• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಎಸ್‌ವೈ:ಬಿಜೆಪಿಗೆ ಗುಡ್ ಬೈ, ವಿಜಯದಶಮಿಗೆ ಹೊಸಪಕ್ಷ?

By Srinath
|
ಬೆಂಗಳೂರು, ಜುಲೈ 28: ಯಡಿಯೂರಪ್ಪನವರು ಜೈಲಿಗೆ ಹೋಗುವವರೆಗೆ ರಾಜ್ಯಾಧ್ಯಕ್ಷರ ಬದಲಾವಣೆ ಮಾಡುವುದಿಲ್ಲವೆಂದು ಕೈಕಟ್ಟಿ ಕುಳಿತಿರುವ ಬಿಜೆಪಿ ವರಿಷ್ಠರಿಗೆ ಸರಿಯಾಗಿ ಟಾಂಗ್ ಕೊಡಲು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸಜ್ಜಾಗಿದ್ದಾರೆ.

'ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನವನ್ನು ತಮಗಾಗಲಿ ಅಥವಾ ತಮ್ಮ ಬೆಂಬಲಿಗರಿಗಾಗಲಿ ನೀಡಲೇಬೇಕು ಎಂದು ಬಿಎಸ್‌ವೈ ಹಠ ಹಿಡಿದಿದ್ದಾರೆ. ಒಂದು ವೇಳೆ ಹೈಕಮಾಂಡ್ ಈ ಬೇಡಿಕೆಗೆ ಸೊಪ್ಪು ಹಾಕದಿದ್ದಲ್ಲಿ ಈ ಬಾರಿ ಅವರು ಪಕ್ಷ ಬಿಟ್ಟುಹೋಗುವುದು ಖಡಾಖಂಡಿತ' ಎಂದು ಯಡಿಯೂರಪ್ಪ ಆಪ್ತರು ಪಿಸುಗುಟ್ಟಿದ್ದಾರೆ.

ತಕ್ಷಣಕ್ಕೆ ಬಿಜೆಪಿಗೆ ಗುಡ್ ಬೈ ಹೇಳುವುದು. ಮತ್ತು ಮುಂದಿನ ವಿಧಾನಸಭೆ ಚುನಾವಣೆಯ ವೇಳೆಗೆ ಹೊಸ ಪಕ್ಷ ಕಟ್ಟುವುದು ಯಡಿಯೂರಪ್ಪನವರ ಸದ್ಯದ ಇರಾದೆಯಾಗಿದೆ ಎನ್ನಲಾಗಿದೆ. ಅಥವಾ ಬಂಡಾಯ ನಾಯಕನಾಗಿ ಚುನಾವಣೆಯಲ್ಲಿ ಚಲಾವಣೆಗೆ ಬರುವ ಇಂಗಿತವೂ ಅವರಿಗಿದೆ ಎನ್ನುತ್ತಿವೆ ಆಪ್ತ ಮೂಲಗಳು. ಇದನ್ನು ಕೇಳಿಸಿಕೊಂಡ ಇತರೆ ರಾಜಕೀಯ ಮಂದಿ 'ಎಂದಿನಂತೆ ಇದೂ ಯಡಿಯೂರಪ್ಪನ ರಾಜಕೀಯ ನಡೆಯಷ್ಟೇ' ಎಂದಿದ್ದಾರೆ.

ಆದರೆ ಯಾರು ಏನೇ ಹೇಳಲಿ ಈ ಬಾರಿ ಯಡಿಯೂರಪ್ಪ ನಿರ್ಣಾಯಕ ಸಮರ ಸಾರುವುದು ಖಚಿತ. ಅದರೆ ಅದು ಯಾವ ಘಳಿಗೆಯಲ್ಲಿ ಕೂಡಿಬರುತ್ತದೆ ಎಂಬುದಷ್ಟೇ ಬಾಕಿ. ಈ ಸಂಬಂಧ ಕಾಂಗ್ರೆಸ್ ಸಂಸದರೊಂದಿಗೂ ಅವರು ಮಾತುಕತೆ ನಡೆಸಿದ್ದಾರೆ. 'ಸಿಬಿಐ ಕಾಟದಿಂದ ಪಾರಾಗಲು ಮತ್ತೆ ಸೋನಿಯಾ ಮೇಡಂ ಅವರತ್ತ ದೃಷ್ಟಿಹರಿಸಿದ್ದಾರೆ. ಹಾಗಾಗಿ ಸತತವಾಗಿ ಕಾಂಗ್ರೆಸ್ ಸಂಸದರ ಸಂಪರ್ಕದಲ್ಲಿದ್ದಾರೆ' ಎಂದು ಮೂಲಗಳು ಹೇಳಿವೆ.

ತಮ್ಮ ಅತ್ಯಾಪ್ತ ಶಾಸಕರನ್ನು ಒಬ್ಬೊಬ್ಬರಾಗಿ ಕರೆದು ಮಾತನಾಡಿಸುತ್ತಿರುವ ಯಡಿಯೂರಪ್ಪ, ಬೇರ್ಪಡುವ ಘಳಿಗೆ ಎದುರಾದರೆ ತಮ್ಮೊಂದಿಗೆ ಬರುವಂತೆ ಆಜ್ಞಾಪಿಸುತ್ತಿದ್ದಾರೆ. ಕಟ್ಟಾ ಸುಬ್ರಮಣ್ಯ ನಾಯ್ಡು ಈ ಬಾರಿ ಯಡಿಯೂರಪ್ಪ ಪರ ಆಟಕಟ್ಟಲಿದ್ದಾರೆ. ಇನ್ನು, ಅಬಕಾರಿ ಸಚಿವ ರೇಣುಕಾಚಾರ್ಯ ಅವರಂತೂ 'ಯಡಿಯೂರಪ್ಪ ಅವರು ಭಾರಿ ಜನ ಬೆಂಬಲವುಳ್ಳ ಅಪ್ಪಟ ಜನನಾಯಕ. ಅವರಿಗೆ ಅನ್ಯಾಯವಾದರೆ ಅವರ ಬೆಂಬಲಿಗರಾಗಿ ನಾವು ಕೈಕಟ್ಟಿಕೊಂಡು ಇರುವುದಿಲ್ಲ. ಅವರಿಗೆ ನಾಯಕತ್ವ ಸಿಗಲೇಬೇಕು' ಎಂದು ಮೇಲಿಂದ ಮೇಲೆ ಹೇಳುತ್ತಲೇ ಬಂದಿದ್ದಾರೆ.

ಪ್ರವಾಸಕ್ಕೆ ರಥ ಸಜ್ಜು: ರಾಜ್ಯ ಪ್ರವಾಸಕ್ಕೆ ಯಡಿಯೂರಪ್ಪ ಸದ್ಯದಲ್ಲೇ ರಥವೇರುವುದು ನಿಶ್ಚಿತ. ಅದಕ್ಕಾಗಿಯೇ ಪೂನಾದಲ್ಲಿ ಹೊಸ ಐಷಾರಾಮಿ ವಾಹನಕ್ಕೆ order ಮಾಡಿದ್ದಾರೆ. ವಾಹನೋದ್ಯಮಿ ದಿಲೀಪ್ ಛಾಬ್ರಿಯಾ ಅವರು ಯಡಿಯೂರಪ್ಪ ಅವರ ಅಗತ್ಯಕ್ಕೆ ತಕ್ಕ ವಾಹನವನ್ನು ಸಿದ್ಧಗೊಳಿಸುವ ಹೊಣೆಹೊತ್ತಿದ್ದಾರೆ.

ಆಗಸ್ಟ್ ಮೊದಲ ವಾರದಲ್ಲಿ ಯಡಿಯೂರಪ್ಪ ಈ ವಾಹನವೇರುವುದು ಖಚಿತವಾಗಿದೆ. ವ್ಯಾಪಕ ರಾಜ್ಯ ಪ್ರವಾಸದ ಬಳಿಕ ವಿಜಯದಶಮಿಯಂದು ಹೊಸ ಪಕ್ಷ ಘೋಷಣೆ ಹೊರಬೀಳಲಿದೆ. ಕನಿಷ್ಠ 50 ಸೀಟು ಗೆದ್ದರೆ ಕಾಂಗ್ರೆಸ್ ಜತೆ ಕೈಜೋಡಿಸಿ ಮತ್ತೆ ಮುಖ್ಯಮಂತ್ರಿ ಪೀಠದಲ್ಲಿ ಪ್ರತಿಷ್ಠಾಪಿಸುವುದು ಯಡಿಯೂರಪ್ಪನವರ ಲೆಕ್ಕಾಚಾರವಾಗಿದೆ ಎಂದು ಮೂಲಗಳು ಪಿಸುಗುಟ್ಟಿವೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka BJP crisis: BS Yeddyurappa to quit BJP launch new party by Vijaya Dashami. The former chief minister B.S. Yeddyurappa considering the option of quitting the BJP before the next Assembly elections and striking out on his own by launching a new party say sources.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more