ಮೈಂಡ್ ಟ್ರೀ ಲಾಭದಲ್ಲಿ ಶೇ 116 ರಷ್ಟು ಪ್ರಗತಿ

Posted By:
Subscribe to Oneindia Kannada
MindTree reports spectacular growth in net profits

ಬೆಂಗಳೂರು, ಜು.13: ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿ ಮೈಂಡ್ ಟ್ರೀ ಕಂಪನಿ 2012-13 ಆರ್ಥಿಕ ವರ್ಷದ ಮೊದಲ ತ್ರೈಮಾಸಿಕ ವರದಿಯನ್ನು ಸೋಮವಾರ (ಜು.16) ಪ್ರಕಟಿಸಿದೆ.

ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಸುಮಾರು ಶೇ 116ರಷ್ಟು ಹೆಚ್ಚುವರಿ ಲಾಭ ಗಳಿಸಿದ ಸಾಧನೆ ಮಾಡಿದೆ. 16.7 ಮಿಲಿಯನ್ ಡಾಲರ್ ನಂತೆ year on year ನಲ್ಲಿ ಲಾಭ ಬಂದಿದೆ. ಜೂನ್ 30,2012ಕ್ಕೆ ಕೊನೆ ಗೊಂಡ ತ್ರೈಮಾಸಿಕದ Mತೆ ರುಪಾಯಿ ಮೌಲ್ಯದಲ್ಲಿ ಶೇ 157.2 ರಷ್ಟು ಏರಿಕೆ ಕಂಡಿದೆ.

ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ(q-o-q) ಸಂಸ್ಥೆಯ ಡಾಲರ್ ಆದಾಯ ಶೇ 0.4ರಷ್ಟು ಏರಿಕೆ ಹಾಗೂ y-o-y ನಂತೆ 105.5 ಮಿಲಿಯನ್ ಡಾಲರ್ ನಂತೆ ಶೇ.14ರಷ್ಟು ಆದಾಯ ಗಳಿಸಿದೆ. ರುಪಾಯಿ ಮೌಲ್ಯದಲ್ಲಿ ಕಳೆದ ಬಾರಿಗೆ ಹೋಲಿಸಿದರೆ 527.7 ಕೋಟಿ ರು ಇದ್ದ ಆದಾಯ 563ಕೋಟಿ ರು.ಗೆ ಏರಿದೆ. ಶೇ 7ರಷ್ಟು ಹೆಚ್ಚುವರಿ ಆದಾಯ ಬಂದಿದೆ.

ಪ್ರಸಕ್ತ ತ್ರೈಮಾಸಿಕದಲ್ಲಿ 272 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಮೈಂಡ್ ಟ್ರೀ ಸಂಸ್ಥೆಯಲ್ಲಿ ಒಟ್ಟು 10,830 ಉದ್ಯೋಗಿಗಳಿದ್ದಾರೆ. ಸೋಮವಾರ ಸಂಸ್ಥೆಯ ಷೇರುಗಳು ಬಿಎಸ್ ಇನಲ್ಲಿ ಮಧ್ಯಾಹ್ನ 12ಕ್ಕೆ 681 ರು.ನಂತೆ ಶೇ 3.50ರಷ್ಟು ಏರಿಕೆ ಕಂಡಿತ್ತು.

ಲಾಭವೋ ಲಾಭ: ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಮೈಂಡ್ ಟ್ರೀ ನಿವ್ವಳ ಲಾಭ ದ್ವಿಗುಣವಾಗಿದೆ. ಕಳೆದ ವರ್ಷ 34.6 ಕೋಟಿ ರು ಗಳಿಸಿದ್ದ ಮೈಂಡ್ ಟ್ರೀ ಈ ಬಾರಿ 89 ಕೋಟಿ ಲಾಭ ದಾಖಲಿಸಿದೆ.

ಕಳೆದ ವರ್ಷ ಏಪ್ರಿಲ್ ಜೂನ್ ತ್ರೈಮಾಸಿಕದಲ್ಲಿ 413.1 ಕೋಟಿ ರು ಇದ್ದ ಆದಾಯ ಈ ಬಾರಿ 563ಕ್ಕೇರಿದೆ ಎಂದು ಬಿಎಸ್ ಇಗೆ ನೀಡಿದ ಮಾಹಿತಿಯನ್ನು ಮೈಂಡ್ ಟ್ರೀ ಸಂಸ್ಥೆ ಹೇಳಿದೆ.

ಐಟಿ ಬಂಡವಾಳ ಹೂಡಿಕೆಯಲ್ಲಿ ಗ್ರಾಹಕರು ಸೂಕ್ಷ್ಮವಾಗಿ ವರ್ತಿಸುತ್ತಿದ್ದಾರೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಇನ್ನೂ ಮುಂದುವರೆದಿದೆ. ನ್ಯಾಸ್ ಕಾಮ್ ನ 2012-13ರಲ್ಲಿ ಸಂಸ್ಥೆಯ ಪ್ರಚಲಿತ ಅಂದಾಜಿನಂತೆ ಸಂಸ್ಥೆ ತನ್ನ ಮುಂದಿನ ಹೆಜ್ಜೆ ಇಡಲಿದೆ ಎಂದು ಮೈಂಡ್ ಟ್ರೀ ಸಂಸ್ಥೆಯ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಕುಮಾರ್ ನಟರಾಜನ್ ಹೇಳಿದ್ದಾರೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮೈಂಡ್ ಟ್ರೀ ಸಂಸ್ಥೆ ಶೇ 11 ರಿಂದ 14 ರಷ್ಟು ಪ್ರಗತಿ ಸಾಧಿಸಲಿದೆ ಎಂದು ನ್ಯಾಸ್ ಕಾಮ್ ಅಂದಾಜಿಸಿದೆ. ಭಾರತದಲ್ಲಿ ಮೈಂಡ್ ಟ್ರೀ ಷೇರುಗಳು ಉತ್ತಮ ವ್ಯವಹಾರ ಮಾಡುತ್ತಿದ್ದು,

ಬಿಎಸ್ ಇನಲ್ಲಿ 1.46 ಲಕ್ಷ ಷೇರುಗಳು ಕೈಬದಲಾಯಿಸಿದೆ. ಹಾಗೂ ಎನ್ ಎಸ್ ಇನಲ್ಲಿ ಸುಮಾರು 4 ಲಕ್ಷ ಷೇರುಗಳು ವಹಿವಾಟು ನಿರತವಾಗಿತ್ತು ಎಂದು ಸಂಸ್ಥೆ ಮಾಹಿತಿ ನೀಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
MindTree Limited, a global IT and Product Engineering Services company net profit surged by 116% year on year(y-o-y) to $16.7 million in dollar terms. While, the rupee profits have surged by 157.2% y-o-y for the first quarter ended June 30, 2012.
Please Wait while comments are loading...