• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೆಡ್ಡಿ ಜಾಮೀನು ಆರೋಪ ದಾಖಲು: ರಾಮುಲುಗೆ ನಡುಕ

By Srinath
|
ಹೈದರಾಬಾದ್, ಆ. 14: ಮಾಜಿ ಸಚಿವ ಜನಾರ್ದನ ರೆಡ್ಡಿ ಬೇಲ್‌ ಡೀಲ್‌ ಪ್ರಕರಣ ಹಿನ್ನೆಲೆ ಸೋಮಶೇಖರ ರೆಡ್ಡಿ, ಸುರೇಶ್‌ಬಾಬು ಸೇರಿದಂತೆ ಒಟ್ಟು ಎಂಟು ಜನ, 40 ಪುಟಗಳ ಚಾರ್ಜ್‌ಶೀಟ್‌ನ್ನು ಆಂಧ್ರದ ಎಸಿಬಿ ಅಧಿಕಾರಿಗಳು ನ್ಯಾಯಾಲಯಕ್ಕೆ ಸೋಮವಾರ ಸಲ್ಲಿಸಿದ್ದಾರೆ.

ಭಾರತೀಯ ದಂಡ ಸಂಹಿತೆ ಸೆಕ್ಷನ್ 120 ಬಿ, 34, 109, 219 (Public servant in judicial proceeding corruptly making report contrary to law) ಮತ್ತು ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯ ನಾನಾ ಸೆಕ್ಷನ್ ಗಳಡಿ ಆರೋಪ ದಾಖಲಾಗಿದೆ.

ಆಂಧ್ರದ ಎಸಿಬಿ ಅಧಿಕಾರಿಗಳು ಎರಡು ಪ್ರತ್ಯೇಕ ಎಫ್ಐಆರ್‌ ದಾಖಲಿಸಿದ್ದು, ಮೊದಲ ಎಫ್ಐಆರ್‌ನಲ್ಲಿ ಹೆಸರಿಸಿರುವ ಎಂಟೂ ಆರೋಪಿಗಳನ್ನು ಈಗಾಗಲೇ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಬಂಧಿಸಿದ್ದು, ಅವರ ಮೇಲೆಯೇ ದೋಷರೋಪಣ ಪಟ್ಟಿಯನ್ನು ಸೋಮವಾರ ಎಸಿಬಿ ನ್ಯಾಯಾಲಯದ ಮುಂದೆ ಸಲ್ಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 40 ಪುಟಗಳ ದೋಷಾರೋಪಣ ಪಟ್ಟಿ ಹಾಗೂ 50ಕ್ಕೂ ಹೆಚ್ಚು ಸಾಕ್ಷ್ಯಗಳು ಅಡಕವಾಗಿವೆ.

ಎಸಿಬಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸುತ್ತಿದ್ದಂತೆ ರೆಡ್ಡಿ ಪಾಳಯದಲ್ಲಿ ಆತಂಕ ಮನೆಮಾಡಿದೆ. ವಿಚಾರಣೆಯ ಸಂದರ್ಭದಲ್ಲಿ ಸುರೇಶ್‌ಬಾಬು ಅವರು ಶ್ರೀರಾಮುಲುಗೆ ಬೇಲ್‌ಡೀಲ್‌ ಪ್ರಕರಣದ ಮಾಹಿತಿ ಇತ್ತು ಎಂದು ಮುಂತಾದ ಅಂಶಗಳು ಸೇರಿದಂತೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪ್ರಮುಖ ಅಂಶಗಳು ದೋಷಾರೋಪಣ ಪಟ್ಟಿಯಲ್ಲಿವೆ.

ಮೊದಲನೆ ಎಫ್ಐಆರ್‌ (ಕ್ರೈಂ ನಂ. 8)ನಲ್ಲಿ ಕಾಣಿಸಿಕೊಂಡಿರುವ ಆರೋಪಿಗಳು ನ್ಯಾಯಾಧೀಶ ಪಟ್ಟಾಭಿ ರಾಮರಾವ್‌, ಬಳ್ಳಾರಿ ಶಾಸಕ, ಕೆಎಂಎಫ್ ಅಧ್ಯಕ್ಷ ಜಿ. ಸೋಮಶೇಖರ ರೆಡ್ಡಿ, ರೆಡ್ಡಿ ಸಹೋದರರ ದೂರದ ಸಂಬಂಧಿ ದಶರಥ ರಾಮರೆಡ್ಡಿ, ಕಂಪ್ಲಿ ಶಾಸಕ ಟಿ.ಎಚ್‌. ಸುರೇಶ್‌ಬಾಬು, ಜ್ಯೂನಿಯರ್‌ ನ್ಯಾಯವಾದಿ ಆದಿತ್ಯ, ನಿವೃತ್ತ ನ್ಯಾಯಮೂರ್ತಿ ವೆಂಕಟಾ ಚಲಪತಿ, ನ್ಯಾ. ಪಟ್ಟಾಭಿ ರಾಮರಾವ್‌ ಅವರ ಮಗ ರವಿಚಂದ್ರ, ರೌಡಿ ಯಾದಗಿರಿ ರಾವ್‌ ಅವರ ಮೇಲೆ ದೋಷಾರೋಪಣ ಪಟ್ಟಿಯನ್ನು ಸೋಮವಾರ ಎಸಿಬಿ ನ್ಯಾಯಾಲಯದ ಮುಂದೆ ಸಲ್ಲಿಸಿದ್ದಾರೆ.

ಇವರೆಲ್ಲ ಸದ್ಯ ಚರ್ಲಪಲ್ಲಿ ಜೈಲಿನಲ್ಲಿದ್ದಾರೆ. ಈ ಎಲ್ಲರ ಮೇಲೂ ಜನಾರ್ದನ ರೆಡ್ಡಿಗೆ ಜಾಮೀನು ಕೊಡಿಸಲು ಸಂಚು ರೂಪಿಸಿದ ಆರೋಪ ಹೊರಿಸಲಾಗಿದೆ. ಆದರೆ ಆರೋಪಪಟ್ಟಿಯಲ್ಲಿ ಜನಾರ್ದನ ರೆಡ್ಡಿ ಹೆಸರು ಉಲ್ಲೇಖವಾಗಿಲ್ಲ. ಸಿಬಿಐ ಲಕ್ಷ್ಮಿನಾರಾಯಣ ಅವರು ಪ್ರಕರಣವನ್ನು ಬೇಧಿಸಿದ್ದರು.

ಜೈಲಿನಲ್ಲಿರುವ ರೆಡ್ಡಿಯತ್ತ ಗಮನ: ಇನ್ನು ಎರಡನೇ ಎಫ್ಐಆರ್‌ನಲ್ಲಿ ಲಕ್ಷ್ಮಿ ನರಸಿಂಹರಾವ್‌, ಪ್ರಭಾಕರ, ರಾವಿ ಸೂರ್ಯ ಪ್ರಕಾಶ್‌ ಅವರ ವಿರುದ್ಧ ದಾಖಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಮುಂದಿನ ಕೆಲವೇ ದಿನಗಳಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಸಂದರ್ಭದಲ್ಲಿ ಪ್ರಕರಣಕ್ಕೆ ಸಂಬಂಧಪಟ್ಟ ಬೆಂಗಳೂರಿನ ಜೈಲಿನಲ್ಲಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಎಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಜನಾರ್ದನ ರೆಡ್ಡಿ ಸುದ್ದಿಗಳುView All

English summary
In the alleged bribe-for-bail-for-janardhana-reddy-case ACB has filed chargesheet. Besides MLAs Gali Somasekhar Reddy and T.H. Suresh, the ACB named history-sheeter Yadagiri Rao, retired judge Chalapathi Rao, suspended CBI special judge T. Pattabhi Rama Rao, his son Ravichandra, Gali's relative Dasrath Ram Reddy and advocate Aditya as accused.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more