Get Updates
Get notified of breaking news, exclusive insights, and must-see stories!

ಸಹಪಾಠಿ ಜತೆ ಎಂಎಂಎಸ್: ಯುವಕನ ಆತ್ಮಹತ್ಯೆ

suicide-goa-youth-kills-self-after-mms-clip-goes-viral
ಪಣಜಿ, ಆ.22: ಸಹಪಾಠಿ ಜತೆ ಸರಸವಾಡುತ್ತಿರುವ ದೃಶ್ಯಾವಳಿ ಎಂಎಂಎಸ್ ಮೂಲಕ ಸಾರ್ವಜನಿಕವಾಗುತ್ತಿದ್ದಂತೆ ಭಯಗೊಂಡ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಉತ್ತರ ಗೋವಾದ ಸತ್ತಾರಿ ತಾಲೂಕಿನ ಮೋರ್ಲೆಮ್ ಗ್ರಾಮದ ಅರ್ಜುನ್ ಮಾಯಂಕರ್ (21) ತನ್ನ ಸಹಪಾಠಿಯ ಜತೆ ಒಂದಷ್ಟು ಸರಸವಾಡಿದ್ದಾನೆ. ಅದು ಮೊಬೈಲಿನಲ್ಲಿ ಚಿತ್ರೀಕರಣಗೊಂಡು ಎಂಎಂಎಸ್ ಮೂಲಕ ವ್ಯಾಪಕವಾಗಿ ಸರಿದಾಡಿದೆ.

ಹೀಗೆ ತನ್ನ ಬಂಡವಾಳ ಬಯಲಾಗುತ್ತಿದ್ದಂತೆ ಸಹಪಾಠಿ ಮನೆಯವರು ತನ್ನ ಮನೆಯವರಿಗೆ ಎಲ್ಲಿ ಕೆಡುಕುಂಟುಮಾಡುತ್ತಾರೋ ಎಂದು ಅರ್ಜುನ್ ದಿಗಿಲಿಗೆ ಬಿದ್ದಿದ್ದಾನೆ. ಅದರಲ್ಲೂ ತನ್ನ ಸೋದರಿಗೆ ಏನು ಸಂಕಷ್ಟ ಎದುರಾಗುವುದೋ ಎಂಬುದು ಅವನನ್ನು ತೀವವ್ರವಾಗಿ ಕಾಡಿದೆ.

ಇದಕ್ಕೆಲ್ಲ ತನ್ನ ಸಾವೇ ಮುಕ್ತಿ ಕರುಣಿಸಲಿದೆ ಎಂದು ಬಗೆದ ಅರ್ಜುನ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮರಣ ಪತ್ರ ಬರೆದಿಟ್ಟು ಸತ್ತಿರುವ ಅರ್ಜುನ್, ತನ್ನ ಗೆಳತಿಯ ಮನೆಯವರು ಎಂಎಂಎಸ್ ಬಗ್ಗೆ ತನ್ನನ್ನು ಬೆದರಿಸುತ್ತಿದ್ದರು ಎಂದಿದ್ದಾನೆ.

ಅಂದಹಾಗೆ ಖುದ್ದು ಅರ್ಜುನನೇ ಸರಸದ ವಿಡಿಯೋವನ್ನು ತನ್ನ ಮೊಬೈಲಿನಲ್ಲಿ ತೆಗೆದಿದ್ದ. ವಿಡಿಯೋವನ್ನು ನೋಡಿದ ಎರಡೂ ಕಡೆಯವರು ಇಬ್ಬರಿಗೂ ಪರಸ್ಪರ ಮದುವೆ ಮಾಡುವ ಆಲೋಚನೆ ಮಾಡುತ್ತಾರೆ. ಈ ಸಂಬಂಧ ಹುಡುಗ-ಹುಡುಗಿ ಮದುವೆಗೆ ಒಪ್ಪಿ, ಸ್ಥಳೀಯ ನೋಟರಿ ಬಳಿ ನೋಂದಣಿಯನ್ನೂ ಮಾಡಿಸುತ್ತಾರೆ. ಆದರೆ ಅದು ಬರಕತ್ತಾಗುವುದಿಲ್ಲ.

ಹುಡುಗಿಯ ತಾಯಿ ಮತ್ತು ಅವಳ ಮೂವರು ಸೋದರರು ಅರ್ಜುನನಿಗೆ ಬೆದರಿಕೆ ಹಾಕತೊಡಗುತ್ತಾರೆ. ಅಷ್ಟೇ ಅಲ್ಲ, ಅವನ ಸೋದರಿಯ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಾಗಿಯೂ ಬೆದರಿಸುತ್ತಾರೆ. ಇದನ್ನೆಲ್ಲ ಅರ್ಜುನ ಸಾವಿನ ಕದ ತಟ್ಟುವ ಮುನ್ನ ತನ್ನ 2 ಪುಟಗಳ ಸಾವಿನ ಪತ್ರದಲ್ಲಿ ಗೀಚಿದ್ದಾನೆ. ಪೊಲೀಸರು ಈಗ ಹುಡುಗಿಯ ಮನೆಯವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+