ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿಂಗಳಿಗೆ 5 ಬಾರಿ ಮಾತ್ರ ಜಗನ್ ಫೋನ್ ಮುಟ್ಬಹುದು

By Mahesh
|
Google Oneindia Kannada News

YS Jagan
ಹೈದರಾಬಾದ್, ಆ.16: ವೈಎಸ್ಆರ್ ಕಾಂಗ್ರೆಸ್ ಅಧ್ಯಕ್ಷ, ಕಡಪ ಸಂಸದ ವೈಎಸ್ ಜಗನ್ ಮೋಹನ್ ರೆಡ್ಡಿ ಅಕ್ರಮ ಆಸ್ತಿ ಸಂಪಾದನೆ ಆರೋಪ ಹೊತ್ತು ಚಂಚಲಗುಡ ಜೈಲಿನಲ್ಲಿ ಸಹ ಖೈದಿಗಳ ಜೊತೆ ಪೈಪೋಟಿ ನಡೆಸಬೇಕಾದ ಪ್ರಸಂಗ ಎದುರಾಗಿದೆ. ಆಂಧ್ರದಲ್ಲಿ ಸಾರ್ವಭೌಮನಂತೆ ಮೆರೆದ ಜಗನ್ ಗೆ ಈಗ ತನ್ನವರೊಂದಿಗೆ ಮಾತನಾಡಲು ಜೈಲು ಅಧಿಕಾರಿಗಳನ್ನು ಪರಿ ಪರಿಯಾಗಿ ಕೇಳಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತಂಡ ನಾಲ್ಕನೇ ಚಾರ್ಚ್ ಶೀಟ್ ಸಲ್ಲಿಸಿದ ಮೇಲೆ ಜಗನ್ ಅವರಿಗೆ ದಿಕ್ಕು ದೋಚದಂತಾಗಿದೆ. ಜೈಲು ಹಕ್ಕಿಗಳಿಗೆ ಫೋನ್ ಕರೆ ಸೌಲಭ್ಯ ಒದಗಿಸಿರುವ ಚಂಚಲಗುಡ ಜೈಲು ಅಧಿಕಾರಿಗಳು ಎಲ್ಲಾ ಖೈದಿಗಳಂತೆ ಜಗನ್ ಅವರ ಕರೆ ಮೇಲೂ ನಿರ್ಬಂಧ ಹೇರಿದೆ.

ಸದ್ಯಕ್ಕೆ ಲಭ್ಯವಿರುವ ಸೌಲಭ್ಯದಂತೆ ಜಗನ್ ಅವರು ತಮ್ಮ ಆಪ್ತೇಷ್ಟರಿಗೆ ತಿಂಗಳಲ್ಲಿ 5 ಬಾರಿ ಮಾತ್ರ ಕರೆ ಮಾಡಬಹುದು. ಒಟ್ಟಾರೆ 40 ರು ದರದಂತೆ 5 ನಿಮಿಷ ಅವಧಿಯ ಫೋನ್ ಕರೆ ಮಾಡಲು ಮಾತ್ರ ಅವಕಾಶ ನೀಡಲಾಗಿದೆ. ಪ್ರತಿ ತಿಂಗಳು 200 ರು ತೆತ್ತು ಆದ್ಯತೆ ಮೇರೆಗೆ ಜಗನ್ ಕರೆ ಮಾಡುವುದನ್ನು ಕಲಿಯಬೇಕಿದೆ.

ಚೆರ್ಲಪಲ್ಲಿ ಜೈಲು ಹೊರತು ಪಡಿಸಿದರೆ ಚಂಚಲಗುಡ ಜೈಲುವಾಸಿಗಳಿಗೆ ಮಾತ್ರ ಫೋನ್ ಕರೆ ಸೌಲಭ್ಯ ಲಭ್ಯವಿದೆ. 8000 ಖೈದಿಗಳ ಪೈಕಿ 1/3 ಭಾಗದಷ್ಟು ಖೈದಿಗಳು ಮಾತ್ರ ಈ ಫೋನ್ ಕರೆ ಸೌಲಭ್ಯಕ್ಕೆ ನೋಂದಯಿಸಿರುವುದು ಜೈಲು ಅಧಿಕಾರಿಗಳಿಗೆ ಅಚ್ಚರಿ ತಂದಿದೆ.

ಖಾಸಗಿ ಸಹಭಾಗಿತ್ವದಲ್ಲಿ ಜೈಲಿನಲ್ಲಿ ಟೆಲಿಫೋನ್ ಸಂಪರ್ಕವನ್ನು ಒದಗಿಸಲಾಗಿದೆ. ಹೊರ ಹೋಗುವ ಎಲ್ಲಾ ಕರೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ ಎಂದು ಜೈಲು ಅಧಿಕಾರಿಗಳು ಹೇಳಿದ್ದಾರೆ. ಫೋನ್ ಕರೆ ಸೌಲಭ್ಯ ಬಳಸುತ್ತಿರುವ ಖೈದಿಗಳ ಸಂಖ್ಯೆ ತೀರಾ ಕಡಿಮೆ ಇರುವುದರಿಂದ ಪ್ರತಿ ದಿನ ಜೈಲು ಅಧಿಕಾರಿಗಳು ಈ ಸೌಲಭ್ಯ ಪಡೆಯುವಂತೆ ಎಲ್ಲಾ ಖೈದಿಗಳನ್ನು ಹುರಿದುಂಬಿಸುತ್ತಿದ್ದಾರೆ.

ಹೆಚ್ಚೆಚ್ಚು ಖೈದಿಗಳು ನೋಂದಾಯಿಸಿದರೆ ಬೆಲೆ ಕೂಡಾ ತಕ್ಕಲಿದೆ. ತಿಂಗಳಿಗೆ ಹೆಚ್ಚು ಬಾರಿ ಕರೆ ಮಾಡುವ ಅವಕಾಶ ನೀಡುವ ಬಗ್ಗೆ ಕೂಡಾ ಯೋಚಿಸಬಹುದು ಎನ್ನಲಾಗಿದೆ. ಈ ಸೌಲಭ್ಯ ವಿಚಾರಣಾಧೀನ ಖೈದಿಗಳಿಗೆ ವರದಾನವಾಗಲಿದ್ದು, ತಮ್ಮ ವಕೀಲರೊಡನೆ ನಿರಂತರ ಸಂಪರ್ಕದಲ್ಲಿರಬಹುದಾಗಿದೆ.

ವಾರಕ್ಕೆರಡು ಬಾರಿ ಸಂದರ್ಶಕರೊಡನೆ ಭೇಟಿ ಸೌಲಭ್ಯದಿಂದ ಬೇಸತ್ತಿದ್ದ ಜಗನ್ ಹಾಗೂ ಸಹ ಖೈದಿಗಳು ಫೋನ್ ಸೌಲಭ್ಯದಿಂದ ಹರ್ಷಗೊಂಡರೂ ಕಾಲಾವಧಿಯ ಬಗ್ಗೆ ಗೊಣಗಾಟ ಮುಂದುವರೆಸಿದ್ದಾರೆ. ಜಗನ್ ಮೋಹನ್ ರೆಡ್ಡಿ ಅವರ ಮೇಲೆ ಐಪಿಸಿ ಸೆಕ್ಷನ್ 120B, 409, 420 ಮತ್ತು 477A ಅನ್ವಯ ಕೇಸು ದಾಖಲಿಸಲಾಗಿದೆ.

English summary
Kadapa MP, YSR Congress president YS Jagan is facing a phone problem. Chanchalguda jail authorities are allowing Jagan to make calls to near and dear one five times a month at the rate of Rs 40. With the quota of Rs 200 per month Jagan is having trouble to contact his family.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X