ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಣ್ಣಾ ರಾಜಕೀಯ ಪ್ರವೇಶಕ್ಕೆ ಕಿರಣ್ ಬೇಡಿ ತಡೆ

By Mahesh
|
Google Oneindia Kannada News

Kiran Bedi
ನವದೆಹಲಿ, ಆ.16: ಭ್ರಷ್ಟಾಚಾರ ವಿರುದ್ಧ ಹೋರಾಟಕ್ಕಿಳಿದಿರುವ ಟೀಂ ಅಣ್ಣಾ ರಾಜಕೀಯ ಪ್ರವೇಶದ ಬಗ್ಗೆ ಅವರ ತಂಡದ ಸದಸ್ಯರಲ್ಲೇ ಅಪಸ್ವರ ಕೇಳಿ ಬರುತ್ತಿದೆ. ಸಂತೋಷ್ ಹೆಗ್ಡೆ ಅವರ ನಂತರ ಕಿರಣ್ ಬೇಡಿ ಅವರು ಅಣ್ಣಾ ಅವರ ರಾಜಕೀಯ ಪ್ರವೇಶಕ್ಕೆ ತಡೆ ಒಡ್ಡಲು ಸಿದ್ಧರಾಗಿದ್ದಾರೆ.

ಜನಾಭಿಪ್ರಾಯಕ್ಕೆ ಮಣಿದು ಟೀಂ ಅಣ್ಣಾ ಚುನಾವಣೆ ಸ್ಪರ್ಧಿಸಲು ಬಯಸಿದರೆ ಯಾರೂ ತಡೆಯಲು ಸಾಧ್ಯವಿಲ್ಲ. ಆದರೆ, ಭ್ರಷ್ಟಾಚಾರದಿಂದ ತುಂಬಿರುವ ರಾಜಕೀಯ ಪಕ್ಷಗಳ ಸಹಾಯ ಪಡೆಯದಿದ್ದರೆ ಸಾಕು ಎಂದು ನಿಕಟಪೂರ್ವ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ತಮ್ಮ ಅಭಿಪ್ರಾಯ ಮಂಡಿಸಿದ್ದರು.
"I am not a politician. I have joined no political party. I have no intentions to do. I have been doing what I believed in!" ಎಂದು ಕಿರಣ್ ಬೇಡಿ ಟ್ವೀಟ್ ಮಾಡಿದ್ದರು.

ಅಣ್ಣಾ ಹಜಾರೆ ತಂಡದಿಂದ ಗಾಂಧೀ ಜಯಂತಿ ದಿನ(ಅಕ್ಟೋಬರ್ 2) ದಂದು ಹೊಸ ಪಕ್ಷ ಉದಯವಾಗಲಿದೆ ಎಂಬ ಮಾಧ್ಯಮಗಳ ವರದಿಗಳನ್ನು ಕಿರಣ್ ಬೇಡಿ ತಳ್ಳಿ ಹಾಕಿದ್ದಾರೆ.

ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟ ಸದಾ ಜಾರಿಯಲ್ಲಿರುತ್ತದೆ ಎಂದಿರುವ ಕಿರಣ್ ಬೇಡಿ, ಬಾಬಾ ರಾಮದೇವ್ ಅವರ ಹೋರಾಟಕ್ಕೆ ಬೆಂಬಲ ನೀಡಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.

ಟೀಂ ಅಣ್ಣಾದ ಗುರಿ ಸಾಮಾಜಿಕ ಬದಲಾವಣೆ, ಭ್ರಷ್ಟಾಚಾರ ಮುಕ್ತ ಸಮಾಜವೇ ಹೊರತು ರಾಜಕೀಯ ಪ್ರವೇಶವಲ್ಲ. ಅಣ್ಣಾ ಹಜಾರೆ ಅವರು ಈಗ ನಡೆಸುತ್ತಿರುವ ಚಳವಳಿಯನ್ನು ಮುಂದುವರೆಸಿಕೊಂಡು ಹೋಗಬೇಕು. ಒತ್ತಡಕ್ಕೆ ಮಣಿದು ರಾಜಕೀಯ ಪಕ್ಷ ಸ್ಥಾಪಿಸುವುದು ಸರಿಯಾದ ಕ್ರಮವಲ್ಲ, ನನಗೆ ರಾಜಕೀಯ ರಂಗ ಪ್ರವೇಶದ ಬಗ್ಗೆ ಆಸಕ್ತಿಯಿಲ್ಲ ಎಂದಿದ್ದಾರೆ.

ಒಟ್ಟಾರೆ, ಟೀಂ ಅಣ್ಣಾದ ಪ್ರಮುಖ ಸದಸ್ಯರಾದ ಸಂತೋಷ್ ಹೆಗ್ಡೆ ಹಾಗೂ ಕಿರಣ್ ಬೇಡಿ ಅವರು ಹೊಸ ರಾಜಕೀಯ ಪಕ್ಷ ಸ್ಥಾಪನೆಗೆ ಅಸಮ್ಮತಿ ಸೂಚಿಸಿದ್ದಾರೆ. ಅಣ್ಣಾ ಹಜಾರೆ ಅವರು ಕೂಡಾ ಹೊಸ ಪಕ್ಷದ ಬಗ್ಗೆ ಸ್ಪಷ್ಟವಾಗಿ ಹೇಳಿಲ್ಲ.

ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದರೆ, ಮುಂಬರುವ ಚುನಾವಣೆಯಲ್ಲಿ ಎನ್ ಡಿಎ ಗೆ ಅಣ್ಣಾ ಹಜಾರೆ ತಂಡ ಬೆಂಬಲ ನೀಡುವ ಸಾಧ್ಯತೆ ನಿಚ್ಚಳವಾಗಿದೆ.

ಈ ನಡುವೆ ಟೀಂ ಅಣ್ಣಾ ರಾಜಕೀಯ ಪ್ರವೇಶದ ಬಗ್ಗೆ ಉತ್ಸುಕತೆ ತೋರುತ್ತಿರುವ ಸದಸ್ಯ ಅರವಿಂದ್ ಕೇಜ್ರಿವಾಲ್ ಅವರ ಹೇಳಿಕೆ ಇಲ್ಲಿ ಸ್ಮರಣಾರ್ಹ. 'ಪಕ್ಷದ ಹೆಸರು ಹಾಗೂ ಪ್ರಣಾಳಿಕೆಯನ್ನು ಜನರೇ ನಿರ್ಧರಿಸಲಿ. ಪಕ್ಷಕ್ಕೆ ಕೊಡುವ ಪ್ರತಿ ಪೈಸೆ ದೇಣಿಗೆಯನ್ನು ವೆಬ್ ಸೈಟ್ ನಲ್ಲ್ ಪ್ರಕಟಿಸಲಾಗುವುದು' ಎಂದು ಜಂತರ್ ಮಂತರ್ ಬಳಿ ಪ್ರತಿಭಟನಾ ನಿರತರಾಗಿದ್ದಾಗ ಕೇಜ್ರಿವಾಲ ಹೇಳಿದ್ದರು.

English summary
Team Anna's political plunge has been marred by roadblocks and controversies ever since it was declared. Among the issues that were highlighted was the views of the detractors who were not in agreement with Team Anna getting into electoral politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X