ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೂಟ್ ಫೈನಾನ್ಸ್ ಮ್ಯಾನೇಜರ್ ಮೇಲೆ ಶೂಟೌಟ್

By Mahesh
|
Google Oneindia Kannada News

Muthoot Finance Manager Shot Bangalore
ಬೆಂಗಳೂರು, ಆ.14: ಪಲ್ಸರ್ ಬೈಕಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ಮುತ್ತೂಟ್ ಮಿನಿ ಫೈನಾನ್ಸ್ ಮ್ಯಾನೇಜರ್ ಮೇಲೆ ಗುಂಡು ಹಾರಿಸಿ ಪರಾರಿಯಾಗಿರುವ ಘಟನೆ ಮಂಗಳವಾರ(ಆ.14) ಬೆಳಗ್ಗೆ ಬೆಂಗಳೂರು ವಿಶ್ವವಿದ್ಯಾಲಯ ಸಮೀಪ ನಡೆದಿದೆ.

ಮೂವರು ದುಷ್ಕರ್ಮಿಗಳ ಪೈಕಿ ಒಬ್ಬ ಮ್ಯಾನೇಜರ್ ಸುಧಾಕರ್ ಬಳಿಗೆ ಬಂದು ಗುಂಡು ಹಾರಿಸಿದ್ದನ್ನು ಫೈನಾನ್ಸ್ ಸಂಸ್ಥೆ ಉದ್ಯೋಗಿಯೊಬ್ಬರು ನೋಡಿದ್ದಾರೆ. ಈ ಘಟನೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ. ವೈಯಕ್ತಿಕ ದ್ವೇಷ ಅಥವಾ ಫೈನಾನ್ಸ್ ಸಂಸ್ಥೆ ಕಳ್ಳತನ ಯತ್ನವೇ ಎಂಬುದು ಇನ್ನೂ ತಿಳಿಯಬೇಕಿದೆ.

ಘಟನಾ ಸ್ಥಳ ಬಿಡದಿ ಪೊಲೀಸರ ವ್ಯಾಪ್ತಿಗೆ ಒಳಪಡುವುದರಿಂದ ಬಿಡಿದಿಯಿಂದ ಪೊಲೀಸರು ಆಗಮಿಸಿದ್ದಾರೆ. ಐಜಿಪಿ ಮಾಲಿನಿ ಕೃಷ್ಣಮೂರ್ತಿ ಸ್ಥಳ ಪರಿಶೀಲನೆ ನಡೆಸಿ ಸಿಬ್ಬಂದಿಗಳನ್ನು ವಿಚಾರಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಮ್ಯಾನೇಜರ್ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಫೈನಾನ್ಸ್ ಸಂಸ್ಥೆಯ ಮಹಿಳಾ ಉದ್ಯೋಗಿಯೊಬ್ಬರ ಸಾಕ್ಷಿ ಪ್ರಕಾರ, ಇಬ್ಬರು ಕೆಳ ಅಂತಸ್ತಿನಲ್ಲಿದ್ದರು ಮತ್ತೊಬ್ಬ ಮಹಡಿ ಮೆಟ್ಟಿಲ ಬಳಿ ಇದ್ದ. ಅವರು ಹಣ ದೋಚಲು ಬಂದಿದ್ದರು. ಇದಕ್ಕೆ ತಡೆ ಒಡ್ಡಿದ ಸುಧಾಕರ್ ಅವರ ಮೇಲೆ ಹಲ್ಲೆ ಮಾಡಿ ಗುಂಡಿ ಹಾರಿಸಿ ಪರಾರಿಯಾದರು ಎಂದಿದ್ದಾರೆ.

ಘಟನೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಗಾಯಗೊಂಡಿರುವ ಮ್ಯಾನೇಜರ್ ಸುಧಾಕರ್ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತನಿಖೆ ಮುಂದುವರೆದಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ ಪಿ ಅನುಪಮ್ ಅಗರವಾಲ್ ಅವರು ಹೇಳಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

ಭಾರತದ ಅತಿ ದೊಡ್ಡ ಚಿನ್ನದ ಸಾಲ ನೀಡುವ ಕಂಪನಿ ಮುತ್ತೂಟ್ ಫೈನಾನ್ಸ್ 2011-12ರಲ್ಲಿ ದಾಖಲೆಯ 900ಕ್ಕೂ ಅಧಿಕ ಮಳಿಗೆಗಳನ್ನು ಆರಂಭಿಸಿತ್ತು. ಸುಮಾರು 200-250 ಹೊಸ ಮಳಿಗೆಗಳನ್ನು ಆರಂಭಿಸುವ ಸಾಧ್ಯತೆಯಿದೆ. ಒಟ್ಟಾರೆ ದೇಶದಲ್ಲಿ 3678 ಬ್ರಾಂಚ್ ಮುತ್ತೂಟ್ ಫೈನಾನ್ಸ್ ಬ್ರಾಂಚ್ ಗಳಿತ್ತು. ದಕ್ಷಿಣ ಭಾರತದಲ್ಲಿ ಶೇ 60ರಷ್ಟು ಮಾರುಕಟ್ಟೆ ಪಾಲು ಹೊಂದಿದೆ.

English summary
Three men on a Pulsar bike have shot at the Muthoot Finance manager and fled today (Aug.14) The incident happened at Bidadi near the Bangalore university on the outskirts of the Bangalore. The Manager seriously injured and has been admitted to near by hospital
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X