ಮೊಟೊರೊಲಾ: 4000 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್

ಸರ್ಚ್ ಇಂಜಿನ್ ದಿಗ್ಗಜ್ಅ ಗೂಗಲ್ ಸಂಸ್ಥೆ ಮೊಟೊರೊಲಾ ಹ್ಯಾಂಡ್ ಸೆಟ್ ವಿಭಾಗವನ್ನು ಕಳೆದ ಮೇ ನಲ್ಲಿ 12.5 ಬಿಲಿಯನ್ ಡಾಲರ್ ನೀಡಿ ಖರೀದಿಸಿತ್ತು. ನಂತರ ಭಾರತದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿ ಬೆಳಸಲು ಸಂಸ್ಥೆ ಸಾಕಷ್ಟು ಶ್ರಮಿಸಿತ್ತು. ಗುರ್ ಗಾಂವ್ ನ ಕಚೇರಿಯಲ್ಲಿ ಸುಮಾರು 300 ಉದ್ಯೋಗಿಗಳಿದ್ದಾರೆ.
ಒಟ್ಟಾರೆ ಸಿಬ್ಬಂದಿಯ ಸಂಖ್ಯೆಯಲ್ಲಿ ಶೇ 20 ರಷ್ಟು(ಸುಮಾರು 4,000 ಜನ) ಸಿಬ್ಬಂದಿಯನ್ನು ಮೊಟೊರೊಲಾ ಕಳೆದುಕೊಳ್ಳಲಿದೆ. ಆದರೆ, ಪಿಂಕ್ ಸ್ಲಿಪ್ ಜೊತೆಗೆ ಹೊರ ಹೋಗುವ ಉದ್ಯೋಗಿಗಳಿಗೆ ಸೂಕ್ತ ಪ್ಯಾಕೇಜ್ ಹಾಗೂ ಇತರೆಡೆ ಉದ್ಯೋಗಿ ದೊರಕಿಸಿಕೊಡುವಲ್ಲಿ ಸಹಾಯ ಹಸ್ತ ಚಾಚಿದೆ ಎಂದು ಗೂಗಲ್ ವಕ್ತಾರರು ಹೇಳಿದ್ದಾರೆ.
ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ನಲ್ಲಿರುವ ಪೈಪೋಟಿ ಸುಧಾರಣೆಗಾಗಿ ಹಾಗೂ ತನ್ನ 17,000 ಪೇಟೆಂಟ್ ಗಳನ್ನು ಸಮರ್ಥವಾಗಿ ಬಳಸಲು ಮೊಟೊರೊಲಾ ಮೊಬೈಲ್ ಸಂಸ್ಥೆಯನ್ನು ಗೂಗಲ್ ಖರೀದಿಸಿತ್ತು. ಮೊಟೊರೊಲಾ ತನ್ನದೇ ಸ್ಮಾರ್ಟ್ ಫೋನ್ ಹಾಗೂ ಇತರೆ ಮೊಬೈಲ್ ಸಾಧಕಗಳನ್ನು ತಯಾರಿಸುವ ಸೌಲಭ್ಯ ಕೂಡಾ ನೀಡಲಾಗಿತ್ತು.
ಆಪಲ್ ಹಾಗೂ ಸ್ಯಾಮ್ ಸಂಗ್ ಜೊತೆ ಪೈಪೋಟಿ ನಡೆಸಲು ಆಂಡ್ರಾಯ್ಡ್ ಮಾರುಕಟ್ಟೆಯಲ್ಲಿ ಮತ್ತೆ ಜಿಗಿದೇಳಲು ಮೊಟೊರೊಲಾ ಚಿಂತನೆ ನಡೆಸಿದೆ ಎನ್ನಲಾಗಿದೆ.
1928ರಲ್ಲಿ ಚಿಕಾಗೋದಲ್ಲಿ ಆರಂಭವಾದ ಮೊಟೊರೊಲಾ, 1973ರಲ್ಲಿ ಮೊಟ್ಟಮೊದಲ ವಾಣಿಜ್ಯ ಸೆಲ್ ಫೋನ್ ಹೊರಬಿಟ್ಟಿತ್ತು. 2004ರ ಹೊತ್ತಿಗೆ Razr ಮಾಡೆಲ್ ಮೂಲಕ ಸೆಲ್ ಫೋನ್ ಮಾರುಕಟ್ಟೆಯಲ್ಲಿ ಅಗ್ರಗಣ್ಯ ಸಂಸ್ಥೆಯಾಗಿ ಬೆಳೆಯಿತು.
ಮೊಟೊರೊಲಾ ಸಲ್ಯೂಷನ್ ಬಿಟ್ಟು ಗೂಗಲ್ ಜೊತೆ ಸೇರಿದ ಮೇಲೆ ಮೊಟೊರೊಲಾ ಮೊಬಿಲಿಟಿ ಮೊದಲ 6 ವಾರದಲ್ಲೇ 233 ಮಿಲಿಯನ್ ಡಾಲರ್ ಕಳೆದುಕೊಂಡಿತ್ತು. ಬಹುತೇಕ ತ್ರೈಮಾಸಿಕದಲ್ಲಿ ಲಾಭವಿಲ್ಲದೆ ಸಂಸ್ಥೆ ಮುಂದುವರೆಯಿತು. ಸಿಬ್ಬಂದಿ ಕಡಿತದ ನಂತರ ಉನ್ನತಾಧಿಕಾರಿಗಳ ಮಟ್ಟದಲ್ಲಿ ಕತ್ತರಿಯಾಗುವ ಸಾಧ್ಯತೆಗಳಿದೆ. ಅದರಲ್ಲೂ ಏಷ್ಯಾ ಹಾಗೂ ಭಾರತದ ಕೇಂದ್ರಗಳ ಅಧಿಕಾರಿಗಳು ಹುದ್ದೆ ತ್ಯಜಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.












Click it and Unblock the Notifications