ದ್ವಿಚಕ್ರ ವಾಹನ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ

ಆದರೆ ಪಕ್ಕದ ಗೋವಾ ರಾಜ್ಯವಿದೆಯಲ್ಲ. ಅಲ್ಲಿ ದ್ವಿಚಕ್ರ ವಾಹನದಲ್ಲಿ ಸಂಚರಿಸುವ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯವಾಗಿದೆ. ಈ ರಾಜ್ಯದಲ್ಲಿ ರಸ್ತೆ ಅಪಘಾತಗಳು ವಿಪರೀತ ಎನ್ನಿಸುವಷ್ಟು ಘಟಿಸುತ್ತಿವೆ. ಹಾಗಾಗಿ ಇನ್ನೆರಡೇ ವಾರದಲ್ಲಿ ಹಿಂಬದಿ ಸವಾರರೂ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸುವುದಾಗಿ ಅಲ್ಲಿನ ಸಾರಿಗೆ ಸಚಿವರು ವಿಧಾನಸಭೆಯಲ್ಲಿ ಪ್ರಕಟಿಸಿದ್ದಾರೆ.
ಗಮನಾರ್ಹವೆಂದರೆ ಈ ರಾಜ್ಯದ ಹೆದ್ದಾರಿಗಳಲ್ಲಿ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವವರು ತಲೆಗೊಂದರಂತೆ ಹೆಲ್ಮೆಟ್ ಹಾಕಿಕೊಳ್ಳುವ ಕಾನೂನು ಈಗಾಗಲೇ (2004 ರಿಂದ) ಜಾರಿಯಲ್ಲಿದೆ.
ದೆಹಲಿಯಲ್ಲಿ ಮಹಿಳಾ ಪಿಲ್ಲಿಯನ್ ರೈಡರ್ ಗೆ ಮಾತ್ರ ಹೆಲ್ಮೆಟ್ ಕಡ್ಡಾಯ: ರಾಷ್ಟ್ರದ ರಾಜಧಾನಿಯಲ್ಲೂ ಇಂತಹ ಕಾನೂನೊಂದು ಹೊಸದಾಗಿ ಜಾರಿಗೆ ತರಲಾಗಿದೆ. ಆದರೆ ಅಲ್ಲಿ ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಕುಳಿತುಕೊಳ್ಳುವ ಮಹಿಳಾ ಸವಾರರಿಗೆ ಮಾತ್ರ ಹೆಲ್ಮೆಟ್ ಹಾಕಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.
ಮಹಿಳೆಯರನ್ನು ರಕ್ಷಿಸಲು ಇಂತಹ ಕಾನೂನನ್ನು ಜಾರಿಗೆ ತನ್ನಿ ಎಂದು ಸ್ವತಃ ದೆಹಲಿ ಹೈಕೋರ್ಟ್ ರಾಜ್ಯ ಸರಕಾರಕ್ಕೆ ತಲೆ ಮೇಲೆ ಮೊಟಕಿದಾಗ 'ಆಯ್ತು ಹಾಗೇ ಮಾಡ್ತೀವಿ' ಎಂದು ಸರಕಾರ ಉತ್ತರಿಸಿದೆ.
ಈ ಸಂಬಂಧ Delhi Motor Vehicle Rules 1993 ಕಾನೂನನ್ನು ಮಾರ್ಪಡಿಸಲು ದೆಹಲಿ ಸರಕಾರ ಮುಂದಾಗಿದೆ. ಕುತೂಹಲದ ಸಂಗತಿಯೆಂದರೆ Motor Vehicle Rules ಎಂಬುದು ಕೇಂದ್ರ ಸರಕಾರದ ವ್ಯಾಪ್ತಿಗೆ ಬರುವ ಕಾನೂನು. ಅದರ ಪ್ರಕಾರ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯವೇನೂ ಅಲ್ಲ. ಅದರಲ್ಲೂ ಹಿಂಬದಿ ಕುಳಿತುಕೊಳ್ಳುವ ಮಹಿಳೆ ಹೆಲ್ಮೆಟ್ ಧರಿಸಿರಬೇಕು ಎಂದೇನೂ ಕಾನೂನು ಇಲ್ಲ. ಹಾಗೆಯೇ, ಮುಂಡಾಸು ಧರಿಸಿದ ಸಿಖ್ಖರಿಗೂ ಹೆಲ್ಮೆಟ್ ಕಡ್ಡಾಯವಿಲ್ಲ.
ಮರೆತ ಮಾತು: ಕೆಲವು ಕಡೆ ವಿದೇಶಗಳಲ್ಲಿ ಸೈಕಲ್ ಸವಾರರಿಗೂ ಹೆಲ್ಮೆಟ್ ಕಡ್ಡಾಯವಾಗಿದೆ. [ಹಿಂಬದಿ ಸವಾರರಿಗೆ ಹೆಲ್ಮೆಟ್ : ಒಂದು ವಿಡಂಬನಾತ್ಮಕ ಲೇಖನ]












Click it and Unblock the Notifications