರ ಡೊಂಗ್ರೆ ಅವರು ಎರಡೂವರೆ ತಿಂಗಳಿನಿಂದ ಚಿನ್ನದ ಬಾಗಿಲಿನ ಕೆಲಸವನ್ನು ಆರಂಭಸಿದ್ದರು.

ಈ ಚಿನ್ನದ ಬಾಗಿಲನ್ನು ದೇವಾಲಯದ ಗರ್ಭಗುಡಿಯ ಹೊರಗಿನ ಮಂಟಪದ ಬಾಗಿಲಿಗೆ ಹೊದಿಸಲಾಗುವುದು.

ಎಪ್ರಿಲ್ ತಿಂಗಳಲ್ಲಿ ವಿಜಯ್ ಮಲ್ಯ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದಾಗ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ ಹೆಸರಾಂತ ದೇಗುಲಕ್ಕೆ ಭೇಟಿ ನೀಡಿದ್ದರು.

ಸುಮಾರು ಎರಡೂವರೆ ಕೆಜಿ ಚಿನ್ನದಲ್ಲಿ ಈ ಸ್ವರ್ಣ ಬಾಗಿಲು ನಿರ್ಮಾಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+