ಮಿಲನದ ನಂತರ ಮೂತ್ರ ಕುಡಿಯುವಂತೆ ಒತ್ತಾಯ

Crime Image
ಬೆಂಗಳೂರು, ಜು. 15: ಮಿಲನ ಮಹೋತ್ಸವದ ನಂತರ ತನ್ನ ಮೂತ್ರ ಕುಡಿಯುವಂತೆ ನನಗೆ ತೀವ್ರವಾಗಿ ಒತ್ತಾಯಿಸಿ ಮಾನಸಿಕ ಹಿಂಸೆ ನೀಡುತ್ತಿದ್ದ ಎಂದು ಮಹಿಳೆಯೊಬ್ಬಳು ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಕ್ಕೆ ಒಳಗಾಗಿರುವ ವ್ಯಕ್ತಿ ಪುತ್ತೂರಿನ ದಂತವೈದ್ಯ ಆಕಾಶ್ ರಾಜ್ ಎಂಬವರಾಗಿದ್ದು ಅವರನ್ನು ಪೊಲೀಸರು ಪುತ್ತೂರಿನಲ್ಲಿ ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ.

"ನನ್ನ ಪತಿ ನನಗೆ ಕೊಡುತ್ತಿದ್ದ ಸಾಕಷ್ಟು ಕಿರುಕುಳಗಳಲ್ಲಿ ಮೂತ್ರ ಕುಡಿಯುವಂತೆ ಹೇರುತ್ತಿದ್ದ ಒತ್ತಾಯವೂ ಒಂದು. ಹೊಡೆಯುವುದು, ಬಯ್ಯುವುದು, ಹಿಂಸಿಸುವುದಲ್ಲದೇ 25 ಲಕ್ಷ ರು. ಗಳನ್ನು ನನ್ನ ತವರುಮನೆಯಿಂದ ತರುವಂತೆ ನನಗೆ ಕಾಡುತ್ತಿದ್ದರು. ರಾತ್ರಿ ನನಗೆ ನಿದ್ರಿಸಲು ಬಿಡದೇ ಅನಗತ್ಯವಾಗಿ ಅಶ್ಲೀಲ ಪದಗಳಿಂದ ನಿಂದಿಸುತ್ತಿದ್ದರು" ಎಂದು ತಮ್ಮ ದೂರಿನಲ್ಲಿ ಸ್ವಪ್ನಾ ಆರೋಪಿಸಿದ್ದಾರೆ.

"ನಮ್ಮ ಮದುವೆಯ ವೇಳೆಯಲ್ಲಿ ನಮ್ಮ ಮನೆಯವರು 1 ಕೆ ಜಿ ಬಂಗಾರ ಹಾಗು 5 ಕೆ ಜಿ ಬೆಳ್ಳಿ ಯನ್ನು ಕೊಟ್ಟಿದ್ದರು. ಈಗ ಕ್ಲಿನಿಕ್ ತೆರೆಯಲು ಹಣ ತರುವಂತೆ ಗಂಡ ಪೀಡಿಸುತ್ತಿದ್ದಾನೆ" ಎಂದು ಸ್ವಪ್ನಾ ದೂರಿದ್ದಾರೆ. ಇದೀಗ ಕಾರ್ಕಳದ ಬೇರೊಬ್ಬ ಹುಡುಗಿಯನ್ನು ಮದುವೆಮಾಡಿಕೊಳ್ಳಲು ಅವರು ಹೊಂಚುಹಾಕುತ್ತಿದ್ದಾರೆ. ಹೀಗಾಗಿ ನಾನು ಅನಿವಾರ್ಯವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಬೇಕಾಗಿದೆ" ಎಂದಿದ್ದಾರೆ.

ಇನ್ನೂ ಒಂದು ಆಶ್ಚರ್ಯದ ಸಂಗತಿ ಎಂದರೆ, ಆಕಾಶ್ ಸಹೋದರ ಅನಿಲ್ ಕೂಡ ತನ್ನ ಹೆಂಡತಿಗೆ ಇದೇ ರೀತಿ ವರದಕ್ಷಿಣೆ ಕಿರುಕುಳ ಹಾಗೂ ಹಿಂಸೆ ನೀಡಿ ನಂತರ ವಿಚ್ಛೇದನ ನೀಡಿದ್ದರು. ಈ ಚಾಳಿಯನ್ನು ಆಕಾಶ್ ಅನುಸರಿಸುತ್ತಿದ್ದು ಅವರ ಮನಯವರೆಲ್ಲರೂ ಇದನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂಬ ಅಂಶ ಬೆಳಕಿಗೆ ಈ ಪ್ರಕರಣದ ನಂತರ ಬೆಳಕಿಗೆ ಬಂದಿದೆ.

ಉಡುಪಿ ಮೂಲದ ಆರೋಪಿ ಆಕಾಶ್ ರಾಜ್ ಅವರನ್ನು ಪುತ್ತೂರಿನಲ್ಲಿ ಬಂಧಿಸಿ ಬೆಂಗಳೂರಿಗೆ ಕರೆತಂದಿರುವ ಪೊಲೀಸರು ಮುಂದಿನ ವಿಚಾರಣೆ ನಡೆಸಲಿದ್ದಾರೆ. ಪತ್ನಿಗೆ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಆಕಾಶ್ ರಾಜ್ ನನ್ನು ಬಂಧಿಸಿರುವ ಪೊಲೀಸರು, ಹೆಚ್ಚಿನ ವಿಚಾರಣೆಗಾಗಿ ಆತನನ್ನು ವಶಕ್ಕೆ ತೆಗೆದುಕೊಳ್ಳಲು ನ್ಯಾಯಾಧೀಶರಲ್ಲಿ ಮನವಿ ಮಾಡುವುದಾಗಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+