ಜಗದೀಶ್ ಶೆಟ್ಟರ್ ಸಂಪುಟ ಮತ್ತು ಖಾತೆ ಹಂಚಿಕೆ

Posted By:
Subscribe to Oneindia Kannada
Jagadish Shettar, CM of Karnataka
ಬೆಂಗಳೂರು, ಜು. 15 : ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಎರಡು ದಿನಗಳಲ್ಲಿ ಎಲ್ಲ ಖಾತೆಗಳನ್ನು 33 ಸಚಿವರುಗಳಲ್ಲಿ ಹಂಚಿ ಮೊದಲ ಹಂತದ ಕೆಲಸವನ್ನು ಜಗದೀಶ್ ಶೆಟ್ಟರ್ ಅವರು ಸುಗಮವಾಗಿ ಪೂರೈಸಿದ್ದಾರೆ. ಒಂದೆರಡು ಬದಲಾವಣೆಗಳನ್ನು ಹೊರತುಪಡಿಸಿದರೆ, ಸದಾನಂದ ಗೌಡರ ಸಂಪುಟದಲ್ಲಿದ್ದ ಸಚಿವರೆಲ್ಲ ತಮ್ಮ ಖಾತೆಗಳನ್ನು ಉಳಿಸಿಕೊಂಡಿದ್ದಾರೆ.

ಶೆಟ್ಟರ್ ಅವರು ತಾವು ಮೊದಲು ನಿಭಾಯಿಸುತ್ತಿದ್ದ ಗಾಮೀಣಾಭಿವೃದ್ಧಿ ಖಾತೆಯನ್ನು ತಾವೇ ಉಳಿಸಿಕೊಂಡಿದ್ದು, ಶೋಭಾ ಕರಂದ್ಲಾಜೆ ಮತ್ತು ಬಿಎನ್ ಬಚ್ಚೇಗೌಡ ಅವರಿಂದ ತಲಾ ಒಂದೊಂದು ಖಾತೆಗಳನ್ನು ಕಿತ್ತು ಬೇರೆಯವರಿಗೆ ಹಂಚಿದ್ದಾರೆ. ಹಾಗೆಯೆ, ಸದಾನಂದ ಗೌಡರಂತೆ ಇದ್ದಬದ್ದ ಖಾತೆಗಳನ್ನೆಲ್ಲಾ ತಮ್ಮ ಹೆಗಲ ಮೇಲೆ ಹೊರದೆ ಎಲ್ಲರಿಗೆ ಹಂಚಿ ಶೆಟ್ಟರ್ ಜಾಣ್ಮೆ ಮೆರೆದಿದ್ದಾರೆ.

ಹಿಂದಿನ ಸಂಪುಟದಲ್ಲಿ ಶೋಭಾ ಅವರು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆಯನ್ನೂ ನಿರ್ವಹಿಸುತ್ತಿದ್ದರು. ಈಗ ಅವರಿಗೆ ಇಂಧನ ಖಾತೆ ಮಾತ್ರ ಉಳಿದುಕೊಂಡಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಖಾತೆಯನ್ನು ಡಿ.ಎನ್. ದೇವರಾಜ್ ಅವರಿಗೆ ನೀಡಲಾಗಿದೆ. ಹಾಗೆಯೆ, ಬಚ್ಚೇಗೌಡ ಅವರಿಂದ ಕಿತ್ತುಕೊಂಡ ರೇಷ್ಮೆ ಖಾತೆಯನ್ನು ಸೊಗಡು ಶಿವಣ್ಣ ಅವರಿಗೆ ನೀಡಲಾಗಿದೆ.

ಸದಾನಂದ ಗೌಡರ ಸರಕಾರದಲ್ಲಿ ಕರುಣಾಕರ ರೆಡ್ಡಿ ನಿರ್ವಹಿಸುತ್ತಿದ್ದ ಕಂದಾಯ ಖಾತೆ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರ ಪಾಲಿಗೆ ಬಂದಿದೆ. ಮತ್ತೊಬ್ಬ ಉಪ ಮುಖ್ಯಮಂತ್ರಿ ಆರ್. ಅಶೋಕ್ ಅವರು ಗೃಹ ಮತ್ತು ಸಾರಿಗೆ ಖಾತೆಗಳಲ್ಲಿಯೇ ಮುಂದುವರಿಯಲಿದ್ದಾರೆ. ಬೆಂಗಳೂರಿನಲ್ಲಿ ಕೋರ್ ಕಮಿಟಿಯಲ್ಲಿ ಖಾತೆ ಹಂಚಿಗೆ ನಿರ್ಧಾರವಾಗದ ಕಾರಣ, ದೆಹಲಿಗೆ ತೆರಳಿ ಖಾತೆ ಹಂಚಿಕೆ ಕುರಿತಂತೆ ಹಿರಿಯರ ಅನುಮತಿ ಪಡೆದು ಖಾತೆಗಳನ್ನು ಹಂಚಿದ್ದಾರೆ.

ಇದೆಲ್ಲದ ಜೊತೆಗೆ ಜಿಲ್ಲಾ ಉಸ್ತುವಾರಿಯನ್ನೂ ಶೆಟ್ಟರ್ ಅವರು ಘೋಷಿಸಿದ್ದಾರೆ. ಆದರೆ, ಖಾತೆ ಹಂಚಿಕೆ ಮತ್ತು ಜಿಲ್ಲಾ ಉಸ್ತುವಾರಿಗೆ ಸಂಬಂಧಿಸಿದಂತೆಯೂ ಕೆಲ ಅಪಸ್ವರಗಳ ಕಂಡುಬರುವ ಸಾಧ್ಯತೆಯಿದೆ. ರಾಜ್ಯದಲ್ಲಿ ಮಳೆಯಿಲ್ಲದೆ ಬರ ಪರಿಸ್ಥಿತಿಯನ್ನು ಮತ್ತು ವಿದ್ಯುತ್ ಕೊರತೆಯನ್ನು ಎದುರಿಸುತ್ತಿರುವುದರಿಂದ ಮುಂದಿನ ದಿನಗಳು ನಿಜಕ್ಕೂ ಜಗದೀಶ್ ಶೆಟ್ಟರ್ ಮತ್ತು ಸಚಿವರಿಗೆ ಪರೀಕ್ಷೆಯ ದಿನಗಳಾಗಲಿವೆ. ಅಲ್ಲದೆ, ಕೆಲ ಭಿನ್ನಮತ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ರಾಜ್ಯಪಾಲರು ಶೆಟ್ಟರ್ ಅವರಿಗೆ ವಿಶ್ವಾಸಮತ ಯಾಚಿಸಲು ಕೋರಿದರೂ ಆಶ್ಚರ್ಯವಿಲ್ಲ.

ಕ್ರಮ ಸಂಖ್ಯೆ ಸಚಿವರ ಹೆಸರು ಕ್ಷೇತ್ರ ಖಾತೆಗಳು
1 ಜಗದೀಶ್ ಶೆಟ್ಟರ್ (ಮುಖ್ಯಮಂತ್ರಿ) ಹುಬ್ಬಳ್ಳಿ ಗ್ರಾಮೀಣ ಗಣಿ, ಗುಪ್ತಚರ, ಬೆಂಗಳೂರು ಅಭಿವೃದ್ಧಿ, ವಾರ್ತೆ, ವಕ್ಫ್ ಮತ್ತು ಅಲ್ಪಸಂಖ್ಯಾತರ ಇಲಾಖೆ
2 ಕೆ.ಎಸ್. ಈಶ್ವರಪ್ಪ (ಉಪ ಮುಖ್ಯಮಂತ್ರಿ) ಶಿವಮೊಗ್ಗ ಗ್ರಾಮೀಣ ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
3 ಆರ್. ಅಶೋಕ್ (ಉಪ ಮುಖ್ಯಮಂತ್ರಿ) ಪದ್ಮನಾಭನಗರ ಗೃಹ ಮತ್ತು ಸಾರಿಗೆ
4 ಗೋವಿಂದ ಕಾರಜೋಳ ಮುಧೋಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆ
5 ಎಸ್. ಸುರೇಶ್ ಕುಮಾರ್ ರಾಜಾಜಿನಗರ ಕಾನೂನು ಮತ್ತು ಸಂಸದೀಯ ವ್ಯವಹಾರ
6 ವಿಶ್ವೇಶ್ವರ ಹೆಗಡೆ ಕಾಗೇರಿ ಶಿರಸಿ ಪ್ರಾಥಮಿಕ ಶಿಕ್ಷಣ
7 ಬಸವರಾಜ ಬೊಮ್ಮಾಯಿ ಶಿಗ್ಗಾಂವಿ ನೀರಾವರಿ
8 ಸಿಎಂ ಉದಾಸಿ ಹಾನಗಲ್ ಲೋಕೋಪಯೋಗಿ
9 ಉಮೇಶ್ ವಿಶ್ವನಾಥ ಕತ್ತಿ ಹುಕ್ಕೇರಿ ಕೃಷಿ
10 ಶೋಭಾ ಕರಂದ್ಲಾಜೆ ಯಶವಂತಪುರ ಇಂಧನ
11 ಮುರುಗೇಶ್ ನಿರಾಣಿ ಬಿಳಗಿ
ಬೃಹತ್ ಕೈಗಾರಿಕೆ
12 ವಿ. ಸೋಮಣ್ಣ ವಿಧಾನ ಪರಿಷತ್ ಸದಸ್ಯ ಮನೆ
13 ಬಿ.ಎನ್. ಬಚ್ಚೇಗೌಡ ಹೊಸಕೋಟೆ
ಕಾರ್ಮಿಕ
14 ಎಂ.ಪಿ. ರೇಣುಕಾಚಾರ್ಯ
ಹೊನ್ನಾಳಿ
ಅಬಕಾರಿ
15 ಸಿ.ಪಿ. ಯೋಗೇಶ್ವರ್
ಚೆನ್ನಪಟ್ಟಣ
ಅರಣ್ಯ
16 ಎಸ್.ಎ. ರವೀಂದ್ರನಾಥ್
ದಾವಣಗೆರೆ
ತೋಟಗಾರಿಕೆ
17 ರೇವುನಾಯಕ್ ಬೆಳಮಗಿ
ಗುಲಬರ್ಗ ಗ್ರಾಮೀಣ
ಪಶು ಸಂಗೋಪನೆ
18 ಬಾಲಚಂದ್ರ ಜಾರಕಿಹೊಳಿ
ಅರಭಾವಿ
ಪೌರಾಡಳಿತ
19 ಎಸ್.ಎ. ರಾಮದಾಸ್
ಕೃಷ್ಣರಾಜ
ವೈದ್ಯಕೀಯ ಶಿಕ್ಷಣ
20 ಆನಂದ ಆಸ್ನೋಟಿಕರ್
ಕಾರವಾರ
ವಿಜ್ಞಾನ ಮತ್ತು ತಂತ್ರಜ್ಞಾನ
21 ಎ. ನಾರಾಯಣಸ್ವಾಮಿ
ಆನೇಕಲ್
ಸಮಾಜ ಕಲ್ಯಾಣ
22 ವರ್ತೂರು ಪ್ರಕಾಶ್
ಕೋಲಾರ
ಜವಳಿ
23 ನರಸಿಂಹ ನಾಯಕ್ (ರಾಜೂಗೌಡ)
ಸುರಪುರ
ಸಣ್ಣ ಕೈಗಾರಿಕೆ
24 ಸೊಗಡು ಶಿವಣ್ಣ
ತುಮಕೂರು ನಗರ
ರೇಷ್ಮೆ
25 ಸಿ.ಟಿ. ರವಿ
ಚಿಕ್ಕಮಗಳೂರು
ಉನ್ನತ ಶಿಕ್ಷಣ
26 ಡಿ.ಎನ್. ದೇವರಾಜ್
ಶೃಂಗೇರಿ
ಆಹಾರ ಮತ್ತು ನಾಗರಿಕ ಪೂರೈಕೆ
27 ಎಸ್.ಕೆ. ಬೆಳ್ಳುಬ್ಬಿ
ಬಸವನ ಬಾಗೇವಾಡಿ
ಕೃಷಿ ಮಾರುಕಟ್ಟೆ
28 ಅರವಿಂದ ಲಿಂಬಾವಳಿ
ಮಹದೇವಪುರ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ
29 ಬಿ.ಜೆ. ಪುಟ್ಟಸ್ವಾಮಿ
ವಿಧಾನ ಪರಿಷತ್ ಸದಸ್ಯ
ಸಹಕಾರ
30 ಆನಂದ್ ಸಿಂಗ್
ಹೊಸಪೇಟೆ
ಪ್ರವಾಸೋದ್ಯಮ
31 ಕಳಕಪ್ಪ ಬಂಡಿ
ರೋಣ
ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ
32 ಕೋಟ ಶ್ರೀನಿವಾಸ ಪೂಜಾರಿ
ವಿಧಾನ ಪರಿಷತ್ ಸದಸ್ಯ
ಮುಜರಾಯಿ
33 ಅಪ್ಪಚ್ಚು ರಂಜನ್
ಮಡಿಕೇರಿ
ಯುವಜನ ಸೇವೆ ಮತ್ತು ಕ್ರೀಡೆ
34 ಸುನೀಲ್ ಕುಮಾರ್ ವಲ್ಯಾಪುರೆ
ಚಿಂಚೋಳಿ
ಮೂಲ ಸೌಕರ್ಯ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chief Minister Jagadish Shettar has distributed the portfolios among all the 33 ministers, including 2 deputy chief ministers in his new cabinet. Shettar has also announced the district in-charge ministers' list.
Please Wait while comments are loading...