• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿತ್ಯಾನಂದ, ರಂಜಿತಾ ಪಾಸ್ ಪೋರ್ಟ್ ಜಪ್ತಿ

By Mahesh
|
ನವದೆಹಲಿ, ಆ.2: ಲಿಂಗಪರೀಕ್ಷೆಗೆ ಹೆದರಿ ಕೈಲಾಸ ಪರ್ವತ ಹಾದಿ ಹಿಡಿದಿದ್ದ ಸ್ವಾಮಿ ನಿತ್ಯಾನಂದ ಹಾಗೂ ತಮಿಳು ನಟಿ ರಂಜಿತಾ ಅವರ ಪಾಸ್ ಪೋರ್ಟ್ ಗಳನ್ನು ಹೊಂದಿದ್ದ ನಿತಿನ್ ಕೌಶಿಕ್ ಎಂಬ ವ್ಯಕ್ತಿ ಜಪ್ತಿ ಮಾಡಿಕೊಂಡಿರುವ ಘಟನೆ ನಡೆದಿದೆ.

ಟಿಬೇಟಿನಲ್ಲಿರುವ ಮೌಂಟ್ ಕೈಲಾಶ್ ನಿಂದ ಕಾಠ್ಮಂಡುಗೆ ಬಂದಿದ್ದ ನಿತ್ಯಾನಂದನ ಶಿಷ್ಯನೊಬ್ಬನಿಂದ ನಿತ್ಯಾನಂದ ಮತ್ತು ನಟಿ ರಂಜಿತಾ ಸಹಿತ ಒಟ್ಟು 37 ಪಾಸ್ ಪೋರ್ಟ್ ಗಳನ್ನು ಸೀಜ್ ಮಾಡಲಾಗಿದೆ.

ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಠ್ಮಂಡುವಿನಿಂದ ಬರುತ್ತಿದ್ದ ನಿತಿನ್ ಕೌಶಿಕ್ ನನ್ನು ತಪಾಸಣೆ ನಡೆಸಿದಾಗ ಪಾಸ್ ಪೋರ್ಟ್ ಗಳು ಪತ್ತೆಯಾಗಿದೆ. ನಿತ್ಯಾನಂದ ಹಾಗೂ ರಂಜಿತಾ ಸಹಿತ ಒಟ್ಟು 37 ಪಾಸ್ ಪೋರ್ಟ್ ಗಳು ಆತನಲ್ಲಿದ್ದವು. ಆದರೆ ಈ ಪಾಸ್ ಪೋರ್ಟ್ ಗಳನ್ನು ಆತ ತನ್ನ ಬಳಿ ಯಾಕೆ ಇಟ್ಟುಕೊಂಡಿದ್ದ ಎನ್ನುವುದು ಇನ್ನು ತಿಳಿದುಬಂದಿಲ್ಲ. ಪೊಲೀಸರು ಕೌಶಿಕ್ ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಪಾಸ್ ಪೋರ್ಟ್ ಗಳೆಲ್ಲವೂ ಅಸಲಿಯಾಗಿದ್ದು, ನಿತ್ಯಾನ ಹಲವಾರು ಶಿಷ್ಯರ ಪಾಸ್ ಪೋರ್ಟ್ ಗಳು ಇದರಲ್ಲಿದೆ. ಜುಲೈ 30 ರಂದು ಪುರುಷತ್ವ ಪರೀಕ್ಷೆಗೆ ಒಳಪಡಬೇಕಾಗಿದ್ದ ನಿತ್ಯಾನಂದ ಇದರಿಂದ ತಪ್ಪಿಸಿಕೊಂಡಿದ್ದಾನೆ. ಈಗ ಆತನ ಪಾಸ್ ಪೋರ್ಟ್ ಗಳನ್ನು ಜಪ್ತಿ ಮಾಡಲಾಗಿದೆ. ನಿತ್ಯಾನಂದ ಹಾಗೂ ರಂಜಿತಾ ಅವರ ಪಾಸ್ ಪೋರ್ಟ್ ಈತ ಏಕೆ ಇಟ್ಟುಕೊಂಡಿದ್ದ ಎಂಬುದರ ಬಗ್ಗೆ ವಿಚಾರಣೆ ಮುಂದುವರೆದಿದೆ.

Indigo flight 6E-032 ವಿಮಾನದಿಂದ ಕಂಠ್ಮಡುವಿನ ತಿಭುವನ್ ವಿಮಾನ ನಿಲ್ದಾಣದಿಂದ ನವದೆಹಲಿಗೆ ಬಂದಿಳಿದ ನಿತಿನ್ ಕೌಶಿಕ್ ಬಳಿ ಇಷ್ಟೊಂದು ಪಾಸ್ ಪೋರ್ಟ್ ಹೇಗೆ ಬಂದಿದೆ ಎಂಬ ಪ್ರಶ್ನೆಗೆ ಸ್ವತಃ ನಿತಿನ್ ಉತ್ತರಿಸಿದ್ದು, ಎಲ್ಲಾ ಪಾಸ್ ಪೋರ್ಟ್ ಗಳು ನನಗೆ ನೇಪಾಳದಲ್ಲಿ ಒಬ್ಬ ವ್ಯಕ್ತಿ ನೀಡಿದ. ನನಗೆ ಇದರ ಬಗ್ಗೆ ಹೆಚ್ಚು ಗೊತ್ತಿಲ್ಲ. ಸ್ವಾಮೀಜಿ ಆದೇಶ ಪಾಲಿಸಿದ್ದೇನೆ ಎಂದಿದ್ದಾನೆ. ಪಾಸ್ ಪೋರ್ಟ್ ಪ್ರಕರಣ ಭಾರಿ ಕುತೂಹಲ ಕೆರಳಿಸಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The passports of Nithyananda and Tamil actress Ranjitha have been seized from a man called Nitin Koushik at the Capital's Indira Gandhi International Airport even as the self-styled godman is on way to Mount Kailash in Tibet via Nepal.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more