• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚುನಾವಣೆ ಕಾಲೇ ಬಿಜೆಪಿಗೆ 50ಲಕ್ಷ ಸದಸ್ಯರು ಬೇಕಂತೆ

By Srinath
|
ಬೆಂಗಳೂರು, ಆ.21: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯಗಳಿಸುವ ಕನಸು ಕಾಣುತ್ತಿರುವ ರಾಜ್ಯ ಬಿಜೆಪಿ ಪಕ್ಷವು ಈಗಿನಿಂದಲೇ ಪಕ್ಷದ ಸದಸ್ಯ ಸಂಖ್ಯೆ ಹೆಚ್ಚಿಸಲು ಉದ್ದೇಶಿಸಿದ್ದು, ಚುನಾವಣೆ ವೇಳೆಗೆ ಕನಿಷ್ಠ 50 ಲಕ್ಷ ಸದಸ್ಯರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪಕ್ಷದ ನಾಯಕರು ಮುಂದಾಗಿದ್ದಾರೆ.

ಸದ್ದಿಲ್ಲದೆ ಚುನಾವಣೆ ತಯಾರಿ: ಸೆಪ್ಟೆಂಬರ್ 9 ರಿಂದ 16 ರವರೆಗೆ ನಡೆಯಲಿರುವ ಈ ಸದಸ್ಯತ್ವ ಆಂದೋಲನವು ಪಕ್ಷದ ರಾಷ್ಟ್ರೀಯ ಮಟ್ಟದ ಸಾಂಸ್ಥಿಕ ಚುನಾವಣೆಗಳಿಗೆ ಪೂರ್ವ ತಯಾರಿಯಾಗಿ ನಡೆಯಲಿದೆಯಾದರೂ ರಾಜ್ಯ ಬಿಜೆಪಿ ಅವಧಿ ಮುನ್ನ ಚುನಾವಣೆಗೆ ಸದ್ದಿಲ್ಲದೆ ತಯಾರಿ ನಡೆಸುತ್ತಿದೆಯಾ ಎನಿಸುತ್ತಿದೆ. ಇದಕ್ಕೆ ಇಂಬು ನೀಡುವಂತೆ ತಂಡೋಪಾದಿಯಾಗಿ ಬರ ಅಧ್ಯಯನಕ್ಕೆಂದು ಹೊರಟು ಮತದಾರನ ನಾಡಿ ಮಿಡಿತ ಅರಿಯುವ ಪ್ರಯುತ್ನವೂ ನಡೆದಿರುವುದು ಗಮನಾರ್ಹವಾಗಿದೆ.

ಸದ್ಯಸ್ಯತ್ವ ನೋಂದಣಿ ಕಾರ್ಯಕ್ಕೆ ಸೆಪ್ಟೆಂಬರ್ ಮೊದಲ ವಾರದಲ್ಲಿ ಚಾಲನೆ ದೊರೆಯಲಿದೆ. ನಿನ್ನೆ ಪಕ್ಷದ ಮಲ್ಲೇಶ್ವರಂ ಕಚೇರಿಯಲ್ಲಿ ನಡೆದ ಪಕ್ಷದ ನಾನಾ ಪದಾಧಿಕಾರಿಗಳ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಸರಣಿ ಚಟುವಟಿಕೆಗಳು: ಸದ್ಯಸ್ಯತ್ವ ನೋಂದಣಿ ಕಾರ್ಯ ಸಾಧಿಸಲು ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲು ಭಾರತೀಯ ಜನತಾ ಪಕ್ಷವು ಸಜ್ಜಾಗಿದೆ. ಜಿಲ್ಲಾ ಮಟ್ಟದ ಕಾರ್ಯಾಗಾರಗಳು ಆಗಸ್ಟ್ 28-29 ನಡೆಯಲಿವೆ. ಹಾಗೆಯೇ ತಾಲೂಕು ಮಟ್ಟದ ಕಾರ್ಯಾಗಾರಗಳು ಸೆಪ್ಟೆಂಬರ್ 3-4 ನಡೆಯಲಿವೆ. ಈ ಮಧ್ಯೆ, ರಾಜ್ಯ ಬಿಜೆಪಿ ರೈತ ಮೋರ್ಚಾವು ಆಗಸ್ಟ್ 27ರಂದು ರಸಗೊಬ್ಬರ ಬೆಲೆಯೇರಿಕೆಯನ್ನು ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ.

ಇದರ ಜತೆಜತೆಗೆ ಪಕ್ಷವು ಇನ್ನೂ ಅನೇಕ ಸಂಘಟನಾ ಚಟುವಟಿಕೆಗಳನ್ನೂ ಹಮ್ಮಿಕೊಂಡಿದೆ.
* ರಾಜ್ಯ ಬಿಜೆಪಿ ಕಾರ್ಯಕಾರಿ ಸಭೆ ಬೆಂಗಳೂರಿನಲ್ಲಿ ಸೆ. 8
* ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಸಭೆ ಮುರುಡೇಶ್ವರದಲ್ಲಿ ಆಗಸ್ಟ್ 25-26
* ರಾಜ್ಯ ಬಿಜೆಪಿ ಯುವ ಮೋರ್ಚಾ ಸಭೆ ಬೆಳಗಾವಿಯಲ್ಲಿ ಆಗಸ್ಟ್ 25-26

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Assembly elections BJP Membership drive Sept 9 to 16. Setting its eyes on the next Assembly elections, the Bharatiya Janata Party has set a target of enrolling 50 lakh members during the weeklong membership drive in September.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more