ಸಾಮೂಹಿಕ ಅತ್ಯಾಚಾರ; ಒಬ್ಬನ ಬಂಧನ

kolkata-woman-gang-molested-by-ten-men
ಕೋಲ್ಕೊತ್ತಾ, ಆ. 14: ರಾಜಧಾನಿಯ ದಕ್ಷಿಣ ಭಾಗದಲ್ಲಿರುವ ಚೇತ್ಲಾ ಸೇತುವೆ ಪ್ರದೇಶದಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ವರದಿಯಾಗಿದೆ. ಘಟನೆಯ ಸಂಬಂಧ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ.

ಭಾನುವಾರ ಸಂಜೆ ಈ ಘಟನೆ ನಡೆದಿದ್ದು, 26 ವರ್ಷದ ಮಹಿಳೆಯನ್ನು ಹಿಂದಿನಿಂದ ಸುತ್ತುವರಿದ 10 ಜನರ ದುಷ್ಕರ್ಮಿಗಳ ತಂಡವೊಂದು ಆಕೆಯ ಕಣ್ಣು ಮುಚ್ಚಿ, ಬಲವಂತವಾಗಿ ಆಕೆಯನ್ನು ತಮ್ಮ ಕಾರಿನೊಳಕ್ಕೆ ಹಾಕಿಕೊಂಡಿದೆ. ಸುಮಾರು ಅರ್ಧ ಗಂಟೆಯ ಸುತ್ತಾಟದ ಬಳಿಕ ಮಹಿಳೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಜಂಟಿ ಪೊಲೀಸ್ ಆಯುಕ್ತ ಪಿಕೆ ಘೋಷ್ ತಿಳಿಸಿದ್ದಾರೆ.

ಅತ್ಯಾಚಾರವೆಸಗಿದ ಬಳಿಕ ಸೋಮವಾರ ಬೆಳಗಿನ ಜಾವ ಆಕೆಯನ್ನು ಮೊದಲು ಎಲ್ಲಿ ಕಾರಿನೊಳಕ್ಕೆ ಕೂಡಿಸಿಕೊಂಡಿದ್ದರೋ ಅಲ್ಲೇ ಬಿಟ್ಟು ದುಷ್ಕರ್ಮಿಗಳು ಪಲಾಯನಗೈದಿದ್ದಾರೆ. ಅದಾದ ನಂತರ ಮಹಿಳೆಯು ಚಾರು ಮಾರುಕಟ್ಟೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಅದರಂತೆ ಪೊಲೀಸರು ದೂರು ದಾಖಲಿಸಿಕೊಂಡು ಕಾರ್ಚಾರಣೆ ನಡೆಸಿದ್ದಾರೆ.

ಹತ್ತು ಮಂದಿ ಅನಾಮಿಕರ ವಿರುದ್ಧ ಅಪಹರಣ, ಅಪರಾಧ ಪಿತೂರಿ, ಸಾಮೂಹಿಕ ರೇಪ್ ಆರೋಪಗಳನ್ನು ಹೊರಿಸಿ, ಪ್ರಕರತಣ ದಾಖಲಿಸಿಕೊಳ್ಳಲಾಗಿದೆ ಎಂದು ಘೋಷ್ ಹೇಳಿದ್ದಾರೆ. ಆದರೆ ಬಾಧಿತ ಮಹಿಳೆ ದೂರಿನಲ್ಲಿ ಹೇಳಿರುವಂತೆ ಇಬ್ಬರು ಆಕೆಯ ಮೇಲೆ ಬಲಾತ್ಕಾರ ಮಾಡಿದ್ದಾರೆ.

ಅತ್ಯಾಚಾರ ಹತ್ತಿಕ್ಕಲು ಹೊಸ ಪೊಲೀಸ್ ಆಯುಕ್ತ ಕಚೇರಿ: ಈ ಮಧ್ಯೆ, ಸದರಿ ಮಹಿಳೆಗೆ ಸದಾ ದೂರವಾಣಿ ಕರೆ ಮಾಡಿ ಕಿರಿಕಿರಿ ನೀಡುತ್ತಿದ್ದ ಅಜೊಯ್ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಾಧಿತ ಮಹಿಳೆಯು 10 ವರ್ಷದ ಹೆಣ್ಣುಮಕ್ಕಳ ತಾಯಿಯಾಗಿದ್ದಾರೆ.

ಸದರಿ ಮಹಿಳೆಯು ಗಂಡನಿಂದ ದೂರವಾಗಿದ್ದಾರೆ. ಅಲಿಪೋರ್ ಕೋರ್ಟಿನಲ್ಲಿ ಬಾಧಿತ ಮಹಿಳೆಯ ದೂರನ್ನು ಸೋಮವಾರ ಅಧಿಕೃತವಾಗಿ ದಾಖಲಿಸಿಕೊಳ್ಳಲಾಗಿದೆ. ನಂತರ ಆಕೆಯನ್ನು ಎಸ್ಎಸ್ಕೆಎಂ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಗುರಿಪಡಿಸಲಾಗಿದೆ.

ಕಳೆದ ಫೆಬ್ರವರಿಯಲ್ಲಿ ಐದು ಜನರ ಗುಪೊಂದು ಆಂಗ್ಲೊ-ಇಂಡಿಯನ್ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದರು. ರಾಜಧಾನಿಯಲ್ಲಿ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರದ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಘೋಷ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂತಹ ಪ್ರಕರಣಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಅತ್ಯಾಚಾರ ಪ್ರಕರಣಗಳನ್ನು ಹತ್ತಿಕ್ಕಲು ಹೊಸ ಪೊಲೀಸ್ ಆಯುಕ್ತ ಕಚೇರಿಯನ್ನು ಸ್ಥಾಪಿಸಲೂ ಸರಕಾರ ಮುಂದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+