ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ರಾಜ್ಯ ಹೂಡಿಕೆದಾರರ ಸ್ವರ್ಗ: ಅಸೋಚಾಂ

By Mahesh
|
Google Oneindia Kannada News

Narendra Modi
ಅಹಮದಾಬಾದ್, ಆ.1:ಅಸೋಚಂ ನೀಡಿರುವ ಇತ್ತೀಚಿನ ವರದಿ ಪ್ರಕಾರ ಗುಜರಾತ್ ರಾಜ್ಯ ಹೂಡಿಕೆದಾರರ ಸ್ವರ್ಗ ಎಂಬ ಹೆಗ್ಗಳಿಕೆ ಗಳಿಸಿದೆ. ದೇಶದ 20 ಔದ್ಯಮಿಕ ರಾಜ್ಯಗಳ ಪೈಕಿ ಉದ್ಯಮಿಗಳು ಗುಜರಾತ್ ಪರ ತಮ್ಮ ಒಲವು ತೋರಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ದೇಶದ ಒಟ್ಟಾರೆ ಹೂಡಿಕೆಯಲ್ಲಿ ಶೇ. 13.52ರಷ್ಟು ಗುಜರಾತ್ ಪಾಲಾಗಿದೆ ಎಂದು ಅಸೋಚಾಂ ಸಮೀಕ್ಷೆ ಹೇಳಿದೆ.

ದೇಶದ 120 ಲಕ್ಷ ಕೋಟಿ ರು. ಹೂಡಿಕೆಯಲ್ಲಿ 16 ಲಕ್ಷ ಕೋಟಿ ರು. ಪಾಲು ಗುಜರಾತ್ ಪಡೆದಿದೆ. ಆದರೆ, ಹೂಡಿಕೆದಾರರನ್ನು ಆಕರ್ಷಿಸುವಲ್ಲಿ ಗುಜರಾತ್ ಯಶಸ್ವಿಯಾದರೂ, ಯೋಜನೆಗಳನ್ನು ಸಾಕಾರಗೊಳಿಸುವಲ್ಲಿ ಸೋತಿದೆ. ಶೇ 42ರಷ್ಟು ಮಾತ್ರ ಯೋಜನೆಗಳು ಮಾತ್ರ ಜಾರಿಯಲ್ಲಿದ್ದು, ಪೂರ್ಣಗೊಳ್ಳುವ ನಿರೀಕ್ಷೆಯಿದೆ. ರಾಷ್ಟ್ರೀಯ ಸರಾಸರಿ ಶೇ 54 ರಷ್ಟಿದೆ ಎಂದು ವರದಿ ಹೇಳಿದೆ.

ಗುಜರಾತ್ ನಲ್ಲಿ ಶೇ. 4ರಷ್ಟು ಯೋಜನೆಗಳು ಈಗಾಗಲೇ ವಿವಿಧ ಕಾರಣಗಳಿಗಾಗಿ ಸ್ಥಗಿತವಾಗಿವೆ. ಶೇ. 2.5ರಷ್ಟು ಯೋಜನೆಗಳ ಬಗ್ಗೆ ಯಾವುದೇ ಮಾಹಿತಿಯೂ ಲಭ್ಯವಿಲ್ಲ. ಆದಾಗ್ಯೂ, ಶೇ. 51 ಯೋಜನೆಗಳು ಇನ್ನೂ ಘೋಷಿಸಿಲ್ಲದ ಸ್ಥಿತಿಯಲ್ಲಿದೆ.

ಇನ್ನುಳಿದಂತೆ ಮಹಾರಾಷ್ಟ್ರ, ಆಂಧ್ರ ಪ್ರದೇಶ, ಒಡಿಶಾ ಮತ್ತು ಕರ್ನಾಟಕ ಹೂಡಿಕೆದಾರರ ನಂತರದ ಆಯ್ಕೆಯ ಉದ್ಯಮ ರಾಜ್ಯಗಳಾಗಿದೆ. ಮಹಾರಾಷ್ಟ್ರದಲ್ಲಿ ರೂ. 14 ಲಕ್ಷ ಕೋಟಿ, ಆಂಧ್ರ ಪ್ರದೇಶದಲ್ಲಿ ರೂ. 12 ಲಕ್ಷ ಕೋಟಿ, ಕರ್ನಾಟಕದಲ್ಲಿ ರೂ. 9.85 ಲಕ್ಷ ಕೋಟಿ ಹೂಡಿಕೆಯನ್ನು ಆಹ್ವಾನಿಸಿವೆ. ಇನ್ನುಳಿದ 15 ರಾಜ್ಯಗಳಲ್ಲಿ ರೂ. 55.89 ಲಕ್ಷ ಕೋಟಿ ಹೂಡಿಕೆಗೆ ಉದ್ಯಮಿಗಳು ಆಸಕ್ತಿ ತೋರಿದ್ದಾರೆ.

ಗುಜರಾತ್ ನಲ್ಲಿ ತಯಾರಿಕಾ (ಶೇ 24), ಇಂಧನ (ಶೇ 39) ಹಾಗೂ ಮಾನವ ಸಂಪನ್ಮೂಲ (ಶೇ 16) ಕ್ಷೇತ್ರಗಳ ಮೇಲೆ ಹೂಡಿಕೆಯಾಗಿದೆ. ಸೇವಾ ಕ್ಷೇತ್ರದಲ್ಲಿ ಉಳಿದ 20 ರಾಜ್ಯಗಳಿಗಿಂತ ಗುಜರಾತ್ ಕೆಳಮಟ್ಟದಲ್ಲಿರುವುದು ಆತಂಕಕಾರಿ ಎಂದು ಅಸೋಚಾಂನ ಗುಜರಾತ್ ಕೌನ್ಸಿಲ್ ಮುಖ್ಯಸ್ಥ ಭ್ಯಾಗ್ಯೇಶ್ ಸೋನೇಜಿ ಹೇಳಿದ್ದಾರೆ.

English summary
In a latest survey conducted by Assocham, Gujarat has emerged as the most preferred investment locale for corporates among 20 industrial states in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X