• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶೋಭಾ ಮೇಡಂ ಹೇಳಿದ ಜಲಾಶಯಗಳ ಲೆಕ್ಕಾಚಾರ

By Mahesh
|

ಬೆಂಗಳೂರು, ಆ.8: ರಾಜ್ಯದಲ್ಲಿ ಮಳೆ ಬಿದ್ದು ಜಲಾಶಯಗಳು ಭರ್ತಿಯಾದರೆ ಯಾವ ಸಮಸ್ಯೆಯೂ ಇರುವುದಿಲ್ಲ. ಲಕ್ಷ ಲಕ್ಷ ಬೋರ್ ವೆಲ್ ಕೊರೆಯುವ ಅಗತ್ಯವಿರುವುದಿಲ್ಲ. ಆದರೆ, ಎಲ್ಲಾ ಜಲಾಶಯಗಳು ತುಂಬದಿದ್ದರೆ ವಿದ್ಯುತ್ ಸಮಸ್ಯೆ ಮತ್ತಷ್ಟು ಕಾಡಲಿದೆ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ರಾಜ್ಯದಲ್ಲಿನ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಒಂದು ಲಕ್ಷ ಬೋರ್‌ವೆಲ್‌ಗಳನ್ನು ಕೊರೆಸಲಾಗಿದೆ.1 ಲಕ್ಷ ಪಂಪ್‌ಸೆಟ್ ಅಕ್ರಮ ವಿದ್ಯುತ್ ಸಂಪರ್ಕ ಹೊಂದಿರುವ ಮಾಹಿತಿ ಇದೆ. ರಾಜ್ಯದಲ್ಲಿ ವಿದ್ಯುತ್ ಕೊರತೆ ಇರುವುದರಿಂದ ರೈತರಿಗೆ ಹೆಚ್ಚು ವಿದ್ಯುತ್ ಬಳಕೆ ಮಾಡಬಾರದು. ಹೆಚ್ಚಿನ ವಿದ್ಯುತ್ ಬಳಕೆಯಿಂದಾಗಿ ಉತ್ತರ ಭಾರತದಲ್ಲಿ ಕತ್ತಲು ಆವರಿಸಿತ್ತು. ಆದರೆ, ದಕ್ಷಿಣ ಭಾರತದಲ್ಲಿ ವಿಶೇಷ ಸುರಕ್ಷತಾ ವ್ಯವಸ್ಥೆ ಅಳವಡಿಸಲಾಗಿದೆ ಎಂದು ಶೋಭಾ ಹೇಳಿದರು.

ವಿದ್ಯುತ್ ಖರೀದಿ ಅನಿವಾರ್ಯ: ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಿದ್ದು, 750 ಮೆ.ವಾ. ವಿದ್ಯುತ್ ಖರೀದಿಗೆ ಟೆಂಡರ್ ಕರೆಯಲಾಗಿದೆ. ವಿದ್ಯುತ್ ವಿನಿಯಮ ಕೇಂದ್ರದಿಂದಲೇ ಮುಕ್ತ ಟೆಂಡರ್ ಮೂಲಕ ವಿದ್ಯುತ್ ಖರೀದಿ ಮಾಡಲಾಗುತ್ತಿದೆ ಎಂದರು.

ಉತ್ತರ ಭಾರತದ ರಾಜ್ಯಗಳಿಂದ ವಿದ್ಯುತ್ ತರುವುದು ಕಷ್ಟ. ಆ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಖಾಸಗಿ ಕಂಪೆನಿಗಳಿಂದ ವಿದ್ಯುತ್ ಖರೀದಿ ಮಾಡಲಾಗುತ್ತಿದೆ. ಪ್ರತಿ ಯೂನಿಟ್‌ಗೆ 4.80ಪೈಸೆಗೆ ವಿದ್ಯುತ್ ಖರೀದಿಸಲಾಗಿದೆ ಎಂದ ಅವರು, 2005-06ರಲ್ಲಿ ಪ್ರತಿ ಯೂನಿಟ್‌ಗೆ 7ರೂ.ನೀಡಿ ಖರೀದಿಗೆ ಮಾಡಲಾಗಿದೆ ಎಂದರು.

ಪ್ರತಿನಿತ್ಯ 8500 ಮೆ.ವ್ಯಾ.ವಿದ್ಯುತ್ ಬೇಡಿಕೆ ಇದ್ದು, ಪ್ರಸ್ತುತ 7500 ಮೆ.ವ್ಯಾ. ವಿದ್ಯುತ್ ಒದಗಿಸಲಾಗುತ್ತಿದೆ. 1 ಸಾವಿರ ಮೆ.ವ್ಯಾ.ವಿದ್ಯುತ್ ಕೊರತೆ ಇದೆ. ಪ್ರತಿನಿತ್ಯ 1200 ಮೆ.ವ್ಯಾ.ವಿದ್ಯುತ್ ಖರೀದಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಬೆಳಗ್ಗೆ ಮತ್ತು ರಾತ್ರಿ 2 ಗಂಟೆ ತ್ರಿ ಫೇಸ್ ಹಾಗೂ ಸಂಜೆ 6 ರಿಂದ ಬೆಳಗ್ಗೆ 6 ರ ವರೆಗೆ ಸಿಂಗಲ್ ಫೇಸ್ ವಿದ್ಯುತ್ ನೀಡಲಾಗುತ್ತಿದೆ.

ಉತ್ಪಾದನೆ ಸಾಮರ್ಥ್ಯ: ಲಿಂಗನಮಕ್ಕಿ ಜಲಾಶಯದಿಂದ ಪ್ರತಿ ದಿನ 2,500 MW ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಬಳ್ಳಾರಿ ಶಾಖೋತ್ಪನ ಕೇಂದ್ರದಿಂದ 500 MW ಹಾಗೂ ಉಡುಪಿ ಕೇಂದ್ರದಿಂದ 500 MW ಉತ್ಪಾದನೆಯಾಗುತ್ತಿದೆ. ಖಾಸಗಿ ಮೂಲಗಳಿಂದ ವಿದ್ಯುತ್ ಖರೀದಿಸಿದರೂ ಹೆಚ್ಚುವರಿ ಉತ್ಪಾದನೆ ಸಾಮರ್ಥ್ಯ ಹೆಚ್ಚಳ ಮಾಡಿಕೊಂಡು ವಿದ್ಯುತ್ ಜಾಲ(grid)ಕ್ಕೆ ಸೇರಿಕೊಳ್ಳಲು ಜನವರಿ 2013ರ ತನಕ ಕಾಯಬೇಕಾಗುತ್ತದೆ.

ಸೌರ ವಿದ್ಯುತ್ ಘಟಕಗಳ ಮೂಲಕ 1000 ಮೆಗಾ ವ್ಯಾಟ್ ಸೌರ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೊಂದಿದ್ದರು ಇನ್ನೂ ಪೂರ್ಣ ಪ್ರಮಾಣದಲ್ಲಿ ಉತ್ಪಾದನೆ ಆರಂಭವಾಗಿಲ್ಲ. ಪವನ ಶಕ್ತಿ ಉತ್ಪಾದನಾ ಸಾಮರ್ಥ್ಯ 1350.23 MW ನಷ್ಟಿದೆ. ಚಿತ್ರದುರ್ಗ,ಗದಗ ಮುಂತಾದೆಡೆ ಸೇರಿ 20000 ಕ್ಕಿಂತ ಅಧಿಕ ಗಾಳಿ ಟರ್ಬೈನ್ಗಳು ಶಕ್ತಿ ಉತ್ಪಾದಿಸುತ್ತಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Energy Minister Shobha Karandlaje said state decided to purchase 750MW of power from private producers.Load Shedding power will be solved naturally if all the water reservoirs are filled. Karnataka is facing the deficit of 1000 MW power daily.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more