ಕಲಬೆರಕೆ ಔಷಧ: ಬಾಬಾ ಆಶ್ರಮದ ಮೇಲೆ ದಾಳಿ

ಹರಿದ್ವಾರ, ಆ.18

food-department-officials-raid-baba-ramdev-ashram
: ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ತೊಡಗಿರುವ ಯೋಗ ಗುರು ಬಾಬಾ ರಾಮದೇವ್ ಗೆ ಸೇರಿದ ದಿವ್ಯ ಯೋಗ ಆಶ್ರಮದ ಮೇಲೆ ಉತ್ತರಾಕಾಂಡ ಆಹಾರ ಇಲಾಖೆ ದಾಳಿ ನಡೆಸಿದೆ. ದಾಳಿ ಸಂದರ್ಭದಲ್ಲಿ ವಿವಿಧ ಆಯುರ್ವೇದ ಔಷಧಗಳ ಮಾದರಿಯನ್ನು ಅಧಿಕಾರಿಗಳು ಸಂಗ್ರಹಿಸಿದ್ದಾರೆ.

ಆಹಾರ ಇಲಾಖೆಯ ಅಧಿಕಾರಿಗಳು ಆಶ್ರಮದಲ್ಲಿ ಜೇನುತುಪ್ಪ, ಉಪ್ಪು, ಧಾನ್ಯಗಳ ಹಿಟ್ಟು ಮುಂತಾದ ಪರಿಕರಗಳನ್ನು ಸಂಗ್ರಹಿಸಿದ್ದಾರೆ. ಸುಮಾರು 3 ಗಂಟೆಗಳ ಕಾಲ ೀ ದಾಳಿ ನಡೆದಿದೆ.
ಈ ಮಧ್ಯೆ, ಕೇಂದ್ರ ಸರಕಾರದ ಕುಮ್ಮಕ್ಕಿನಿಂದ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ ಎಂದು ಯೋಗ ಗುರು ಬಾಬಾ ರಾಮದೇವ್ ಕಿಡಿಕಾರಿದ್ದಾರೆ.

'ಇದು ಉನ್ನತ ವರ್ಗ ಮತ್ತು ಸಾಮಾನ್ಯ ವರ್ಗದ ನಡುವಣ ಯುದ್ಧವಾಗಿದೆ. ನಾವು ಸಾಮಾನ್ಯ ವರ್ಗಕ್ಕೆ ಸೇರಿದವರು. ನಮ್ಮ ಯುದ್ಧ ಈಗಷ್ಟೇ ಆರಂಭವಾಗಿದೆ. ಕೇಂದ್ರ ಸರಕಾರಕ್ಕೆ ತಕ್ಕ ಪಾಠ ಕಲಿಸಲಾಗುವುದು' ಎಂದು ಬಾಬಾ ರಾಮದೇವ್ ಹೇಳಿದ್ದಾರೆ.

'ವಿದೇಶಿ ಕಂಪನಿಗಳ ಮೇಲೆ ಅವರು (ಕೇಂದ್ರ ಸರಕಾರ) ಯಾವತ್ತಾದರೂ ಇಂತಹ ದಾಳಿ ನಡೆಸುವ ಧೈರ್ಯ ತೋರಿದ್ದಾರಾ? ಆದರೆ ಅವರು ನನ್ನನ್ನೇ ಗುರಿಯಾಗಿಸಿಕೊಂಡಿದ್ದಾರೆ. ಬರೀ ಚಿಟಿಕೆಯಷ್ಟು ಮಾದರಿಗಳನ್ನೇಕೆ, ಬೇಕಿದ್ದರೆ ಲಾರಿಗಟ್ಟಲೆ ಔಷಧಗಳನ್ನೇ ತೆಗೆದುಕೊಂಡು ಹೋಗಲಿ' ಎಂದು ಬಾಬಾ ವ್ಯಂಗ್ಯವಾಡಿದ್ದಾರೆ.

'ಕಾಳ ಧನದ ವಿರುದ್ಧ ಮತ್ತು ಭ್ರಷ್ಟ ವ್ಯವಸ್ಥೆಯ ವಿರುದ್ಧ ನನ್ನ ಸಮರ ನಡೆದಿದೆ. ನಾವು ದೊಡ್ಡ ಮಟ್ಟದ ಆಂದೋಲನ ನಡೆಸುತ್ತಿದ್ದೇವೆ. ಹಾಗಾಗಿ, ನಮ್ಮನ್ನು ಗುರಿಯಾಗಿಸಿಕೊಂಡಿದ್ದಾರೆ' ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+