• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೀಲಿ ಜೀನ್ಸ್ ಕೆಂಪು ಅಂಗಿ ತೊಟ್ಟ ಆ ಯುವತಿ ಯಾರು?

By Prasad
|

ಲಂಡನ್, ಜು. 28 : ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದ ಸುಶೀಲ್ ಕುಮಾರ್ ಅವರು ಫಟಫಟಿಸುತ್ತಿದ್ದ ಭಾರತದ ಧ್ವಜವನ್ನು ಹಿಡಿದು ಭಾರತೀಯ ಕ್ರೀಡಾಳುಗಳ ತಂಡವನ್ನು ಲಂಡನ್ ಒಲಿಂಪಿಕ್ಸ್ 2012ನ ಉದ್ಘಾಟನಾ ಸಮಾರಂಭದ ಪಥಸಂಚಲನದಲ್ಲಿ ಮುನ್ನಡೆಸುತ್ತಿದ್ದರೆ ಅವರ ಪಕ್ಕದಲ್ಲಿಯೇ ಹೆಜ್ಜೆಯೊಡನೆ ಹೆಜ್ಜೆ ಹಾಕುತ್ತಿದ್ದ ಅಪರಿಚಿತ ಯುವತಿ ಯಾರೆಂಬುದು ಸದ್ಯಕ್ಕೆ ಬಿಡಿಸಬೇಕಾದ ಒಗಟಾಗಿದೆ.

ಪುರುಷ ಕ್ರೀಡಾಪಟುಗಳು ಮತ್ತು ಅಧಿಕಾರಿಗಳು ಸೂಟು ಧರಿಸಿ ನಡೆಯುತ್ತಿದ್ದರೆ, ಮಹಿಳಾ ಕ್ರೀಡಾಳುಗಳು ಹಳದಿ ಬಣ್ಣದ ಸೀರೆಯ ನೆರಿಗೆಗಳನ್ನು ಚೆಲ್ಲುತ್ತ ಕಂಗೊಳಿಸುತ್ತಿದ್ದರು. ಆದರೆ, ಅವರ ನಡುವಿನಲ್ಲಿ ಬಿಳಿ ಕ್ಯಾನ್ವಾಸ್ ಮೇಲೆ ಕಪ್ಪುಚುಕ್ಕೆಯಿಟ್ಟಂತೆ ನೀಲಿ ಜೀನ್ಸ್ ಮತ್ತು ಕೆಂಪು ಅಂಗಿ ತೊಟ್ಟಿದ್ದ ಅಪರಿಚಿತ ಯುವತಿಯ ಉಪಸ್ಥಿತಿ ಭಾರತೀಯರಿಗೆ ಭಾರೀ ಕಿರಿಕಿರಿ ತಂದಿತು.

ಭಾರತೀಯ ತಂಡದ ಹಿಂದಿದ್ದರೆ ಯಾರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ, ಆದರೆ ಆಕೆ ಇದ್ದದ್ದು ಸುಶೀಲ್ ಕುಮಾರ್ ಪಕ್ಕದಲ್ಲಿಯೆ. ಭಾರತೀಯ ಧ್ವಜವನ್ನು ಹಿಡಿದು ದೇಶದ ಗೌರವವನ್ನು ಮುನ್ನಡೆಸುವ ಭಾಗ್ಯ ಎಷ್ಟೇ ಸಾಧನೆ ಮಾಡಿದರೂ ದೊರೆಯುವುದು ದುರ್ಲಭ. ಅಂಥಹುದರಲ್ಲಿ ಸುಶೀಲ್ ಪಕ್ಕದಲ್ಲಿಯೇ ಪಥಸಂಚಲನದುದ್ದಕ್ಕೂ ನಡೆದ ಈ ಯುವತಿಯಿಂದಾಗಿ ಭಾರತೀಯ ಅಧಿಕಾರಿಗಳು ಕೆಂಡಾಮಂಡಲವಾಗಿದ್ದಾರೆ. ಒಲಿಂಪಿಕ್ಸ್ ಆಯೋಜಕರೊಡನೆ ಈ ಬಗ್ಗೆ ಚರ್ಚಿಸುವುದಾಗಿ ಹೇಳಿದ್ದಾರೆ.

"ಆಕೆ ಅಲ್ಲಿಗೆ ಬಂದಿದ್ದಾದರೂ ಹೇಗೆ? ಭಾರತೀಯ ಆಟಗಾರರೊಡನೆ ಪಥಸಂಚಲನದಲ್ಲಿ ಭಾಗವಹಿಸಲು ಆಕೆಯನ್ನು ಬಿಟ್ಟವರಾರು? ಆಕೆ ಯಾರೆಂಬುದೇ ಗೊತ್ತಿಲ್ಲ. ಇದನ್ನು ಒಲಿಂಪಿಕ್ಸ್ ಆಯೋಜಕರ ಗಮನಕ್ಕೆ ತರಲಾಗಿದೆ. ಭಾರತವನ್ನು ಪ್ರತಿನಿಧಿಸುವ ಆಟಗಾರರೊಡನೆ ಪಥಸಂಚಲನದಲ್ಲಿ ಭಾಗವಹಿಸಲು ಆಕೆಯನ್ನು ಬಿಟ್ಟಿದ್ದು ನಿಜಕ್ಕೂ ನಾಚಿಕೆಗೇಡಿನ ಸಂಗತಿ" ಎಂದು ಬ್ರಿಗೇಡಿಯರ್ ಪಿ.ಕೆ. ಮುರಳಿಧರನ್ ರಾಜಾ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಆ ಯುವತಿ ಸ್ಟೇಡಿಯಂ ಒಳಗಿನ ಟ್ರಾಕ್ ತನಕ ಮಾತ್ರ ಬರುತ್ತಾಳೆಂದು ಮೊದಲು ತಿಳಿಸಲಾಗಿತ್ತು. ಆದರೆ, ಆಕೆ ಭಾರತೀಯ ಆಟಗಾರರ ಜೊತೆ ಇಡೀ ಸ್ಟೇಡಿಯಂ ಸುತ್ತಿದಳು. ನಮ್ಮ ಗುಂಪಿನಲ್ಲಿ ಇನ್ನೊಬ್ಬನೂ ಸೇರಿದ್ದ. ಆದರೆ, ಆತ ಮಾತ್ರ ಸ್ಟೇಡಿಯಂ ಒಳಗಡೆ ಪ್ರವೇಶಿಸಲಿಲ್ಲ. ಪಥಸಂಚಲ ಭಾರತೀಯ ಕ್ರೀಡಾಳುಗಳಿಗೆ ಮತ್ತು ಅಧಿಕಾರಿಗಳಿಗೆ ಮಾತ್ರ ಮೀಸಲಾಗಿತ್ತು. ಆದರೆ ಅನ್ಯರು ಮಧ್ಯ ಪ್ರವೇಶಿಸಲು ಬಿಟ್ಟಿದ್ದು ನಿಜಕ್ಕೂ ಆಶ್ಚರ್ಯ ತಂದಿದೆ" ಎಂದು ರಾಜಾ ಕಿಡಿ ಕಾರಿದ್ದಾರೆ. (ಪಿಟಿಐ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The presence of an unidentified lady beside flag-bearer Sushil Kumar in the Indian contingent during the opening ceremony of the Olympics has prompted the country's miffed officials to take up the issue with the London Olympics 2012 organizers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more