• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಂಡೋಮ್ ರಾಶಿಯಲ್ಲಿ ಮುಳುಗಿದ ಒಲಿಂಪಿಕ್ಸ್

By Mahesh
|
London olympics 2012 Raunchiest Game
ಲಂಡನ್, ಜು.19: ಹಿಂದೆಂದೂ ಕಂಡು ಕೇಳಿರದಂಥ ಬೇಡಿಕೆಗೆ ಲಂಡನ್ ಒಲಿಂಪಿಕ್ಸ್ ಆಯೋಜಕರು ಬೆಸ್ತು ಬಿದ್ದಿದ್ದಾರೆ. 17 ದಿನಗಳ ಕ್ರೀಡಾ ಹಬ್ಬದ ಸಂದರ್ಭದಲ್ಲಿ ಪ್ರತಿ ಕ್ರೀಡಾಪಟುವಿಗೆ ದಿನವೊಂದಕ್ಕೆ 15 ಕಾಂಡೋಮ್ ನೀಡಲಾಗುತ್ತಿದ್ದು, ಬೇಡಿಕೆ ತಗ್ಗದಿರುವುದು ಆಯೋಜಕರ ತಲೆ ನೋವಿಗೆ ಕಾರಣವಾಗಿದೆ.

ಸುಮಾರು 150,000 ಕಾಂಡೋಮ್ ಗಳನ್ನು ಉಚಿತವಾಗಿ ಹಂಚಲಾಗುತ್ತಿದೆ. ಬೀಜಿಂಗ್ ಒಲಿಂಪಿಕ್ಸ್ ಗೆ ಹೋಲಿಸಿದರೆ 50,000 ಅಧಿಕ ಬೇಡಿಕೆ ಬಂದಿದೆ. 1998ರ ಸಿಯೋಲ್ ಒಲಿಂಪಿಕ್ಸ್ ನಿಂದ ಅಥ್ಲೀಟ್ ಗಳ ಕಾಮದಾಹ ಹೆಚ್ಚಿದೆ ಎಂದು ಡೈಲಿ ಮೇಲ್ ವರದಿ ಹೇಳುತ್ತದೆ. ಸಿಯೋಲ್ ನಲ್ಲಿ 8,500 ಕಾಂಡೋಮ್ ಮಾತ್ರ ಪೂರೈಸಲಾಗಿತ್ತು. 1992ರ ಬಾರ್ಸಿಲೋನ ಒಲಿಂಪಿಕ್ಸ್ ನಲ್ಲಿ ಈ ಸಂಖ್ಯೆ 50,000 ಮುಟ್ಟಿತ್ತು. 2000ರ ಸಿಡ್ನಿ ಒಲಿಂಪಿಕ್ಸ್ ನಲ್ಲಿ 70,000 ಕಾಂಡೋಮ್ ನೀಡಲಾಗಿತ್ತು.

ಅದರೆ, ಈ ಬಾರಿ ಸೆಕ್ಸ್ ಟೂರಿಸಂಗೆ ಭಾರಿ ಕಡಿವಾಣ ಹಾಕಲಾಗಿದೆ. ಬದಲಾಗಿದೆ ಅಥ್ಲೀಟ್ ಗಳು ತಮ್ಮ ಪತ್ನಿ, ಗೆಳತಿ, ಸಂಗಾತಿಗಳ ಜೊತೆ ಕಾಲ ಕಳೆಯಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ.

ಅಮೆರಿಕದ ಮಹಿಳಾ ಫುಟ್ಬಾಲ್ ಪಟು ಹೊಪ್ ಸೋಲೊ ಹೇಳುವ ಪ್ರಕಾರ, ಅಥ್ಲೀಟ್ ಗಳ ಕಿಟ್ ನಲ್ಲಿ ಪ್ರಥಮ ಚಿಕಿತ್ಸೆ ಡಬ್ಬಿ ಜೊತೆಗೆ ಕಾಂಡೋಮ್ ಕೂಡಾ ಅತ್ಯವಶ್ಯಕವಾಗಿದೆ. ಲಂಡನ್ ನಲ್ಲಿ ಕಾಮದಾಹ ಅಧಿಕವಾಗಿರುವ ನಿರೀಕ್ಷೆಯಿದೆ ಎಂದು ಹೊಪ್ ಹೇಳಿದ್ದಾರೆ.

ಬೀಜಿಂಗ್ ನಲ್ಲಿ ಹಾಲಿವುಡ್ ನಟ ವಿನ್ಸ್ ವಾಗ್ ಹಾಗೂ ಸ್ಟೀವ್ ಬೈರ್ನ್ ಜೊತೆ ಪಾರ್ಟಿ ಮಾಡಿದ್ದನ್ನು ಸ್ಮರಿಸುವ ಹೊಪ್, ಇದೇ ರೀತಿ ಲಂಡನ್ ನಲ್ಲೂ ಸಂಭ್ರಮಾಚರಣೆ ನಿರೀಕ್ಷೆಯಿದೆ ಎಂದಿದ್ದಾರೆ.

ಡ್ಯೂರೆಕ್ಸ್ ಕಂಪನಿಗೆ ಭರ್ಜರಿ ವ್ಯವಹಾರ: ಲಂಡನ್ ಒಲಿಂಪಿಕ್ಸ್ 2012ನ ಅಧಿಕೃತ ಕಾಂಡೋಮ್ ಪೂರೈಕೆ ಸಂಸ್ಥೆಯಾಗಿರುವ ಡ್ಯೂರೆಕ್ಸ್ ಭರ್ಜರಿ ವ್ಯವಹಾರ ಮಾಡಿದೆ. ಸುಮಾರು 23,500 ಸ್ಪರ್ಧಾಳುಗಳಿಗೆ ಕಾಂಡೋಮ್ ಪೂರೈಸಲು ಸಂಸ್ಥೆ ಸಿದ್ಧವಾಗಿದೆ. ಪುರುಷ, ಮಹಿಳಾ ಕಾಂಡೋಮ್ ಗಳು ವೈವಿಧ್ಯವಾಗಿ ಪೂರೈಸಲಾಗುತ್ತಿದೆ.

ಸುರಕ್ಷಿತ ಮಿಲನ ನಮ್ಮ ಗುರಿ: ವೇಶ್ಯಾವಾಟಿಕೆ ಮೇಲೆ ನಿಗಾ ಇಟ್ಟಿರುವ ಬ್ರಿಟಿಷ್ ಪೊಲೀಸರು ಹಾಗೂ ಬಿಟಿಷ್ ಆರೋಗ್ಯ ಕೇಂದ್ರಗಳು ಎಲ್ಲೆಡೆ ಸುರಕ್ಷಿತ ಮಿಲನದ ಬಗ್ಗೆ ಮಾಹಿತಿ, ಸಲಹೆ ನೀಡುತ್ತಿದ್ದಾರೆ. ಲೈಂಗಿಕ ರೋಗಗಳ ಸೋಂಕು ಹರಡದಂತೆ ಮುನ್ನಚ್ಚರಿಕೆ ವಹಿಸಲಾಗಿದೆ. ಎಲ್ಲೆಡೆ just in case ಕಿಟ್ ಗಳನ್ನು ವಿತರಿಸಲಾಗುವುದು. ಮಹಿಳಾ ಅಥ್ಲೀಟ್ ಗಳಿಗೆ ಅಗತ್ಯವಾದ ಐಪಿಲ್ ಗಳನ್ನು ನೀಡಲಾಗುವುದು ಎಂದು British Pregnancy Advisory Service ಹೇಳಿದೆ. ಇದಲ್ಲದೆ ಸ್ಪರ್ಧಾಳುಗಳಿಗೆ ಉಚಿತ ಮಸಾಜಿಂಗ್, ENT, ದಂತ ಚಿಕಿತ್ಸೆ ದೊರೆಯಲಿದೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
London olympics 2012 set to become raunchiest tournament as London Olympic Organising Committee (Locog) has ordered 150,000 free condoms for athletes staying at the London Olympic Village. After 100,000 condoms didn't prove sufficient at the 2008 Beijing Games.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more