ಒಲಿಂಪಿಕ್ಸ್ ಗೆ DOW ಪ್ರಯೋಜಕತ್ವ ಬೇಡ

Posted By:
Subscribe to Oneindia Kannada
IOC urged to rethink Dow sponsorship of London Games
ಲಂಡನ್, ಜು.13: ಲಂಡನ್ ಒಲಿಂಪಿಕ್ಸ್ 2012ಕ್ಕೆ ಭರ್ಜರಿ ತಯಾರಿ ನಡೆಯುತ್ತಿರುವ ಸಂದರ್ಭದಲ್ಲೇ 1984ರ ಭೋಪಾಲ್ ಅನಿಲದುರಂತಕ್ಕೆ ಕಾರಣವಾದ DOW ಕೆಮಿಕಲ್ ಕಂಪನಿಯನ್ನು ಪ್ರಯೋಜಕರ ಪಟ್ಟಿಯಿಂದ ಕೈಬಿಡುವಂತೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಲಂಡನ್ ಅಸೆಂಬ್ಲಿಯಲ್ಲೂ ಈ ವಿಷಯ ಪ್ರತಿಧ್ವನಿಸಿದೆ.

ಮಧ್ಯಪ್ರದೇಶದ ಭೋಪಾಲ್ ನಗರದ ಯೂನಿಯನ್ ಕಾರ್ಬೈಡ್ ಕಂಪನಿಯ ಕಾರ್ಖಾನೆಯಲ್ಲಿ ಡಿಸೆಂಬರ್ 3, 1984ರಲ್ಲಿ ಸಂಭವಿಸಿದ ಅನಿಲ ಮಹಾದುರಂತ ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸದಲ್ಲೊಂದು ಮರೆಯಲಾರದ ಅನಾಹುತವಾಗಿದೆ.

1984 ಡಿಸೆಂಬರ್ 3 ಭಾರತ ಇತಿಹಾಸದ ಕರಾಳ ದಿನ. ಭೋಪಾಲ್ ನಲ್ಲಿರುವ ಯೂನಿಯನ್ ಕಾರ್ಬೈಡ್ ಕಂಪನಿಯಲ್ಲಿ 40 ಟನ್ ಗೂ ಹೆಚ್ಚು ಅತ್ಯಂತ ವಿಷಕಾರಕ ಮಿಥೈಲ್ ಐಸೋಸೈನೆಟ್ ಅನಿಲ ಸೋರಿಕೆಯಾಗಿ ಸುಮಾರು 8 ರಿಂದ 10 ಸಾವಿರ ಮಂದಿ ಸಾವಿಗೀಡಾದರು. ಈ ದುರಂತದಿಂದ ಸುಮಾರು 25 ಸಾವಿರಕ್ಕೂ ಹೆಚ್ಚು ಮಂದಿಯ ವಿವಿಧ ಅಂಗವೈಕಲ್ಯಕ್ಕೂ ಕಾರಣವಾಯಿತು. ಡಿ. 3 ರಂದು ಭೋಪಾಲ್ ಅನಿಲ ಸೋರಿಕೆ ದಿನವನ್ನಾಗಿ ಆಚರಿಸಲಾಗುತ್ತದೆ.

DOW ಕಂಪನಿಗೆ ಒಲಿಂಪಿಕ್ಸ್ ಪ್ರಾಯೋಜಕತ್ವ ನೀಡಬಾರದು ಎಂದು ಐಒಸಿ ಹಾಗೂ ರಾಷ್ಟ್ರೀಯ ಆಯೋಜಕರ ಸಮಿತಿಯನ್ನು ಆಗ್ರಹಿಸಲು ಲಂಡನ್ ಅಸೆಂಬ್ಲಿಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. DOW ಕಂಪನಿಯ ಮಾನವೀಯ ಮೌಲ್ಯಗಳ ಬಗ್ಗೆ ಅಪಸ್ವರ ಕೇಳಿ ಬಂದಿದೆ. ಲಂಡನ್ ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಒಲಿಂಪಿಕ್ಸ್ ನ ಗೌರವವನ್ನು ಕಾಪಾಡುವ ಉದ್ದೇಶದಿಂದ ಈ ಕಂಪನಿಗೆ ಪ್ರಾಯೋಜಕತ್ವ ನೀಡಬಾರದು ಎಂದು ಆಗ್ರಹಿಸಲಾಗಿದೆ.

Dow ವಿಶ್ವದಾದ್ಯಂತ ಒಲಿಂಪಿಕ್ಸ್ ಪಾರ್ಟ್ನರ್ ಆಗಿದೆ. ಆದರೆ, 30 ವರ್ಷಗಳ ನಂತರವೂ ಭೋಪಾಲ್ ರಾಸಾಯನಿಕ ಅನಿಲ ದುರಂತದ ಸಂತ್ರಸ್ತರಿಗೆ ಪರಿಹಾರ ಸಿಕ್ಕಿಲ್ಲ. ಇದು ಭಾರತದ ಸಮಸ್ಯೆ ಅಷ್ಟೇ ಅಲ್ಲ. ಮಾನವೀಯ ದೃಷ್ಟಿಯಿಂದ ಇದನ್ನು ನೋಡಬೇಕಿದೆ. ಕಾರ್ಖಾನೆ ಇನ್ನೂ ಜಾಗ ಖಾಲಿ ಮಾಡಿಲ್ಲ. ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಿಲ್ಲ. ಪರಿಸ್ಥಿತಿ ಹೀಗಿರುವಾಗ ನಾವು ಇಂಥ ಸಂಸ್ಥೆಯನ್ನು ಬೆಂಬಲಿಸಿದರೆ ವಿಶ್ವಕ್ಕೆ ತಪ್ಪು ಸಂದೇಶ ಕೊಟ್ಟ ಹಾಗೆ ಆಗುತ್ತದೆ ಎಂದು ಅಸೆಂಬ್ಲಿ ಸದಸ್ಯ ನವೀಶ್ ಶಾ ಹೇಳಿದರು.

Olympic and Paralympic Games ಹಾಗೂ ಆಯೋಜಕರ ಸಮಿತಿ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಂಡು ಐಒಸಿಗೆ ತಿಳಿಸಲಿ. ಸಮಯ ಮೀರುವ ಮುನ್ನ ಕ್ರಮ ಕೈಗೊಳ್ಳಲಿ. ಎಂದು ನವೀನ್ ಆಗ್ರಹಿಸಿದರು. ಈ ಸಂಸ್ಥೆ ಗೆ ಪ್ರಾಯೋಜಕತ್ವ ನೀಡುವ ಮೂಲಕ ಲಂಡಂ ಒಲಿಂಪಿಕ್ಸ್ ಇಮೇಜ್ ಹಾಳಾಗುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ ಎಂದು ಡರೇನ್ ಜಾನ್ಸನ್ ಎಂಬ ಇನ್ನೊಬ್ಬ ಸದಸ್ಯ್ತ ಸದನದಲ್ಲಿ ಆಗ್ರಹಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The municipal authority here has piled up pressure on the International Olympic Committee to rethink on its relationship with the Dow chemical company as the sponsor of the Games in light of the 1984 Bhopal gas tragedy.
Please Wait while comments are loading...