ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುಪತಿ ಲಡ್ಡು ಪೇಟೆಂಟ್‌ ತಿಮ್ಮಪ್ಪನಿಗೇ ಉಳಿಯಿತು

By Srinath
|
Google Oneindia Kannada News

laddu-patent-restored-in-tirupati-tirumala-devasthanams
ಚೆನ್ನೈ, ಆ. 2: ವಿಶ್ವದ ಅತ್ಯಂತ ಶ್ರೀಮಂತ ದೇವನಾಗಿರುವ ತಿರುಪತಿಯ ವೇಂಕಟೇಶ್ವರ ಸ್ವಾಮಿಯ ಮಡಿಲಲ್ಲಿ ತಯಾರಿಸಿರುವ ಜಗತ್ಪ್ರಸಿದ್ಧ ಲಡ್ಡು ತಯಾರಿಕೆಯ ಪೇಟೆಂಟ್‌ ಟಿಟಿಡಿ ಸುಪರ್ದಿಯಲ್ಲೇ ಉಳಿದಿದೆ. ಇದರೊಂದಿಗೆ ಅಪಾರ ಭಕ್ತಿ ಭಾವದೊಂದಿಗೆ ಭಕ್ತರ ಬಾಯಯಲ್ಲಿ ನೀರೂರಿಸುವ ಲಡ್ಡು ಬಗ್ಗೆ ಭಕ್ತರು ನಿರಾತಂಕವಾಗಿರಬಹುದು.

ಈ ಹಿಂದೆಯೇ ಅಂದರೆ 2009ರ ಸೆಪ್ಟೆಂಬರಿನಲ್ಲಿ ತಿರುಪತಿ ತಿರುಮಲ ದೇವಸ್ಥಾನ (TTD) ಆಡಳಿತ ಮಂಡಳಿ ವಿತರಿಸುವ ಲಡ್ಡುವಿಗೆ ವಿಶಿಷ್ಠ ಭೌಗೋಳಿಕ ಸ್ಥಾನಮಾನದ ಪೇಟೆಂಟ್‌ ನೀಡಲಾಗಿತ್ತು. ಆದರೆ ಇದಕ್ಕೆ ತಕರಾರು ತೆಗೆದ ವ್ಯಕ್ತಿಯೊಬ್ಬರು ತಿರುಪತಿ ಲಡ್ಡು ತಯಾರಿಕೆ ಹಕ್ಕು ತನಗೇ ನೀಡಬೇಕು ಎಂದು ರಗಳೆ ತೆಗೆದಿದ್ದರು. ಇದರಿಂದ ಭಕ್ತರು ಮತ್ತು ಟಿಟಿಡಿ ಆತಂಕಗೊಂಡಿತ್ತು.

ತಿಮ್ಮಪ್ಪನ ಪ್ರಸಾದಕ್ಕೆ ಯಾವುದೇ ಧಕ್ಕೆಯಿಲ್ಲ: ತಿರುವನಂತಪುರದ CSIR-NIIST ವಿಜ್ಞಾನಿ ಆರ್ ಎಸ್ ಪ್ರವೀಣ್ ರಾಜ್ ಸಲ್ಲಿಸಿದ್ದ ವಾದವನ್ನು TTD ಅಲ್ಲಗಳೆದಿತ್ತು. 'ತಿಮ್ಮಪ್ಪನ ಪ್ರಸಾದವಾದ ಲಡ್ಡುವಿನ ತಯಾರಿಕೆ, ಗುಣಮಟ್ಟ ಮತ್ತು ಖ್ಯಾತಿ ವಿಶಿಷ್ಟವಾಗಿದೆ. ಹಾಗಾಗಿ ಲಡ್ಡು ಮೇಲಿನ ಸರ್ವಾಧಿಕಾರವನ್ನೂ ತನಗೇ ನೀಡಬೇಕು' ಎಂದು ಪೇಟೆಂಟ್ ರಿಜಿಸ್ಟ್ರಾಟ್ ಅವರನ್ನು ಮಂಡಳಿ ಕೇಳಿತ್ತು.

ಹಾಗಾಗಿ, ಟಿಟಿಡಿ ಲಡ್ಡುವಿನ ಮೇಲೆ ಪಡೆದಿದ್ದ ವಿಶಿಷ್ಠ ಭೌಗೋಳಿಕ ಸೂಚ್ಯಂಕದ ಪೇಟೆಂಟ್‌ Geographical Indicator (GI) tag ಪ್ರಶ್ನಿಸಿದ್ದ ಅರ್ಜಿಯನ್ನು ಮೊನ್ನೆ ಸೋಮವಾರ ವಜಾ ಮಾಡಲಾಗಿದೆ.

ಚೆನ್ನೈನಲ್ಲಿರುವ Trade Marks ಮತ್ತು Geographical Indicator ಸಂಸ್ಥೆಯ ಅಸಿಸ್ಟೆಂಟ್ ರಿಜಿಸ್ಟ್ರಾರ್ ಚೆನ್ನರಾಜ ಜಿ ನಾಯ್ಡು ಅವರು ಟಿಟಿಡಿ ಪರ ತೀರ್ಪು ನೀಡುತ್ತಾ, ಅರ್ಜಿದಾರ ಪ್ರವೀಣ್ ರಾಜ್ ಅವರಿಗೆ 10,000 ರೂಪಾಯಿ ದಂಡ ವಿಧಿಸಿದರು. ಹೀಗಾಗಿ ವಿಶಿಷ್ಠ ರುಚಿಯ ಲಡ್ಡುವಿನ ಮೇಲಿನ ಪೇಟೆಂಟ್‌ ಟಿಟಿಡಿಯ ಬಳಿಯೇ ಉಳಿದುಕೊಳ್ಳಲಿದೆ.

ತಿಮ್ಮಪ್ಪನ ಪ್ರಸಾದವಾದ ಲಡ್ಡುವಿಗೆ ಭಾರಿ ಬೇಡಿಕೆ ಇದೆ. ಹಾಗಾಗಿ ನಿಜವಾದ ಲಡ್ಡು ಕಾಳಸಂತೆಯಲ್ಲೂ ಮಾರಾಟವಾಗುತ್ತದೆ. ಜತೆಗೆ ಬೆಟ್ಟದ ಕೆಳಗೆ ತಿರುಪತಿ ಊರಿನಲ್ಲೂ ನಕಲಿ ಲಡ್ಡು ಮಾರಾಟವಾಗುತ್ತದೆ. ಅಮಾಯಕ ಭಕ್ತರು ಅದುವೇ ತಿಮ್ಮಪ್ಪನ ಪ್ರಸಾದ ಅಂದುಕೊಂಡು ಖರೀದಿಸಿ ಮೋಸ ಹೋಗುತ್ತಾರೆ.

ಇದಕ್ಕೆಲ್ಲ ಕಡಿವಾಣ ಹಾಕಲು Geographical Indications of Goods (Registration and Protection) Act, 1999 ಅನುಸಾರ ತಿಮ್ಮಪ್ಪನ ಪ್ರಸಾದಕ್ಕೆ GI tag ನೀಡಬೇಕು ಎಂದು ಟಿಟಿಡಿ ಕೋರಿತ್ತು.

English summary
Laddu patent restored in Tirupati Tirumala Devasthanams. The Geographical Indications Registry in Chennai upheld on July 30, the TTD claim of a patent over the famous Tirupati laddu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X