• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಜಿರೆ: ಇಬ್ಬರು ಕಾಲೇಜು ಯುವತಿಯರ ಆತ್ಮಹತ್ಯೆ

By Srinath
|
ಬೆಳ್ತಂಗಡಿ, ಜುಲೈ 28: ಪ್ರತ್ಯೇಕ ಪ್ರಕರಣಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಬ್ಬರು ಕಾಲೇಜು ಯುವತಿಯರು ವರಮಹಾಲಕ್ಷ್ಮಿ ಹಬ್ಬದಂದು ಇಹಲೋಕ ತ್ಯಜಿಸಿದ್ದಾರೆ. ಒಬ್ಬ ಹುಡುಗಿ ಪಿಯುಸಿ ಓದುತ್ತಿದ್ದರೆ ಮತ್ತೊಬ್ಬ ಹುಡುಗಿ ಬಿಬಿಎಂ ವ್ಯಾಸಂಗ ಮಾಡುತ್ತಿದ್ದಳು.

ಪ್ರೇಮ-ಪೀಡನೆ: ಇಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ 17 ವರ್ಷದ ಐಶ್ವರ್ಯಾ ದೀಪಿಕಾ ಶುಕ್ರವಾರ ಬೇಳಗ್ಗೆಯೇ ನೇಣು ಹಾಕಿಕೊಂಡು ಸತ್ತಿದ್ದಾಳೆ.

ಪಕ್ಕದ ಮನೆಯ ಹರ್ಷನ್ ನಾಯರ್ ಪೀಡೆ ಪ್ರೀತಿಗೆ ಬೇಸತ್ತು ಈಕೆ ಸಾವಿಗೀಡಾಗಿದ್ದಾಳೆ. ತನ್ನನ್ನು ಪ್ರೀತಿಸುವಂತೆ ಹರ್ಷನ್ ಸದಾ ಕಾಟಕೊಡುತ್ತಿದ್ದ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಐಶ್ವರ್ಯಾ ದೀಪಿಕಾ ಸೀದಾ ನೇಣಿಗೆ ಕೊರಳೊಡ್ಡಿದ್ದಾಳೆ.

ಹರ್ಷನ್ ನಾಯರನ ಪ್ರೇಮ-ಪೀಡೆ ಬಗ್ಗೆ ಐಶ್ವರ್ಯಾ ದೀಪಿಕಾ ತನ್ನ ಪೋಷಕರು ಮತ್ತು ಅಣ್ಣ ದೀಪಕ್ ಗೆ ಹೇಳಿಕೊಂಡಿದ್ದಳು. ಒಮ್ಮೆ ದೀಪಕ್, ಹರ್ಷನನ್ನು 'ವಿಚಾರಿಸಿಕೊಂಡಿದ್ದ'.

ಇದಕ್ಕೆ ಪ್ರತಿಯಾಗಿ ಪ್ರೇಮಪೀಡಿತ ಹರ್ಷನ್ ತನ್ನ ಸ್ನೇಹಿತರ ಜತೆಗೂಡಿ ಸಾರ್ವಜನಿಕರೆದುರು ದೀಪಕ್ ಗೆ ಗೂಸಾ ಕೊಟ್ಟಿದ್ದ. ಮತ್ತು ಐಶ್ವರ್ಯಾ ದೀಪಿಕಾ ಅಪ್ಪ-ಅಮ್ಮನನ್ನು ಹೀಯಾಳಿಸಿದ್ದ.

ಗಾಯಗೊಂಡ ದೀಪಕ್ ಗೆ ಬೆಳ್ತಂಗಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ದೀಪಿಕಾ ತಂದೆ-ತಾಯಿ ಮಾನಸಿಕವಾಗಿ ಆಘಾತಗೊಂಡಿದ್ದರು. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡು ಐಶ್ವರ್ಯಾ ದೀಪಿಕಾ ಸಾವಿಗೆ ಶರಣಾದಳು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಪೊಲೀಸರು ಹರ್ಷನ್ ನಾಯರನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಐಶ್ವರ್ಯಾ ದೀಪಿಕಾ ಸಾವಿಗೆ ಶ್ರದ್ಧಾಂಜಲಿ ಸಲ್ಲಿಸಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿಗೆ ನಿನ್ನೆ ರಜೆ ಘೋಷಿಸಲಾಗಿತ್ತು.

ಮತ್ತೊಂದು ಪ್ರಕರಣದಲ್ಲಿ 20 ವರ್ಷದ ಸೋನಿಯಾಲ್ ಶುಕ್ರವಾರ ಸಾಯಂಕಾಲ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತಳು ಕೈಕಂಬದ ಸಾಮ್ರಾಟ್ ಇಂಡಸ್ಟ್ರಿಯ ಮಾಲೀಕ ಪದ್ಮನಾಭ ಭಂಡಾರಿ ಅವರ ಪುತ್ರಿ.

ಕಾಲೇಜಿನ ವಾಪಸಾದ ಸೋನಿಯಾಲ್ ಸೀದಾ ತನ್ನ ಕೊಠಡಿ ಸೇರಿಕೊಂಡವಳೇ ನೇಣಿಗೆ ಗೋಣೊಡ್ಡಿದ್ದಾಳೆ. ಸೋನಿಯಾಲ್ ಸಾವಿಗೆ ಕಾರಣವೇನೆಂಬುದು ತಿಳಿದುಬಂದಿಲ್ಲ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In the separate incidents in Dakshina Kannada district on Friday (July 27) two girls committed suicide. While one girl (17-year-old Aishwarya Deepika) was pursuing PUC second year another (20-year-old Sonial) was pursuing her BBM in Shri Dharmasthala Manjunatheshwara College, in Ujire. 

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more