• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಧಾರವಾಡದಲ್ಲಿ ಬಾಲಕನ ಮರ್ಮಾಂಗ ಕತ್ತರಿಸಿದ ಹಂದಿ

By Prasad
|

ಧಾರವಾಡ, ಜು. 28 : ಮಳೆಯಿಂದಾಗಿರುವ ಕೊಚ್ಚೆಯಲ್ಲಿ ಬಿದ್ದು ಹೊರಳಾಡುವ, ಸಿಕ್ಕಸಿಕ್ಕಿದ್ದನ್ನು ತಿನ್ನುತ್ತ ಮಕ್ಕಳು ಮರಿಗಳನ್ನು ಗುಂಪುಕಟ್ಟಿಕೊಂಡು ಎಲ್ಲೆಂದರಲ್ಲಿ ಓಡಾಡುವ ಹಂದಿಗಳ ಗುಂಪನ್ನು ಸಾಕ್ಷಾತ್ ನೋಡಲು ಹುಬ್ಬಳ್ಳಿ-ಧಾರವಾಡಕ್ಕೆ ಬರಬೇಕು. ಆಹಾ, ಆ ದೃಶ್ಯ ನೋಡಲು ಕಣ್ಣುಗಳೆರಡು ಸಾಲದು!

ನಮ್ಮ ಸುತ್ತಲಿನ ಅಸ್ವಚ್ಛತೆಗೆ, ಮಹಾನಗರ ಪಾಲಿಕೆಗಳು ಮಾಡುವ ಕೆಲಸಕ್ಕೆ ಕನ್ನಡಿ ಹಿಡಿದಂತಿರುವ ಕೊಳಚೆ ಪ್ರದೇಶದಲ್ಲಿನ ಗುಂಡಿಗಳನ್ನೇ ತಮ್ಮ ವಾವಸ್ಥಾನ ಮಾಡಿಕೊಳ್ಳುವ ಹಂದಿಹಿಂಡು ಅಂತಹ ಉಪಟಳ ಮಾಡುವುದಿಲ್ಲವಾದರೂ, ನಿಸರ್ಗ ಕರೆಗೆಂದು ಹೋಗಿದ್ದ ಬಾಲಕನೊಬ್ಬನ ಮರ್ಮಾಂಗವನ್ನೇ ಕಚ್ಚಿ ತಾನೂ ಕೂಡ ಅಪಾಯಕಾರಿ ಎಂಬ ಸಂದೇಶವನ್ನು ರವಾನಿಸಿವೆ.

25 ವರ್ಷಗಳಿಂದಲೂ ಅದೇ ಸ್ಥಿತಿಯಲ್ಲಿರುವ ಹಾವೇರಿಪೇಟೆಯ ಮೇದಾರ ಗಲ್ಲಿಯಲ್ಲಿ ಶುಕ್ರವಾರ ಬೆಳಗಿನ ಜಾವ 7.30ರ ಸುಮಾರಿಗೆ ಮನೆಯ ಹೊರಗಡೆ ನಿಸರ್ಗ ಕರೆಗೆಂದು ಹೋದ ಬಾಲಕ ಜಗನ್ ಅನಿಗೋಳ ಎಂಬ 4 ವರ್ಷದ ಬಾಲಕನ ಮೇಲೆರಗಿ ಹಂದಿಯೊಂದು ಆತನ ಮರ್ಮಾಂಗವನ್ನು ಕಚ್ಚಿದೆ. ಆತನ ವೃಷಣ ಕೂಡ ಕಿತ್ತುಬಂದಿದೆ.

ಆತನ ಕಿರುಚಾಟವನ್ನು ಆಲಿಸಿದ ಪಾಲಕರು ಆತನನ್ನು ಕೂಡಲೆ ಜಿಲ್ಲಾ ಸಿವಿಲ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಆತನನ್ನು ದಾಖಲಿಸಲಾಗಿದೆ. ಅಲ್ಲಿ ಬಾಲಕನನ್ನು ದಾಖಲಿಸಿ 2 ಗಂಟೆಯ ನಂತರ ಕಿಮ್ಸ್ ಆರೋಗ್ಯಾಧಿಕಾರಿಗಳು ಚಿಕಿತ್ಸೆ ನೀಡಿದ್ದಾರೆ ಎಂದು ಬಾಲಕ ಸಂಬಂಧಿ ಕಪಿಲ್ ಶಿರಹಟ್ಟಿ ಆರೋಪಿಸಿದ್ದಾರೆ.

ಬಾಲಕನನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದ್ದು, ಆತ ಅಪಾಯದಿಂದ ಪಾರಾಗಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ. ಈ ಬಾಲಕನೇನೋ ಪಾರಾದ ಆದರೆ, ಮುಂದೆಯೂ ಹೀಗೇ ಆಗುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ ಎಂದು ಮೇದಾರ ಗಲ್ಲಿಯ ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಬೀದಿ ನಾಯಿಗಳ ಜೊತೆ ಹಂದಿಗಳ ಉಪಟಳವೂ ಇತ್ತೀಚಿನ ದಿನಗಳಲ್ಲಿ ಜಾಸ್ತಿಯಾಗಿದೆ. ಕಳೆದ ವಾರ ಕೂಡ ಹುಬ್ಬಳ್ಳಿಯಲ್ಲಿ ಹಂದಿಗಳು 6 ವರ್ಷದ ಬಾಲಕನನ್ನು ಕಚ್ಚಿ ಗಾಯಗೊಳಿಸಿದ್ದವು.

ಸ್ವಚ್ಛತೆಯಿಲ್ಲದ ಓಣಿಗಳು. ಮೂಲೆಮೂಲೆಯಲ್ಲಿ ಹರಡಿಕೊಂಡಿರುವ ಕಸದ ರಾಶಿ. ಅಲ್ಲಪಕ್ಕದಲ್ಲೇ ಬಹಿರ್ದೆಸೆಗೆಂದು ಹೋಗುವ ಮಕ್ಕಳು. ಇದನ್ನೇ ಉತ್ತೇಜಿಸುವ ಪಾಲಕರು. ಅಲ್ಲೇ ಗೋಡೆಗುಂಟ ಸುಸ್ಸು ಮಾಡುವ ವಯಸ್ಕರು. ಅಲ್ಲಲ್ಲೇ ಸುತ್ತಾಡುವ ಹಂದಿಯ ಬಳಗ. ಇನ್ನು ಮಳೆಯಾದರಂತೂ ಮುಗಿದೇ ಹೋಯಿತು.

ಇದು ಹುಬ್ಬಳ್ಳಿ-ಧಾರವಾಡದಲ್ಲಿ ಮಾತ್ರ ಕಂಡುಬರುವ ದೃಶ್ಯವಲ್ಲ. ಉತ್ತರ ಕರ್ನಾಟಕದ ಅನೇಕ ಪ್ರದೇಶಗಳಲ್ಲಿ ಹಂದಿಗಳ ಕಾಟ ವಿಪರೀತವಾಗಿದೆ. ಹೊಲಸಿದ್ದಲ್ಲೆಲ್ಲ ಹಂದಿಗಳು ಇಲ್ಲಿ ಇರುತ್ತವಾದರೂ, ಪ್ರದೇಶವನ್ನು ಸ್ವಚ್ಛವಿಡಲು ಅಥವಾ ವಿಪರೀತ ಕಾಟ ಕೊಡುವ ಹಂದಿಗಳನ್ನು ನಿರ್ಮೂಲನ ಮಾಡಲು ಪಾಲಿಕೆಗಳು ಮನಸು ಮಾಡುತ್ತಿಲ್ಲ. ಹಂದಿಗಳನ್ನು ಕಂಡಲ್ಲಿ ಗುಂಡಿಟ್ಟು ಕೊಲ್ಲಬೇಕೆಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆಯಾದರೂ ಅದಿನ್ನೂ ಪೇಪರ್ ಮೇಲೆಯೇ ಇದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A dirty pig has bitten genital of a boy in Dharwad when he had gone for nature's call. Pigs have been causing nuisance in North Karnataka and especially in Hubbali-Dharwad. But still corporation has not taken any action to cull pigs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more