• search

ಗೂಗಲ್ ಉದ್ಯೋಗಿ ನಿಜಕ್ಕೂ ಭಾಗ್ಯಶಾಲಿ; ಸತ್ತ ನಂತರವೂ

By Srinath
Subscribe to Oneindia Kannada
For Quick Alerts
ALLOW NOTIFICATIONS
For Daily Alerts
  generous-google-best-place-to-work-global-indian-survey
  ಬೆಂಗಳೂರು, ಆ.10: ಇತರೆ ಬಹುರಾಷ್ಟ್ರೀಯ ಕಂಪನಿಗಳಿಗೆ ಹೋಲಿಸಿದಲ್ಲಿ ಗೂಗಲ್ ಕಂಪನಿಯ ಉದ್ಯೋಗಿಗಳು ನಿಜಕ್ಕೂ ಭಾಗ್ಯವಂತರೇ. ಗೂಗಲ್ ತನ್ನ ಉದ್ಯೋಗಿಗಳಿಗೆ ನೀಡುವ ಸಂಬಳ-ಸವಲತ್ತುಗಳು, ವಿಶೇಷ ಸಂದರ್ಭಗಳಲ್ಲಿ ಅವರಿಗೆ ಕಲ್ಪಿಸುವ ಮನರಂಜನೆ, ಪ್ರವಾಸಗಳ ಭರಾಟೆ ನಿಜಕ್ಕೂ ಬೇರೆ ಕಂಪನಿಗಳ ಉದ್ಯೋಗಿಗಳಿಗೆ ಕಿಚ್ಚು ಹಚ್ಚುವಂತಿದೆ.

  'ಗೂಗಲ್ ಉದ್ಯೋಗಿ ಅಂದರೆ ಗೂಗಲರ್, ಸೇವೆಯಲ್ಲಿದ್ದಾಗ ಮೃತಪಟ್ಟರೆ ಆ ಉದ್ಯೋಗಿಯ ಅರ್ಧದಷ್ಟು ಸಂಬಳವು 10 ವರ್ಷಗಳ ಕಾಲ ಉದ್ಯೋಗಿಯ ಕುಟುಂಬಸ್ಥರಿಗೆ ಸಂದಾಯವಾಗುತ್ತಿರುತ್ತದೆ. ಇದು ಅಮೆರಿಕದ ಗೂಗಲ್ ಕಂಪನಿಯ ನೀತಿ. ಭಾರತದಲ್ಲಿಯೂ ಗೂಗಲ್ ಕಂಪನಿ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿನ ಉದ್ಯೋಗಿಗಳಿಗೂ ಈ ನೀತಿ ಅನ್ವಯವಾಗುತ್ತಿದೆ' ಎಂದು ಭಾರತದ ವಕ್ತಾರೆ ಪರೋಮ ರಾಯ್ ಚೌಧರಿ ಹೇಳುತ್ತಾರೆ.

  ಇಂತಹ ದಯಾಮಯ ನೀತಿ ಇತರೆ ಕಂಪನಿಗಳಲ್ಲಿ ಕಂಡುಬರುವುದಿಲ್ಲ. ಪ್ರಸ್ತುತ, ಭಾರತದಲ್ಲಿ ಸರಕಾರಿ ಉದ್ಯೋಗಿಗಳು ಮಾತ್ರವೇ (ಸೇನಾ ಪಡೆಗೂ ಅನ್ವಯ) ಇಂತಹ ಸೀಮಿತ ಸೌಲಭ್ಯ ಹೊಂದಿದ್ದಾರೆ.

  ಉದ್ಯೋಗಿಯ ಮರಣಾನಂತರ ಅವರ ಕುಟಂಬಸ್ಥರ ಜತೆಗಿನ ಗೂಗಲ್ ನಂಟು ಕೇವಲ ಒಂದು ದಶಕಕ್ಕೆ ಕೊನೆಗೊಳ್ಳುವುದಿಲ್ಲ. ಇನ್ನೂ ಹಲವು ಸವಲತ್ತುಗಳಿವೆ. ಉದ್ಯೋಗಿಯ ಷೇರು ಮಾರಾಟ/ವರ್ಗಾವಣೆಗೂ ತಕ್ಷಣ ಅವಕಾಶ ಕಲ್ಪಿಸುತ್ತದೆ. ಇನ್ನು, ಉದ್ಯೋಗಿಯ ಮಕ್ಕಳಿಗೆ ಅವರು 19 ವರ್ಷ ದಾಟುವವರೆಗೂ ಅಥವಾ ಅವರು ಶಿಕ್ಷಣ ಪಡೆಯುತ್ತಿದ್ದರೆ 23 ವರ್ಷ ದಾಟುವವರೆಗೂ ಪ್ರತಿ ತಿಂಗಳೂ ತಲಾ 1,000 ಡಾಲರ್ ಹಣ ಸಂದಾಯವಾಗುತ್ತದೆ.

  ಹಾಗಾಗಿಯೇ, ಜಾಗತಿಕ ಮತ್ತು ಭಾರತದ ಮಟ್ಟದಲ್ಲಿ ಉದ್ಯೋಗಿಯ ದೃಷ್ಟಿಯಿಂದ ಅತ್ಯುತ್ತಮ ಕಂಪನಿ ಯಾವುದೆಂದರೆ ಗೂಗಲ್ ಎಂಬಂತಾಗಿದೆ. ಹೈದರಾಬಾದಿನಲ್ಲಿರುವ ಗೂಗಲ್ ಕಚೇರಿ ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ಈ ಕೇಂದ್ರದಲ್ಲಿ ನೂರಾರು ಉದ್ಯೋಗಿಗಳಿದ್ದಾರೆ. ಇವರಿಗಾಗಿ ಒಂದು ಒಳಾಂಗಣ ಕ್ರಿಕೆಟ್ ಮೈದಾನವಿದೆ. ಹೊರಾಂಗಣ ಬ್ಯಾಸ್ಕೆಟ್ ಬಾಲ್ ಕೋರ್ಟ್, ಈಜುಕೊಳ ಇದೆ. ಒಂದು ಬಾಡಿ ಮಸಾಜ್ ಕೇಂದ್ರವೂ ಇದೆ.

  ಐಟಿ ಕಂಪನಿಗಳೂ ಸೇರಿದಂತೆ ಭಾರತದ ಬಹಳಷ್ಟು ಖಾಸಗಿ ಕಂಪನಿಗಳು ತನ್ನ ಉದ್ಯೋಗಿಗಳಿಗೆ ಸಂಬಳ, ಸವಲತ್ತು ನೀಡುವ ವಿಷಯದಲ್ಲಿ ಗೂಗಲ್ ಕಂಪನಿಯಷ್ಟು ಧಾರಾಳವಾಗಿಲ್ಲ. ಒಂದೂವರೆ ಲಕ್ಷ ಉದ್ಯೋಗಿಗಳನ್ನು ಹೊಂದಿರುವ ಎರಡನೆಯ ಅತಿ ದೊಡ್ಡ ಐಟಿ ಕಂಪನಿಯೂ ಸೇರಿದಂತೆ ಕೆಲವು ಕಂಪನಿಗಳು ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಆರ್ಥಿಕ ಹಿಂಜರಿತವಿದೆ. ಅದು ಸರಿ ಹೋಗಲಿ. ಆಮೇಲಷ್ಟೇ ಈ ಸ್ಯಾಲರಿ ಹೈಕು ಅದೂ ಇದೂ ಎಂದು ಸಬೂಬು ಹೇಳುತ್ತಿರುವಾಗ ಗೂಗಲ್ ಕಲ್ಪಿಸುವ ಸವಲತ್ತುಗಳು 'owners pride neighbour's envy' ಎಂಬಂತಿದೆ.

  ಇದನ್ನೆಲ್ಲ ತಿಳಿದುಕೊಂಡ ಮೇಲೆ ನನಗೂ ಗೂಗಲ್ ಕಂಪನಿ ಸೇರುವ ಭಾಗ್ಯವಿದೆಯಾ? ಎಂದು ಕೇಳುತ್ತೀರೇನೋ. ಆದರೆ ಗೂಗಲ್ ಕಂಪನಿಗೆ ಆಯ್ಕೆಯಾಗುವುದು ಅಷ್ಟು ಸುಲಭವಲ್ಲ. ಬರೋಬ್ಬರಿ ನಾಲ್ಕು ಘಟಾನುಘಟಿ ಉನ್ನತಾಧಿಕಾರಿಗಳು ಸಂದರ್ಶನಕ್ಕೆ ಕುಳಿತಿರುತ್ತಾರೆ. ಕೆಲ್ಸ ಗಿಟ್ಟಿಸಬೇಕು ಅಂದರೆ ಮೊದಲು ಅವರೆಲ್ಲರಿಂದಲೂ ನೀವು ಶಹಬ್ಬಾಸಗಿರಿ ಪಡೆಯಲೇಬೇಕು. ಇನ್ನು, software programmer ಆಗಿದ್ದರಂತೂ ಈಗಾಗಲೇ ಕಂಪನಿಯಲ್ಲಿರುವ ಮೇಧಾವಿಗಳ ಎದುರು ಅಗ್ನಿಪರೀಕ್ಷೆಯನ್ನೇ ಎದುರಿಸಬೇಕು.

  ಅಂದಹಾಗೆ, ಕ್ಯಾಲಿಫೋರ್ನಿರ್ಯಾದ Mountain Viewನಲ್ಲಿ Googleplex ಎಂಬ ಪ್ರಧಾನ ಕಚೇರಿಯಿದೆ. ಇದು ಧರೆಗಿಳಿದುಬಂದ ಸ್ವರ್ಗವೇ ಸರಿ. ಏನುಂಟು ಏನಿಲ್ಲ ಅಲ್ಲಿ. 42 ಶತಕೋಟಿ ಡಾಲರ್ ನಗದು ಹಣ ಹೊಂದಿರುವ ಗೂಗಲ್ ಕಂಪನಿಯ ಶಾಖೆಗಳು ನಮ್ಮ ಬೆಂಗಳೂರು, ಮುಂಬೈ ಮತ್ತು ದೆಹಲಿಯಲ್ಲೂ ಇದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  The family of a 'Googler' who dies in harness will get half the employee's salary for 10 years, a plan that came into effect for US employees of the technology company last year. Indian staff will become eligible soon, says Company spokeswoman Paroma Roy Chowdhury.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more