ಮುತ್ತೂಟ್ ಫೈನಾನ್ಸ್ ನ 250 ಮಳಿಗೆಗೆ ನೇಮಕಾತಿ

Jobs in Muthoot Finance
ಚೆನ್ನೈ, ಆ.6: ಭಾರತದ ಅತಿ ದೊಡ್ಡ ಚಿನ್ನದ ಸಾಲ ನೀಡುವ ಕಂಪನಿ ಮುತ್ತೂಟ್ ಫೈನಾನ್ಸ್ ಪ್ರಗತಿಗೆ ಆರ್ ಬಿಐ ನೀತಿ ಕಡಿವಾಣ ಹಾಕಿದರೂ ಮುತ್ತೂಟ್ ಸಂಸ್ಥೆ ತನ್ನ ಯೋಜನೆಗಳಿಗೆ ಬ್ರೇಕ್ ಹಾಕಿಲ್ಲ. ಪ್ರಸಕ್ತ ವರ್ಷದ ನೇಮಕಾತಿ ಪ್ರಕ್ರಿಯೆ ಎಂದಿನಂತೆ ನಡೆಯಲಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಾರ್ಜ್ ಅಲೆಕ್ಸಾಂಡರ್ ಮುತ್ತೂಟ್ ದಿ ಹಿಂದೂ ಪತ್ರಿಕೆಗೆ ಹೇಳಿದ್ದಾರೆ.

ಆದರೆ, ಸಂಸ್ಥೆ ತನ್ನ ಮಳಿಗೆ ವಿಸ್ತರಣಾ ಯೋಜನೆಗೆ ಕಡಿವಾಣ ಹಾಕಿದೆ. ಕಳೆದ ಎರಡು ವರ್ಷಗಳಲ್ಲಿ ಸುಮಾರು 2000ಕ್ಕೂ ಅಧಿಕ ಮಳಿಗೆಗಳನ್ನು ಆರಂಭಿಸಿದ್ದ ಮುತ್ತೂಟ್ ಫೈನಾನ್ಸ್, ಈ ಬಾರಿ ಕೇವಲ 250ಕ್ಕೆ ಸ್ಥಿಮಿತಗೊಳಿಸಲಾಗಿದೆ.

ಆದರೆ, ಈ ಹೊಸ ಮಳಿಗೆಗಳಿಗೆ ಪದವೀಧರರನ್ನು ನೇಮಕ ಮಾಡಿಕೊಳ್ಳಲು ಸಂಸ್ಥೆ ಮುಂದಾಗಿದೆ. ಈ ವರ್ಷ ಸುಮಾರು 2000 ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂದು ಸಂಸ್ಥೆ ನಿರ್ದೇಶಕ ಜಾರ್ಜ್ ಹೇಳಿದ್ದಾರೆ.

ನಾನ್ ಬ್ಯಾಂಕಿಂಗ್ ಫೈನಾನ್ಸ್ ಕಂಪನಿಯಾಗಿರುವ ಮುತ್ತೂಟ್ ಸಂಸ್ಥೆ, ಚಿನ್ನದ ಮೇಲೆ ಸಾಲ ಕೊಡುವುದರಲ್ಲಿ ಹೆಸರುವಾಸಿಯಾಗಿದೆ. ಸುಮಾರು 23,000 ಕೋಟಿ ಮೌಲ್ಯದ ಚಿನ್ನದ ಸಾಲದ ವ್ಯವಹಾರವನ್ನು ಸಂಸ್ಥೆ ಹೊಂದಿದೆ.

ವರ್ಷಾಂತ್ಯಕ್ಕೆ ಸಂಸ್ಥೆ ವಹಿವಾಟು ಸುಮಾರು 26,000 ಕೋಟಿ ರು ದಾಟುವ ನಿರೀಕ್ಷೆಯಿದೆ. ಆರ್ ಬಿಐ ನೀತಿನಿಂದ ಸಾಲ ನೀಡಿಕೆಯಲ್ಲಿ ವ್ಯತ್ಯಯ ಉಂಟಾಗಿದ್ದರೂ, ನಿಯಮದಂತೆ ನಾವು ನಡೆಯಬೇಕು ಎಂದು ಮುತ್ತೂಟ್ ಸಂಸ್ಥೆ ಹೇಳಿದೆ.

2012, ಮಾರ್ಚ್ ನಲ್ಲಿ ಆರ್ ಬಿಐ ಮೌಲ್ಯಕ್ಕ ಅನುಗುಣವಾದ ಸಾಲದ ಪ್ರಮಾಣ (LTV) ವನ್ನು ಶೇ. 60ಕ್ಕೆ ಮಿತಿಗೊಳಿಸಿತ್ತು. ಇದಕ್ಕೂ ಮುನ್ನ ಕಂಪನಿಗಳಿಗೆ ಶೇ. 85ರ ಪ್ರಮಾಣದ ಮೌಲ್ಯಕ್ಕನುಗುಣವಾಗಿ ಚಿನ್ನದ ಸಾಲ ನೀಡುವ ಸುವರ್ಣ ಅವಕಾಶವಿತ್ತು. ಆದರೆ, ಆರ್ ಬಿಐ ನೂತನ ನೀತಿಯಿಂದ ಹಣಕಾಸು ಸಂಸ್ಥೆಗಳಿಗೆ ಕಡಿವಾಣ ಬಿದ್ದಿತ್ತು.

ಚಿನ್ನದ ಬೆಲೆ ಗಗನಕ್ಕೇರುತ್ತಿರುವ ನಡುವೆ, ಚಿನ್ನದ ಮೇಲಿವ ಹೂಡಿಕೆಯು ಭರವಸೆ ಗ್ರಾಹಕರಲ್ಲಿ ಹೆಚ್ಚಾಗಿತ್ತು. ಹೀಗಾಗಿ ಮಾ.31, 2012ಕ್ಕೆ ಅನ್ವಯವಾಗುವಂತೆ ಸರಾಸರಿ ಶೇ 72 ರಷ್ಟು ಮಿತಿಯಂತೆ ಸಾಲ ನೀಡುತ್ತಿದ್ದ ಮುತ್ತೂಟ್ ಫೈನಾನ್ಸ್ ಈಗ ತೊಂದರೆಗೆ ಸಿಲುಕಿದೆ.

'ಪ್ರಪ್ರಥಮ ಬಾರಿಗೆ ಚಿನ್ನದ ಮೇಲಿನ ಸಾಲ ನೀಡಿಕೆಯಲ್ಲಿ ಇಳಿಕೆಯಾಗಿದೆ. ಇದಕ್ಕೆ LTV ಅನುಪಾತವೇ ನೇರ ಕಾರಣ' ಎಂದು ಮುತ್ತೂಟ್ ಫೈನಾನ್ಸ್ ವ್ಯವಸ್ಥಾಪಕ ನಿರ್ದೇಶಕ ಕೆ ಪದ್ಮಕುಮಾರ್ ಹೇಳಿದ್ದಾರೆ.

2011-12 ರಲ್ಲಿ ಚಿನ್ನದ ಸಾಲ ನೀಡಿಕೆ ಪ್ರಗತಿ ದರ ಶೇ 57ರಷ್ಟಿತ್ತು. ಪ್ರಸಕ್ತ ವರ್ಷ ಶೇ 20 ರಷ್ಟು ಪ್ರಗತಿ ಕಾಣುವ ನಿರೀಕ್ಷೆ ಹೊಂದಿದೆ. ಹೊಸ ಬ್ರಾಂಚ್ ಗಳನ್ನು ತೆರೆಯಲಾಗುವುದು ಎಂದು ಪದ್ಮಕುಮಾರ್ ಹೇಳಿದ್ದರು.

ಸುಮಾರು 200-250 ಹೊಸ ಮಳಿಗೆಗಳನ್ನು ಆರಂಭಿಸುವ ಸಾಧ್ಯತೆಯಿದ್ದು, 2011-12ರಲ್ಲಿ ದಾಖಲೆಯ 900ಕ್ಕೂ ಅಧಿಕ ಮಳಿಗೆಗಳನ್ನು ಆರಂಭಿಸಿತ್ತು. ಒಟ್ಟಾರೆ ದೇಶದಲ್ಲಿ 3678 ಬ್ರಾಂಚ್ ಮುತ್ತೂಟ್ ಫೈನಾನ್ಸ್ ಬ್ರಾಂಚ್ ಗಳಿತ್ತು. ದಕ್ಷಿಣ ಭಾರತದಲ್ಲಿ ಶೇ 60ರಷ್ಟು ಮಾರುಕಟ್ಟೆ ಪಾಲು ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+