ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನಾರ್ದನ ರೆಡ್ಡಿಯೇ ಜಡ್ಜಿಗೆ ಲಂಚದ ಸ್ಕೆಚ್ ಹಾಕಿದ್ದು

By Srinath
|
Google Oneindia Kannada News

bailgate-all-fingers-point-towards-janardhana-reddy
ಹೈದರಾಬಾದ್, ಜುಲೈ 24: ಸೋದರ ಜನಾರ್ದನ ರೆಡ್ಡಿಗೆ ಜೈಲಿನಿಂದ ಮುಕ್ತಿ ದೊರಕಿಸಲು ನ್ಯಾಯಾಮಗ ವ್ಯವಸ್ಥೆಯನ್ನೇ ಬುಡಮೇಲು ಮಾಡಹೊರಟಿದ್ದ ರೆಡ್ಡಿ ಸೋದರರ ಪ್ರಯತ್ನವನ್ನು ಗಮನಿಸಿದರೆ 'ಅದು ಅವರಿಗವರೇ ಹಳ್ಳ ತೋಡಿಕೊಂಡಂತೆ' ಎನಿಸುತ್ತಿದೆ. ಅದರಲ್ಲೂ king pin ಎ-ಒನ್ ಜನಾರ್ದನ ರೆಡ್ಡಿಯೇ ತಮಗೆ ತಾವು ಹಳ್ಳ ತೋಡಿಕೊಂಡಿದ್ದಾರೆ.

ಈ ಸಂಬಂಧ, ಜನಾರ್ದನ ರೆಡ್ಡಿಯ ನಿಕಟ ಬಂಧು, ಜೈಲುವಾಸಿ ಜಿ ದಶರಥ ರಾಮರೆಡ್ಡಿ ಅವರು ಭ್ರಷ್ಟಾಚಾರ ನಿಗ್ರಹ ದಳದೆದುರು (ACB) ನೀಡಿರುವ ತಪ್ಪೊಪ್ಪಿಗೆ ಹೇಳಿಕೆ ನಿಜಕ್ಕೂ ಗಾಬರಿ ಹುಟ್ಟಿಸುವಂತಾಗಿದೆ. 'ಜಾಮೀನಿಗಾಗಿ-ಲಂಚ' ಪ್ರಕರಣ ಮೊಳಕೆಯೊಡೆದಿದ್ದೇ ಚಂಚಲಗೂಡ ಜೈಲಿನಲ್ಲಿ.

ಹೇಗಾದರೂ ಮಾಡಿ ಜಾಮೀನು ಪಡೆಯಲೇಬೇಕು. ಅದಕ್ಕಾಗಿ ನೇರವಾಗಿ ಸಿಬಿಐ ನ್ಯಾಯಾಧೀಶರನ್ನೇ ಬುಕ್ ಮಾಡುಕೊಂಡರೂ ಆಯ್ತು. ಅದಕ್ಕೆ ಎಷ್ಟು ದುಡ್ಡು ಖರ್ಚಾದರೂ ಪರವಾಗಿಲ್ವಾ' ಎಂದು ಜನಾರ್ದನ ರೆಡ್ಡಿಯೇ ಬೀಜ ಬಿತ್ತಿದರು ಎಂದು ದಶರಥ ರೆಡ್ಡಿ ಹೇಳಿಕೆ ನೀಡಿದ್ದಾರೆ.

ಇದರಿಂದ 'ಜಾಮೀನಿಗಾಗಿ ಲಂಚ' ಪ್ರಕರಣದ ಒಳಕೋವೆಗಳು ಚಂಚಲಗೂಡ ಜೈಲನ್ನು ತಲುಪಿವೆ. 'ನಾನು ಜೈಲಿನಲ್ಲಿದ್ದೆ. ಹೊರಗಿನ ಪ್ರಪಂಚದಲ್ಲಿ ಏನಾಗುತ್ತಿದೆ ಅಂದರೆ ನನ್ನ ಜಾಮೀನಿಗಾಗಿ ಯಾರು ಯಾರಿಗೆ ಲಂಚ ನೀಡುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ' ಎಂದು ಹೇಳಿ ಪ್ರಕರಣದಿಂದ ತಪ್ಪಿಸಿಕೊಳ್ಳಬಹುದು ಎಂಬ ದೂರಾಲೋಚನೆಯಲ್ಲಿದ್ದ ಜನಾರ್ದನ ರೆಡ್ಡಿಗೆ ದಶರಥ ರೆಡ್ಡಿ ಹೇಳಿಕೆ ಈಗ ಮುಳುಗು ನೀರು ತಂದಿರುವುದಂತೂ ಗ್ಯಾರಂಟಿ.

ಎಲ್ಲರ ಬೊಟ್ಟು ಜೈಲು ಜನಾರ್ದನನತ್ತ: ಅಷ್ಟಕ್ಕೂ ರೆಡ್ಡಿಗೆ ಜೈಲುವಾಸ ಅಷ್ಟೊಂದು ಬೇಸರ ತರಿಸಿತ್ತಾ? ಅಥವಾ 'ದುಡ್ ಬಿಸಾಕಿದ್ರೆ ಏನ್ ಬೇಕಾದ್ರೂ ಸಿಗುತ್ತೆ' ಎಂದು ತಾವು ಬೆಳೆಸಿಕೊಂಡು ಬಂದಿದ್ದ ತಮ್ಮದೇ ಸಿದ್ಧಾಂತದಲ್ಲಿ ಆತನಿಗೆ ಅಷ್ಟೊಂದು ನಂಬಿಕೆಯಿತ್ತಾ?

ನೋಡಿ, ಸನ್ಮಾನ್ಯ ಜನಾರ್ದನ ರೆಡ್ಡಿಗಾರು ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಗೆ ಬಂದವರೇ ಕೆಲವೇ ನಿಮಿಷಗಳಲ್ಲಿ ಒಂದು ಮಾತು ಹೇಳುತ್ತಾರೆ: ಕನ್ನಡದ ನೆಲ-ಜಲ ಚೆನ್ನ. ಏನೇ ಆಗಲಿ ನಾನು ಇನ್ನು ಚಂಚಲಗೂಡ ಜೈಲಿಗೆ ವಾಪಸು ಹೋಗುವುದಿಲ್ಲ. ಇಲ್ಲಿನ ಅಧಿಕಾರಿಗಳು ತುಂಬಾ ಒಳ್ಳೆಯವರು ಎಂದು ಎದುರಿಗಿದ್ದ ಪೊಲೀಸರನ್ನು ತೋರಿಸುತ್ತಾ ಹೇಳಿದ್ದರು. ಈ ಮಾತಿನ ಮರ್ಮ ಈಗ ಬಯಲಾಗಿದೆ.

ಜನಾರ್ದನ ರೆಡ್ಡಿಯ ಈ ಮಾತುಗಳನ್ನು ಕೇಳಿದ ಮಂದಿ ಹೌದಾ? ರೆಡ್ಡಿ ಹಾಗಾದರೆವಾಪಸು ಹೈದರಾಬಾದಿಗೆ ಹೋಗೋದಿಲ್ವಾ? ಎಂಬ ಮೂಗಿನ ಮೇಲೆ ಬೆರಳಿಟ್ಟುಕೊಂಡು ಕೇಳಿದ್ದರು. ರೆಡ್ಡಿ ಅಂದು ಅಷ್ಟೊಂದು ಆತ್ಮವಿಶ್ವಾಸದಿಂದ ಹೇಳಿದ್ದ ಆ ಮಾತಿಗೆ ಇಂದು ಅರ್ಥ ಸಿಕ್ಕಿದೆ. ಜಾಮೀನು ಪಡೆಯಲು ಖುದ್ದು ನ್ಯಾಯಾಧೀಶರಿಗಳೇ ಬುಕ್ ಆಗಿದ್ದಾರೆ. ಹಾಗಾಗಿ, ಜಾಮೀನು ಪಡೆದು ಹೊರಬರುವುದು ನಿಶ್ಚಿತ ಎಂದು ರೆಡ್ಡಿ ತುಂಬು ವಿಶ್ವಾಸದಿಂದ ಹೇಳಿದ್ದರು.

ಆಂಧ್ರದ ದಶರಥ, ಜನಾರ್ದನ ರೆಡ್ಡಿಯ ಸಂಬಧಿ ಹೇಗೆ? ಆಂಧ್ರದ ಗೃಹ ನಿರ್ಮಾಣ ಕ್ಷೇತ್ರದಲ್ಲಿ ಉದ್ಯಮಿ ದಶರಥ ರೆಡ್ಡಿಯದು ದೊಡ್ಡ ಹೆಸರು. ಇವರು ತಮ್ಮ ಪುತ್ರಿಯನ್ನು ಜನಾರ್ದನ ರೆಡ್ಡಿಯ ಸೋದರಳಿಯನಿಗೆ ಕೊಟ್ಟು ಮದುವೆ ಮಾಡಿಕೊಂಡಿದ್ದಾರೆ.
KMF ಸೋಮಶೇಖರ ರೆಡ್ಡಿ ಅನೇಕ ಸಲ ಚಂಚಲಗೂಡ ಜೈಲಿಗೆ ಭೇಟಿ ನೀಡಿ ಸೊದರ ಜನಾರ್ದನನನ್ನು ಭೇಟಿಯಾಗುತ್ತಿದ್ದರು. ಆದರೆ ಅದೊಮ್ಮೆ ಜನಾರ್ದನ ರೆಡ್ಡಿ ಜಾಮೀನು ಸ್ಕೆಚ್ ಸಿದ್ಧಪಡಿಸುತ್ತಿದ್ದಂತೆ plan ಪ್ರಕಾರ ನ್ಯಾಯಾಧೀಶರುಗಳನ್ನು ಬುಕ್ ಮಾಡಿಕೊಳ್ಳಲು ದಶರಥನನ್ನು ಸಂಪರ್ಕಿಸುವಂತೆ ಸೋಮಶೇಖರ್ ಗೆ ಜನಾರ್ದನ ಹಿತವಚನ ಹೇಳುತ್ತಾರೆ.

ಆಗ ದಶರಥ ರೆಡ್ಡಿ ಕಣಕ್ಕಿಳಿಯುತ್ತಾರೆ. ಮತ್ತು ತಮಗೆ ಪರಿಚಯವಿರುವ ವಕೀಲರುಗಳ ಮೂಲಕ KMF ಸೋಮಶೇಖರ ಜತೆಗೂಡಿ ಜಡ್ಜುಗಳನ್ನು ಭೇಟಿಯಾಗಿ ಜಾಮೀನಿಗೆ ವೇದಿಕೆ ಸಿದ್ಧಪಡಿಸಿಕೊಳ್ಳುತ್ತಾರೆ. ಆ ಸಂದರ್ಭದಲ್ಲೇ ಸ್ವತಃ KMF ಸೋಮಶೇಖರ 100 ಕೋಟಿ ರುಪಾಯಿ ಲಂಚದ ಪ್ರಸ್ತಾವನೆ ಮಾಡುತ್ತಾರೆ.

'ಜಾಮೀನಿಗಾಗಿ-ಲಂಚ' ಪ್ರಕರಣದಲ್ಲಿ ಮತ್ತೊಂದು ಹೆಸರೂ ಪ್ರಮುಖವಾಗಿ ಕೇಳಿಬಂದಿದೆ. ಅವರೇ ಆಂಧ್ರದ ಹಾಲಿ ಕಾನೂನು ಸಚಿವ ಎರಸು ಪ್ರತಾಪ ರೆಡ್ಡಿ. ಇವರೂ ಸಹ ಜನಾರ್ದನ ರೆಡ್ಡಿಯ ಸಂಬಂಧಿ. ಆದರೆ ಅವರು ಪ್ರಕರಣದಲ್ಲಿ ತಮ್ಮ ಪಾತ್ರವೇನೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

English summary
Janardhan Reddy family ready to pay Rs 100 cr for bail says Reddy’s relative, G. Dasarath Ram Reddy, who was arrested by the Anti-Corruption Bureau for his alleged involvement in the cash-for-bail scam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X