ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಲ್ಲಾ ಉಸ್ತುವಾರಿ ಸಚಿವರ ಸಂಪೂರ್ಣ ಪಟ್ಟಿ

By Mahesh
|
Google Oneindia Kannada News

District In Charge Ministers
ಬೆಂಗಳೂರು, ಜು.16: ಜಗದೀಶ್ ಶೆಟ್ಟರ್ ನೇತೃತ್ವದ ಸರ್ಕಾರದ ಸಚಿವರ ಖಾತೆ ಹಂಚಿಕೆ, ಉಪ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಆಡಳಿತ ಕೇಂದ್ರ ವಿಧಾನ ಸೌಧ ಹಾಗೂ ವಿಕಾಸ ಸೌಧದಲ್ಲಿ ಕೊಠಡಿ ಹಂಚಿಕೆ ಕಾರ್ಯ ಪೂರ್ಣಗೊಂಡಿದೆ. ಖಾತೆ ಹಂಚಿಕೆ ಬಗ್ಗೆ ಅಪಸ್ವರಗಳು ಕೇಳಿ ಬಂದಿದೆ.

ಈ ನಡುವೆ ಸ್ವಾತಂತ್ರೋತ್ಸವದಂದು ಅಯಾ ಜಿಲ್ಲೆಗಳಲ್ಲಿ ರಾಷ್ಟ್ರಧ್ವಜ ಹಾರಿಸಲು ಅಧಿಕೃತ ನಾಯಕರು ಇಲ್ಲದ್ದನ್ನು ಗಮನಿಸಿದ ಸಿಎಂ, ತಕ್ಷಣವೇ ಉಸ್ತುವಾರಿ ಸಚಿವರನ್ನು ನೇಮಿಸಿದ್ದಾರೆ. ತಮಗೆ ಸಿಕ್ಕಿರುವ ಜಿಲ್ಲೆಗಳ ಬಗ್ಗೆ ಯಾವುದೇ ಕ್ಯಾಬಿನೆಟ್ ಸಚಿವರು ಖ್ಯಾತೆ ತೆಗೆದಿರುವ ಸುದ್ದಿ ಬಂದಿಲ್ಲ.

33 ಸಚಿವರ ಪೈಕಿ 23 ಸಚಿವರು ತಮಗೆ ಸಿಕ್ಕಿರುವ ಖಾತೆ ಹಾಗೂ ಕೊಠಡಿಗಳ ಬಗ್ಗೆ ಸಮಾಧಾನ ವ್ಯಕ್ತಪಡಿಸಿದ್ದಾರೆ. ಉಳಿದವರ ಗೊಂದಲ ಮುಂದುವರೆದಿದೆ.

ನಾಲ್ಕು ಸಚಿವರಿಗೆ ಯಾವುದೇ ಜಿಲ್ಲೆ ಉಸ್ತುವಾರಿ ನೀಡಿಲ್ಲ. ಎಸ್ ಸುರೇಶ್ ಕುಮಾರ್, ಶೋಭಾ ಕರಂದ್ಲಾಜೆ, ಬಾಲಚಂದ್ರ ಜಾರಕಿಹೊಳಿ ಹಾಗೂ ಬಸವರಾಜ ಬೊಮ್ಮಾಯಿ ಅವರಿಗೆ ಯಾವುದೇ ಜಿಲ್ಲೆಗಳ ಉಸ್ತುವರಿ ನೀಡಿಲ್ಲ. ಧಾರವಾಡ ಜಿಲ್ಲೆ ಉಸ್ತುವಾರಿಯನ್ನು ಸ್ವತಃ ಸಿಎಂ ಶೆಟ್ಟರ್ ಅವರೇ ವಹಿಸಿಕೊಂಡಿದ್ದಾರೆ.

ಚಿಕ್ಕಮಗಳೂರು ಉಸ್ತುವಾರಿ ಡಿ.ಎನ್‌. ಜೀವರಾಜ್‌ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಉಸ್ತುವಾರಿ ಸಿಟಿ ರವಿಗೆ ನೀಡುವ ಮೂಲಕ ಒಂದೇ ಕ್ಷೇತ್ರ ಇಬ್ಬರು ಸಚಿವರಿಗೆ ಅವರ ಕ್ಷೇತ್ರಗಳನ್ನೇ ನೀಡಲಾಗಿದೆ.
ಯಾರಿಗೂ ಬೇಡವಾದ ಚಾಮರಾಜನಗರ ಜಿಲ್ಲೆ ಉಸ್ತುವಾರಿಯನ್ನು ವಿ ಸೋಮಣ್ಣ ವಹಿಸಿಕೊಂಡಿದ್ದಾರೆ. ಚಾಮರಾಜನಗರ ಜಿಲ್ಲೆ ಸ್ಥಾಪನೆಯಾಗಿ 25 ವರ್ಷ ಪೂರೈಸುವ ಹಿನ್ನೆಲೆಯಲ್ಲಿ ಸೋಮಣ್ಣ ಅವರಿಂದ ಜನರಿಗೆ ಹೆಚ್ಚಿನ ನಿರೀಕ್ಷೆಗಳಿದೆ.

ಜಿಲ್ಲೆ ಉಸ್ತುವಾರಿ ಸಚಿವರು
ಧಾರವಾಡ ಜಗದೀಶ್ ಶೆಟ್ಟರ್
ಬಾಗಲಕೋಟೆ ಗೋವಿಂದ ಕಾರಜೋಳ
ಬಿಜಾಪುರ ಎಸ್‌.ಕೆ. ಬೆಳ್ಳುಬ್ಬಿ
ಕೊಪ್ಪಳ ಮುರುಗೇಶ್‌ ನಿರಾಣಿ
ಬೆಳಗಾವಿ ಉಮೇಶ್ ಕತ್ತಿ
ಗದಗ ಕಳಕಪ್ಪ ಬಂಡಿ
ಶಿವಮೊಗ್ಗ ಕೆ.ಎಸ್‌. ಈಶ್ವರಪ್ಪ
ಹಾವೇರಿ ಸಿ.ಎಂ. ಉದಾಸಿ
ದಾವಣಗೆರೆ ಎಸ್. ಎ. ರವೀಂದ್ರನಾಥ್
ಯಾದಗಿರಿ ನರಸಿಂಹ ನಾಯಕ(ರಾಜೂ ಗೌಡ)
ಚಿಕ್ಕಮಗಳೂರು ಜೀವರಾಜ್
ಉತ್ತರ ಕನ್ನಡ ವಿಶ್ವೇಶ್ವರ ಹೆಗಡೆ ಕಾಗೇರಿ
ಉಡುಪಿ ಶ್ರೀನಿವಾಸ್‌ ಪೂಜಾರಿ
ದಕ್ಷಿಣ ಕನ್ನಡ ಸಿ.ಟಿ ರವಿ
ತುಮಕೂರು ಸೊಗಡು ಶಿವಣ್ಣ
ಹಾಸನ ಅರವಿಂದ ಲಿಂಬಾವಳಿ
ಚಾಮರಾಜನಗರ ವಿ ಸೋಮಣ್ಣ
ಮೈಸೂರು ಎಸ್. ಎ. ರಾಮದಾಸ್
ಮಂಡ್ಯ
ಸಿ.ಪಿ ಯೋಗೇಶ್ವರ್
ಬೆಂಗಳೂರು ನಗರ
ಆರ್ ಅಶೋಕ್
ಚಿಕ್ಕಬಳ್ಳಾಪುರ ಎಂ ನಾರಾಯಣಸ್ವಾಮಿ
ಕೋಲಾರ ವರ್ತೂರು ಪ್ರಕಾಶ್
ರಾಯಚೂರು ಆನಂದ್ ಆಸ್ನೋಟಿಕರ್
ಬಳ್ಳಾರಿ ಆನಂದ್ ಸಿಂಗ್
ಚಿತ್ರದುರ್ಗ ಬಿಜೆ ಪುಟ್ಟಸ್ವಾಮಿ
ರಾಮನಗರ ಎಂಪಿ ರೇಣುಕಾಚಾರ್ಯ
ಕೊಡಗು ಅಪ್ಪಚ್ಚು ರಂಜನ್
ಬೀದರ್ ಸುನೀಲ್ ವ್ಯಾಲೆಪುರೆ
ಬೆಂಗಳೂರು ಗ್ರಾಮಾಂತರ ಬಿ.ಎನ್. ಬಚ್ಚೇಗೌಡ
English summary
Karnataka CM Jagadish Shettar has reshuffled district In-charge Ministers in the State. Shettar has taken in charge of Dharwad. Shobha, Suresh kumar are not given any districts in charge responsibility. Somanna gets Chamarajanagar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X