ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ.8 ವಿಕಾಸ್ ನಿರಾಸೆ, ಬಾಕ್ಸರ್ ಗಳ ಮೇಲೆ ನಿರೀಕ್ಷೆ

By Mahesh
|
Google Oneindia Kannada News

ಲಂಡನ್, ಆ.8: ಐದು ಬಾರಿ ವಿಶ್ವ ಚಾಂಪಿಯನ್ ಮೇರಿ ಕೋಮ್ ಒಲಿಂಪಿಕ್ಸ್ ಬಾಕ್ಸಿಂಗ್ ನಲ್ಲಿ ಪದಕ ಗಳಿಸುವುದು ಖಚಿತವಾಗಿದ್ದು ಬುಧವಾರ (ಆ.8) ಸಂಜೆ ಸೆಮಿಫೈನಲ್ ನಲ್ಲಿ ಗೆಲುವಿಗಾಗಿ ಹೋರಾಟ ನಡೆಸಲಿದ್ದಾರೆ. ವಿಜೆಂದರ್ ಸಿಂಗ್ ಹೊರಬಿದ್ದ ನಂತರ ಕಣದಲ್ಲಿರುವ ಏಕೈಕ ಬಾಕ್ಸರ್ ದೇವೇಂದ್ರೋ ಸಿಂಗ್ ಮೇಲೆ ನಿರೀಕ್ಷೆ ಹೆಚ್ಚಾಗಿದ್ದು, ಕ್ವಾಟರ್ ಫೈನಲ್ ನಲ್ಲಿ ಬುಧವಾರ ಸೆಣಸಲಿದ್ದಾರೆ.

ಡಿಸ್ಕಸ್ ಫೈನಲ್ ನಲ್ಲಿ ವಿಕಾಸ್ ಗೌಡ ಹೊರ ಬಿದ್ದಿದ್ದು, ಫೈನಲ್ ಸುತ್ತಿನಲ್ಲಿ 8ನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ. ಅರ್ಹತಾ ಸುತ್ತಿನಲ್ಲಿ 65 ಮೀಟರ್ ಎಸೆದಿದ್ದ ವಿಕಾಸ್, ಅಂತಿಮ ಸುತ್ತಿನಲ್ಲಿ 65 ರ ಆಸುಪಾಸಿಗೂ ಡಿಸ್ಕರ್ ಎಸೆಯುವಲ್ಲಿ ವಿಫಲರಾದರು.

[ಎಲ್ಲಾ ಸ್ಪರ್ಧೆಗಳು ಇಎಸ್ ಪಿಎಸ್ ಸ್ಟಾರ್ ಸ್ಫೋರ್ಟ್ ಹಾಗೂ ದೂರದರ್ಶನದಲ್ಲಿ ಮಧ್ಯಾಹ್ನ 1 ಗಂಟೆ ನಂತರ ಪ್ರಸಾರ ಆರಂಭ. ಇಲ್ಲಿ ಕೊಟ್ಟಿರುವ ಸಮಯ ಬದಲಾವಣೆಗೆ ಒಳಪಟ್ಟಿರುತ್ತದೆ.]

ಆ.8 2012, ಬುಧವಾರ : ಸ್ಪರ್ಧೆ ಪಟ್ಟಿ (ಭಾರತೀಯ ಕಾಲಮಾನ)

ಅಥ್ಲೆಟಿಕ್ಸ್ : ಸಂಜೆ 4.10
ಮಹಿಳೆಯರ 800 ಮೀ (ಹೀಟ್ಸ್ -1) ಟಿಂಟು ಲೂಕಾ

ಬಾಕ್ಸಿಂಗ್: ಸಂಜೆ 6.15: ಮಹಿಳೆಯರ 51 ಕೆಜಿ ಫ್ಲೈವೇಟ್
ಸೆಮಿಫೈನಲ್ಸ್: ಮೇರಿ ಕೋಂ vs ನಿಕೋಲಾ ಆಡಮ್ಸ್ (ಗ್ರೇಟ್ ಬ್ರಿಟನ್)

ರಾತ್ರಿ : 1.15: ಪುರುಷರ ಲೈಟ್ ಫ್ಲೈವೇಟ್ (49 ಕೆಜಿ)
ಕ್ವಾಟರ್ ಫೈನಲ್ಸ್: ದೇವೇಂದ್ರೋ ಸಿಂಗ್ vs ಪ್ಯಾಡಿ ಬೇರ್ನ್ಸ್ (ಐರ್ಲೆಂಡ್)

ಫಲಿತಾಂಶಗಳು: ಅಥ್ಲೆಟಿಕ್ಸ್ : ಟ್ರಿಪಲ್ ಜಂಪರ್ ರೆಂಜಿತ್ ಮಹೇಶ್ವರಿ ಪುರುಷರ ಅರ್ಹತಾ ಸುತ್ತಿನಲ್ಲಿ ಮೂರು ಯತ್ನಗಳು foul ಮಾಡಿ ಸ್ಪರ್ಧೆಯಿಂದ ಹೊರ ನಡೆದರು. 2010ರಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚು ಪಡೆದಿದ್ದ ಮತ್ತು 2006ರಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ನಾಲ್ಕನೆ ಸ್ಥಾನ ಪಡೆದಿದ್ದ 26 ವರ್ಷದ ರೆಂಜಿತ್ ಒಲಿಂಪಿಕ್ಸ್‌ನಲ್ಲಿ ಅಂಕ ದಾಖಲಿಸದೆ ಸ್ಪರ್ಧೆಯಿಂದ ಹೊರ ಬಿದ್ದರು.
***

ಹಾಕಿ: ಬೆಲ್ಜಿಯಂ ವಿರುದ್ಧ ಕೊನೆಯ ಒಲಿಂಪಿಕ್ಸ್ ಲೀಗ್ ಪಂದ್ಯದಲ್ಲ್ಲಿ 3-0 ಅಂತರದಿಂದ ಹೀನಾಯವಾಗಿ ಸೋತಿರುವ ಭಾರತದ ಪುರುಷರ ಹಾಕಿ ತಂಡ ಒಲಿಂಪಿಕ್ಸ್ ನಲ್ಲಿ ಸತತ ಐದನೆ ಸೋಲನುಭವಿಸಿ ಮುಖಭಂಗ ಅನುಭವಿಸಿದೆ.

ಒಂದೂ ಪಂದ್ಯವನ್ನು ಗೆಲ್ಲದೇ ಅಂಕರಹಿತವಾಗಿರುವ ಭಾರತ ಆರನೆ ಸ್ಥಾನ ಪಡೆದಿದೆ. ಇದು ಒಲಿಂಪಿಕ್ಸ್ ನಲ್ಲಿ ಭಾರತದ ಅತ್ಯಂತ ಕಳಪೆ ಪ್ರದರ್ಶನವಾಗಿದೆ. ಭಾರತ ಇನ್ನು 9-12ನೆ ಸ್ಥಾನಕ್ಕಾಗಿ ಹೋರಾಡಲಿದೆ.

English summary
Five-time world champion MC Mary Kom (51kg) assured a medal in London Olympics 2012. Devendro Singh also battle out today(Aug.8) in Quarter Finals, Tintu Luka tries her luck in 800 mt race.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X