ಕೇವಲ 20 ಸಾವಿರ ಉದ್ಯೋಗಿಗಳಿಗೆ ಮಾತ್ರ Hike

Posted By:
Subscribe to Oneindia Kannada
Infosy Nandita Gurjar

ಬೆಂಗಳೂರು, ಜು.13: ಮೊದಲ ತ್ರೈಮಾಸಿಕದಲ್ಲಿ ನಿರೀಕ್ಷೆ ಮಟ್ಟ ಮುಟ್ಟಲಾಗದ ಇನ್ಫೋಸಿಸ್ ಸಂಸ್ಥೆ ತನ್ನ ಉದ್ಯೋಗಿಗಳಿಗೂ ಸಣ್ಣ ಶಾಕ್ ನೀಡಿದೆ. ಈ ಬಾರಿ ಕೇವಲ 20,000 ಉದ್ಯೋಗಿಗಳಿಗೆ ಮಾತ್ರ ಸಂಬಳ ಏರಿಕೆ ಮಾಡಲಾಗುವುದು ಎಂದು ಇನ್ಫೋಸಿಸ್ ಸಂಸ್ಥೆ ಸಿಇಒ ಎಸ್ ಡಿ ಶಿಬುಲಾಲ್ ಘೋಷಿಸಿದ್ದಾರೆ. ಕಳೆದ ತಿಂಗಳು ಪ್ರೊಮೋಷನ್ ಪಡೆದವರು ಅವರ ಹೊಸ ಸ್ಥಾನಮಾನಕ್ಕೆ ತಕ್ಕಂತೆ ವೇತನ ಏರಿಕೆ ಪಡೆಯಲಿದ್ದಾರೆ ಎಂದು ಶಿಬುಲಾಲ್ ಹೇಳಿದ್ದಾರೆ.

2008-09ಕ್ಕೆ ಹೋಲಿಸಿದರೆ ಇನ್ಫೋಸಿಸ್ ಸಂಬಳ ಏರಿಕೆ ವಿಧಾನ ಸರಿಯಾಗಿದೆ. ಆರ್ಥಿಕ ವರ್ಷದ ಮಧ್ಯಭಾಗದಲ್ಲಿ ವೇತನ ಏರಿಕೆ ಪ್ರಕಟಿಸುವ ಪರಿಪಾಠ ಈಗಲೂ ಮುಂದುವರೆಯಲಿದೆ.ಕಳೆದ ವರ್ಷ ಕಂಪನಿ ತನ್ನ ಉದ್ಯೋಗಿಗಳಿಗೆ ಶೇ. 10-12ರಷ್ಟು hike ನೀಡಿತ್ತು.

ಆದರೆ, ಕಳೆದೆರಡು ತ್ರೈಮಾಸಿಕದಲ್ಲಿ ಸಂಸ್ಥೆ ಸಾಧನೆ ಪರಿಗಣಿಸಿದರೆ ಸಂಬಳ ಏರಿಕೆ ಸಾಧ್ಯತೆ ಕಮ್ಮಿ ಎನ್ನಬಹುದು. ಆದರೂ ಸಂಸ್ಥೆ ತನ್ನ ಉದ್ಯೋಗಿಗಳಿಗೆ Hike ನೀಡಲಿದೆ. Team Leads ಹಾಗೂ business heads ಗಳಿಗೆ ಯಾವುದೇ ರೀತಿ ಸಂಬಳ ಏರಿಕೆ ಕನಸು ಕಾಣುವಂತಿಲ್ಲ ಎಂದು ಸಂಸ್ಥೆ ಖಡಕ್ ಆಗಿ ಹೇಳಿದೆ.

ಇನ್ಫೋಸಿಸ್ ನಲ್ಲಿ ಸರಿ ಸುಮಾರು 1,51,151 ಜನ ಉದ್ಯೋಗಿಗಳಿದ್ದಾರೆ. 2012-13 ರ ಆರ್ಥಿಕ ವರ್ಷದಲ್ಲಿ ಇನ್ಪೋಸಿಸ್ ಸಂಸ್ಥೆ ಕೇವಲ 35,000 ಟೆಕ್ಕಿಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಿದೆ. ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ 10,000 ನೇಮಕಾತಿ ಕಡಿಮೆಯಾಗಿದೆ.

ಕಳೆದ ಆರ್ಥಿಕ ವರ್ಷದಲ್ಲಿ 45,000 ಅಭ್ಯರ್ಥಿಗಳನ್ನು ನೇಮಕ ಮಾಡಿಕೊಂಡಿತ್ತು. 13,000 ಅಭ್ಯರ್ಥಿಗಳನ್ನು ಬಿಸಿನೆಸ್ ಪ್ರೊಸೆಸ್ ಔಟ್ ಸೋರ್ಸಿಂಗ್(BPO) ಬ್ಯಾಕ್ ಆಫೀಸ್ ಕಾರ್ಯಗಳಿಗೆ ನೇಮಕ ಮಾಡಿಕೊಳ್ಳಲಾಗಿತ್ತು. 1,200 ಆನ್ ಸೈಟ್ ಉದ್ಯೋಗಿಗಳು ಹಾಗೂ 35,000 ಅಭ್ಯರ್ಥಿಗಳ ನೇಮಕ ಈ ಆರ್ಥಿಕ ವರ್ಷದ ಗುರಿಯಲ್ಲಿದೆ ಎಂದು ಸಿಇಒ ಎಸ್ ಡಿ ಶಿಬುಲಾಲ್ ಹೇಳಿದ್ದಾರೆ.

ವಿಪ್ರೋ ಸಂಸ್ಥೆ ಶೇ 8 ರಿಂದ 12 ರಷ್ಟು ಸಂಬಳ ಏರಿಕೆ ಮಾಡಿದೆ. 2 ವರ್ಷದಿಂದ 9 ವರ್ಷ ಅನುಭವದವರಿಗೆ ಈ ಲಾಭ ಸಿಕ್ಕಿದೆ. ಉಳಿದವರಿಗೆ ಸಂಬಳ ಏರಿಕೆ ಸುದ್ದಿ ಸಿಕ್ಕಿಲ್ಲ. ಕಾಗ್ನಿಜಂಟ್ ಸಂಸ್ಥೆ ಶೇ 8 ರಷ್ಟು ಏರಿಕೆ ಸಿಕ್ಕಿದ್ದು, ಆನ್ ಸೈಟ್ ಸಿಬ್ಬಂದಿಗಳಿಗೆ ಒಂದಕಿ ಇಂಗ್ರೀಮಿಟ್ ಸಿಕ್ಕಿದೆ.

ಎಚ್ ಸಿಎಲ್ ಟೆಕ್ನಾಲಜೀಸ್ ತನ್ನ ಉದ್ಯೋಗಿಗಳಿಗೆ ಶೇ 10 ರಷ್ಟು ಸಂಬಳ ಏರಿಕೆ ಮಾಡಿ ಅಚ್ಚರಿ ಮೂಡಿಸಿದೆ. ಟಿಸಿಎಸ್ ಸಂಸ್ಥೆ ಮೊದಲ ತ್ರೈಮಾಸಿಕದಲ್ಲಿ ಉತ್ತಮ ಸಾಧನೆ ಮಾಡಿ ಶೇ 8 ರಷ್ಟು ಸಂಬಳ ಏರಿಕೆ ಕೊಟ್ಟಿದೆ ಅಲ್ಲದೆ ಆನ್ ಸೈಟ್ ಸಿಬ್ಬಂದಿಗೆ ಶೇ 4 ರಷ್ಟು ಏರಿಕೆ ಸಿಕ್ಕಿದೆ.

ಇದೇ ರೀತಿ ಇನ್ಫೋಸಿಸ್ ಸಂಸ್ಥೆ ಜೂನ್ ತಿಂಗಳಿನಿಂದ ಅಕ್ಟೋಬರ್ ವರೆಗೂ ಪ್ರೊಮೋಷನ್ ಪ್ರಗತಿಯಲ್ಲಿಡಲಿದೆ. ಪ್ರೊಮೋಷನ್ ಸಿಕ್ಕರೂ ಪೇ hike ಆಗಿಲ್ಲ ಬರೀ variable pay hike ಮಾಡಿದ್ದಾರೆ ಎಂದು ಕೊರಗುತ್ತಿರುವ ಟೆಕ್ಕಿಗಳಿಗೆ ಇನ್ನು ಕೆಲವು ತಿಂಗಳಲ್ಲಿ ಇನ್ಫಿ ಬೋರ್ಡ್ ಸಿಹಿ ಸುದ್ದಿ ನೀಡುವ ಸಾಧ್ಯತೆಯಿದೆ. ಅಕ್ಟೋಬರ್ ಹೊತ್ತಿಗೆ ಸಂಬಳ ಏರಿಕೆ ಮಾಡಲಿದೆ. ಹೀಗಾಗಿ ಏಪ್ರಿಲ್ ನಲ್ಲಿ ಸಂಬಳ ಏರಿಕೆ ಮಾಡಿಲ್ಲ. ಆದರೆ, ಈ ವರ್ಷ hike ನೀಡುತ್ತೇವೆ ಎಂದು ಎಚ್ ಆರ್ ನಂದಿತಾ ಗುರ್ಜಾರ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Infosys might announce a pay hike in October, said a source. Infosys group head for HR Nandita Gurjar had said in April, For now, 20,000 employees of Infosys Limited can afford a smile. As compared to the company's current headcount of 1,51,151, We will revisit the wage hike as usual in the middle of the year said CEO SD Shibulal
Please Wait while comments are loading...