• search

'ನಂದಿನಿ ಹಾಲಲ್ಲಿ ವಿಷ' ಸುಳ್ಳು ಎಸ್ ಎಂಎಸ್ ದಾಳಿ

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts
  Nandini Milk
  ಮಂಗಳೂರು, ಆ.20: ಸೋಮವಾರ (ಆ.20) ಸರಬರಾಜಾದ ಕೆಎಂಎಫ್ ನಂದಿನಿ ಹಾಲಿನಲ್ಲಿ ವಿಷ ಬೆರೆಸಲಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ್ದು, ಹಾಸನ, ಮಂಗಳೂರು ಪ್ರದೇಶದಲ್ಲಿ ಜನತೆ ಭಯಭೀತರಾಗಿದ್ದಾರೆ.

  ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಂಗಳೂರು ಘಟಕದ ಮುಖ್ಯಸ್ಥ ರಾಜೀವ್ ಶೆಟ್ಟಿ, 'ನಂದಿನಿ ಹಾಲು ಪರಿಶುದ್ಧವಾಗಿದ್ದು, ಯಾವುದೇ ಕಲಬೆರೆಕೆ, ವಿಷ ದ್ರಾವಣ ಸೇರಿಲ್ಲ. ದಯವಿಟ್ಟು ಸುಳ್ಳು ಸುದ್ದಿಗಳನ್ನು ನಂಬಬೇಡಿ' ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

  ಹಾಲು ಸರಬರಾಜಾದರೂ ಮಾರಾಟವಾಗದೆ ಲೀಟರ್ ಗಟ್ಟಲೇ ಹಾಲಿನ ಪ್ಯಾಕೇಟ್ ಗಳು ಅಂಗಡಿ, ಮಳಿಗೆಗಳಲ್ಲಿ ಹಾಗೇ ಉಳಿದಿದೆ. ಮಂಗಳೂರಿನ ಎಲ್ಲೆಡೆ ಈ ಸುದ್ದಿ ಹಬ್ಬುತ್ತಿದೆ, ಇದು ಖಾಸಗಿ ಸಂಸ್ಥೆಗಳ ಹುನ್ನಾರ ಎಂದು ಕೆಎಂಎಫ್ ಸಂಸ್ಥೆ ಅಧಿಕಾರಿಗಳು ದೂರಿದ್ದಾರೆ.

  ನಂದಿನಿ ಹಾಲು ವಿಷಯುಕ್ತವಾಗಿದೆ ಎಂಬ ಸುಳ್ಳು ಎಸ್ ಎಂಎಸ್ ಗಳು ಕಾಡ್ಗಿಚ್ಚಿನಂತೆ ಎಲ್ಲೆಡೆ ಹಬ್ಬುತ್ತಿದೆ. ಮಂಗಳೂರು ಮಾತ್ರವಲ್ಲದೆ, ಹಾಸನ, ಚಿಕ್ಕಮಗಳೂರು ಕಡೆಗೂ ಈ ಎಸ್ ಎಂಎಸ್ ಗಳು ಹಬ್ಬುತ್ತಿದೆ.

  ಸುಮಾರು 5 ಲಕ್ಷ ಲೀಟರ್ ಗಳಿಗೂ ಅಧಿಕ ಹಾಲು ಉತ್ಪಾದನೆ ಮಾಡುವ ಹಾಸನ ಘಟಕದಿಂದ ಚಿಕ್ಕಮಗಳೂರು, ಕೊಡಗು ಹಾಗೂ ದಕ್ಷಿಣ ಕನ್ನಡದ ಕೆಲ ಭಾಗಗಳಿಗೆ ಹಾಲು ಸರಬರಾಜಾಗುತ್ತದೆ.
  ದಕ್ಷಿಣ ಕನ್ನಡ ಜಿಲ್ಲಾ ಹಾಲು ಒಕ್ಕೂಟದ ವ್ಯಾಪ್ತಿಯ ಘಟಕಗಳಿಂದ ಪ್ರತಿ ದಿನ ಸುಮಾರು 1.97 ಲಕ್ಷ ಕೆಜಿ ಹಾಲು ಉತ್ಪಾದಿಸಲಾಗುತ್ತಿದ್ದು, 2.87 ಲಕ್ಷ ಲೀಟರ್ಸ್ ಪ್ರತಿದಿನ ಮಾರಾಟ ಮಾಡಲಾಗುತ್ತಿದೆ.

  ಮಂಗಳೂರು ಪೊಲೀಸರು ಸುಳ್ಳು ಸುದ್ದಿ ಹಬ್ಬಿಸುತ್ತಿರುವವರ ಬೆನ್ನು ಹತ್ತಿದ್ದಾರೆ. ರಾಶಿಗಟ್ಟಲೆ ಎಸ್ ಎಂಎಸ್ ಹಾಗೂ ಎಂಎಂಎಸ್ ಕಳಿಸುವುದಕ್ಕೆ 15 ದಿನಗಳ ಕಲ ಕೇಂದ್ರ ಸರ್ಕಾರ ನಿರ್ಬಂಧ ಹೇರಿದ ಬೆನ್ನಲ್ಲೇ ರಾಜ್ಯ ಸರ್ಕಾರ 10 ದಿನಗಳ ನಿಷೇಧ ಹೇರಲು ಚಿಂತನೆ ನಡೆಸಿತ್ತು.

  ಪ್ರತಿ ದಿನಕ್ಕೆ 5 ಎಸ್ ಎಂಎಸ್ ಮಾತ್ರ ಕಳಿಸಲು ಅನುಮತಿ ನೀಡಲಾಗಿತ್ತು ಇದರಿಂದ ಹಲವು ಗ್ರಾಹಕರು ಅದರಲ್ಲೂ 100,200 ಎಸ್ ಎಂಎಸ್ ಪ್ಯಾಕೇಜ್ ಹಾಕಿಸಿಕೊಂಡ ಪ್ರೀಪೇಯ್ಡ್ ಗ್ರಾಹಕರು ಭಾರಿ ಪರದಾಟ ಪಟ್ಟಿದ್ದತು,

  ಆದರೆ, ಎಸ್ ಎಂಎಸ್ ನಿರ್ಬಂಧ ರಾಜ್ಯದೆಲ್ಲೆಡೆ ಸರಿಯಾಗಿ ಜಾರಿಯಾಗದ ಕಾರಣ ಈ ರೀತಿ ಸುಳ್ಳು ಎಸ್ ಎಂಎಸ್ ಗಳನ್ನು ರಾಶಿಗಟ್ಟಲೆ ಕಳಿಸಲು ಸಾಧ್ಯವಾಗುತ್ತಿದೆ ಎಂದು ತಿಳಿದು ಬಂದಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  KMF Nandini Mangalore division president Rajeev Shetty has appealed puiblic not to believe in rumour SMS 'KMF Nandini Milk contaminated poision'. Hassan and Mangalore division service today (Aug.20 ) hit by false sms about poison milk supplied

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more