• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿತ್ಯಾನಂದಗೆ ಏನೆಲ್ಲ ಸೆಕ್ಸ್ ಟೆಸ್ಟ್ ಮಾಡ್ತಾರೆ ಗೊತ್ತಾ?

By Srinath
|

ಬೆಂಗಳೂರು, ಜುಲೈ 18: ಬಿಡದಿ ಆಶ್ರಮದ ಸ್ವಚ್ಚಂದ ಹಕ್ಕಿ ನಿತ್ಯಾನಂದ ಮಹಾಸ್ವಾಮಿಗೆ ಇದೇ ಜುಲೈ 30ರಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸೆಕ್ಸ್ ಟೆಸ್ಟ್ ಮಾಡ್ತಾರಂತೆ. ಹಾಗಾದರೆ ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ ವೈದ್ಯರು ವ್ಯಕ್ತಿಯೊಬ್ಬರ ಲೈಂಗಿಕ ಸಾಮರ್ಥ್ಯವನ್ನು ಹೇಗೆ ಅಳೆಯುತ್ತಾರೆ/ನಿರ್ಧರಿಸುತ್ತಾರೆ!? ಏನೆಲ್ಲ ಟೆಸ್ಟುಗಳು, ಎಷ್ಟು ದಿನಗಳ ಕಾಲ? ನಡೆಯುತ್ತವೆ ಎಂಬುದನ್ನು ತಿಳಿಯುವ ಕುತೂಹಲವೇ? ಹಾಗಾದರೆ ಮುಂದೆ ಓದಿ...

ಕಡ್ಡಾಯವಾಗಿ ಸಮಗ್ರ ರಕ್ತ ಪರೀಕ್ಷೆ ನಡೆಯುತ್ತದೆ. ಜತೆಗೆ ಹಾರ್ಮೊನುಗಳ ಪ್ರಮಾಣ ತಿಳಿದುಕೊಳ್ಳಬೇಕಾಗುತ್ತದೆ. ಇನ್ನೂ ಹಲವಾರು ಟೆಸ್ಟುಗಳನ್ನು ಮಾಡಬೇಕಾಗುತ್ತದೆ. ಅದಕ್ಕಾಗಿ ಮೂರ್ನಾಲ್ಕು ದಿನಗಳ ಕಾಲ ಪರೀಕ್ಷೆಗೆ ತುತ್ತಾದ ವ್ಯಕ್ತಿ ಆಸ್ಪತ್ರೆಗೆ ಅಂಡಲೆಯಬೇಕಾಗುತ್ತದೆ. ವೀರ್ಯ ಪರೀಕ್ಷೆ, ನಿಮಿರುವಿಕೆ ಉತ್ತೇಜಿಸುವ ಔಷಧಗಳನ್ನೂ ವ್ಯಕ್ತಿಗೆ ನೀಡಬೇಕಾಗುತ್ತದೆ.

ಇದೆಲ್ಲಕ್ಕಿಂತ ಮುನ್ನ ವೈದ್ಯರು ಪರೀಕ್ಷಾರ್ಥಿಯ (ಈ ಪ್ರಕರಣದಲ್ಲಿ ನಿತ್ಯಾನಂದನ) ಇಡೀ ಬೆತ್ತಲೆ ದೇಹವನ್ನು ಬರಿಗಣ್ಣಲ್ಲಿ ಸೂಕ್ಷ್ಮವಾಗಿ ಅವಲೋಕಿಸುತ್ತಾರೆ. ಏಕೆಂದರೆ ಪರೀಕ್ಷಾರ್ಥಿ ಈ ಹಿಂದೆ ಯಾವುದಾದರೂ ಶಸ್ತ್ರಚಿಕಿತ್ಸೆಗಳು ನಡೆದಿವೆಯಾ? ಏನಾದರೂ ಕುರುಹುಗಳು ಕಾಣಸಿಗುತ್ತಾವಾ? ಶಸ್ತ್ರಚಿಕಿತ್ಸೆ ಆಗಿದ್ದರೆ ಯಾವಾಗ, ಏತಕ್ಕಾಗಿ ಮಾಡಲಾಗಿದೆ ಎಂಬುದರ ವಿವರಣೆ ಪಡೆಯಲಿದ್ದಾರೆ. ಅಂದರೆ ಅದೊಂದು ತರಹದ ಪ್ರೀಮೆಡಿಕಲ್ ಹಿಸ್ಟರಿ.

ಅದಾದನಂತರ ನಿಮಿರುವಿಕೆ ವೈಫಲ್ಯ ಟೆಸ್ಟ್. ವೀರ್ಯ ವಿಶ್ಲೇಷಣೆ. ವೀರ್ಯ ಗಣತಿ. ವೀರ್ಯ ಗುಣಮಟ್ಟದ ಟೆಸ್ಟುಗಳು ನಡೆಯುತ್ತವೆ. ಇದರಿಂದ ವ್ಯಕ್ತಿಗೆ ಷಂಡತ್ವ ಇದೆಯಾ, ಇಲ್ವಾ ಎಂಬುದು ತಿಳಿದುಬರುತ್ತದೆ. ಇವುಗಳಲ್ಲಿ ಪರೀಕ್ಷಾರ್ಥಿಯು ಕನಿಷ್ಠ ಪ್ರಮಾಣದಲ್ಲಿ ಪಾಸಾದರು ಆ ವ್ಯಕ್ತಿಯಲ್ಲಿ ಲೈಂಗಿಕ ಸಾಮರ್ಥ್ಯ ಇದೆ (potent) ಎಂದು ವೈದ್ಯಲೋಕ ಘೋಷಿಸುತ್ತದೆ.

ಮುಂದೆ ಥೈರಾಯಿಡ್ ಪರೀಕ್ಷೆಯೂ ನಡೆಯುತ್ತದೆ. ಇದರಿಂದ ವ್ಯಕ್ತಿಯ ಫಲವತ್ತತೆಯನ್ನು ಅಳೆಯಬಹುದು. ಕಡಿಮೆ ಹಾರ್ಮೋನು ಇದ್ದರೆ (T4 hormones) ಕಡಿಮೆ ವೀರ್ಯ ಇದೆ ಎಂದರ್ಥ. ಇನ್ನು, ಈ ನಿಮಿರುವಿಕೆ ಟೆಸ್ಟ್ ವೇಳೆ ಏನೇ ಉದ್ರೇಕಕಾರಿ ಔಷಧಗಳನ್ನು ನೀಡಿದರೂ ಪುರುಷನಿಗೆ ನಿಮಿರುವಿಕೆ ಸಾಧ್ಯವಾಗುವುದಿಲ್ಲ. Testosterone, FSH (follicle-stimulating hormone), LH (luteinizing hormone) ನಂತಹ ಟೆಸ್ಟುಗಳೂ ಪುರುಷತ್ವ ಸಾಬೀತುಪಡಿಸಲು ನೆರವಾಗುತ್ತವೆ.

ನಿತ್ಯಾನಂದ ಸ್ವಾಮಿ ಪ್ರಕರಣದಲ್ಲಿ ಈ ಟೆಸ್ಟುಗಳೆಲ್ಲ ಆದ ಮೇಲೆ ಏನಾಗುತ್ತದೆ. ವೈದ್ಯರು ಆಳವಾದ ಅಧ್ಯಯನಗಳ ನಂತರ ತಮ್ಮ ವರದಿಯನ್ನು ನ್ಯಾಯಾಲಯಕ್ಕೆ ಒಪ್ಪಿಸುತ್ತಾರೆ. ಮುಂದೆ ಆ ವೈದ್ಯಕೀಯ ವರದಿಯನ್ನು ಆಧಾರವಾಗಿಸಿಕೊಂಡು ನ್ಯಾಯಾಲಯ ನಿತ್ಯಾನಂದನ ಬಗ್ಗೆ ತನ್ನ ತೀರ್ಪನ್ನು ಘೋಷಿಸುತ್ತದೆ.

ಒಂದು ವೇಳೆ ಈ ವೈದ್ಯಕೀಯ ಪರೀಕ್ಷೆಗಳಿಂದ ನಿತ್ಯಾನಂದ ಪ್ರಭುಗಳು ಷಂಡರಲ್ಲ ಎಂಬುದು ಸಾಬೀತಾದರೆ ನಿಜಕ್ಕೂ ಪ್ರಭುವಿಗೆ ಪೀಕಲಾಟಕ್ಕೆ ಇಟ್ಟುಕೊಳ್ಳುತ್ತದೆ. ನಿತ್ಯಾ ರಗಳೆ ವಿಪರೀತವಾಗುತ್ತದೆ. ಆದರೆ ಸದ್ಯಕ್ಕಂತೂ crossed fingers body language ನೊಂದಿಗೆ ಪ್ರಭುಗಳು ಧ್ಯಾನಸ್ಥರಾಗಬೇಕಾಗುತ್ತದೆ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The self-styled godman Swami Nithyananda's sex capacity tests will be conducted at Victoria Hospital, Bangalore from 30 July 2012. Karnataka High court has given consent to CID police to carry out the test. The test would reveal the potency of the Swamiji. Which are the tests?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more