ಇನ್ಫೋಸಿಸ್ ಮೊದಲ ತ್ರೈಮಾಸಿಕ ನಿರೀಕ್ಷೆ ಟುಸ್

Posted By:
Subscribe to Oneindia Kannada
Infosys Q1 report

ಬೆಂಗಳೂರು, ಜು.11: ದೇಶದ ಎರಡನೆ ಅತಿದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ ಗುರುವಾರ( ಜು.13)ರಂದು ತನ್ನ ಮೊದಲ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದೆ.

ಬೆಂಗಳೂರು, ಜು.11: ದೇಶದ ಎರಡನೆ ಅತಿದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ ಗುರುವಾರ( ಜು.13)ರಂದು ತನ್ನ ಮೊದಲ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದೆ.
ಜೂನ್ ತ್ರೈಮಾಸಿಕದಲ್ಲಿ 2,290 ಕೋಟಿ ನಿವ್ವಳ ಲಾಭ ಮಾಡಿದೆಯಾದರೂ ನಿರೀಕ್ಷಿತ ಮಟ್ಟಕ್ಕೇ ಏರಿಲ್ಲ.

2483 ಕೋಟಿ ರು ಲಾಭದ ನಿರೀಕ್ಷೆ ಟುಸ್ ಆಗಿದೆ. ಒಟ್ಟು ಆದಾಯ 9,616 ಕೋಟಿ ರು ಬಂದಿದೆ. 9,715.2 ಕೋಟಿ ರು ನಿರೀಕ್ಷೆ ಹೊಂದಲಾಗಿತ್ತು. ಒಟ್ಟು ಮಾರಾಟದಲ್ಲಿ ಜನವರಿ ಹಾಗೂ ಮಾರ್ಚ್ ತ್ರೈಮಾಸಿಕದಲ್ಲಿ 2316 ಲಾಭದೊಂದಿಗೆ 8,852 ಕೋಟಿ ರು ಆದಾಯ ಬಂದಿದೆ.

2012-13ರ ಮೊದಲ ತ್ರೈಮಾಸಿಕದಲ್ಲಿ ಪ್ರತಿ ಷೇರಿನ ಆದಾಯ 40.06 ರು. ಈ ಅವಧಿಯಲ್ಲಿ ಇನ್ಫೋಸಿಸ್ ಸಂಸ್ಥೆ ಸುಮಾರು 51 ಗ್ರಾಹಕರನ್ನು ಸೆಳೆದುಕೊಂಡಿದೆ. ಸಂಸ್ಥೆಯ ಒಟ್ಟಾರೆ ಉದ್ಯೋಗಿಗಳ ಸಂಖ್ಯೆ 9,236(1,157 ಹೆಚ್ಚುವರಿ ಸೇರ್ಪಡೆ)

ಅಮೆರಿಕ ವೀಸಾ ವಂಚನೆ ಪ್ರಕರಣದಲ್ಲಿ ಸಿಲುಕಿರುವ ಇನ್ಫೋಸಿಸ್ 1752 ಮಿಲಿಯನ್ ಡಾಲರ್ ಆದಾಯ ಗಳಿಸಿದ್ದು, ನಿರೀಕ್ಷೆಗಿಂತ ಕಡಿಮೆ ಇದೆ. ಕಳೆದ ತ್ರೈಮಾಸಿಕದಲ್ಲಿ 1771 ಮಿಲಿಯನ್ ಡಾಲರ್ ಆದಾಯ ಬಂದಿತ್ತು. ಅಮೆರಿಕದಿಂದ ಸಾಕಷ್ಟು ಆದಾಯ ಹೊಂದಿರುವ ಇನ್ಪೋಸಿಸ್ ಸಂಸ್ಥೆ ಇದು ತಲೆ ನೋವಾಗಿ ಪರಿಣಮಿಸಿದೆ.

ಬ್ಯಾಂಕ್ ಆಫ್ ಅಮೆರಿಕ, ಬಿಟಿ ಗ್ರೂಪ್ ಹಾಗೂ ಗ್ಲಾಕ್ಸೋ ಸ್ಮಿತ್ ಕ್ಲೈನ್ ನಂಥ ಸಂಸ್ಥೆಗಳನ್ನು ಕ್ಲೈಂಟ್ ಆಗಿ ಹೊಂದಿರುವ ಇನ್ಫೋಸಿಸ್ ಸಂಸ್ಥೆ ಷೇರುಗಳು ತ್ರೈಮಾಸಿಕ ವರದಿ ಪ್ರಕಟವಾದ ನಂತರ 2,219 ರು ನಂತೆ 10.2 ರಷ್ಟು ಇಳಿಕೆ ಕಂಡಿದೆ. ನಿಫ್ಟಿಯಲ್ಲೂ 1.3 ಕುಸಿತ ಕಂಡಿದೆ.

'Infosys 3.0 ಭವಿಷ್ಯದ ಸಂಸ್ಥೆ ರಚನೆಯಲ್ಲಿ ಎಲ್ಲರೂ ಮಗ್ನರಾಗಿದ್ದಾರೆ. ತ್ರೈಮಾಸಿಕದಲ್ಲಿ ನಮಗೆ ಹಿನ್ನೆಡೆಯಾಗಿಲ್ಲ. ಜಾಗರಿಕ ಆರ್ಥಿಕ ಪರಿಸ್ಥಿತಿಯಿಂದ ಬೃಹತ್ ಐಟಿ ಉದ್ಯಮಕ್ಕೆ ಕೊಂಚ ಪೆಟ್ಟಾಗಿದೆ. ಇದರಲ್ಲಿ ಇನ್ಫೋಸಿಸ್ ಕೂಡಾ ಹೊರತಲ್ಲ' ಎಂದು ಇನ್ಫೋಸಿಸ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಶಿಬುಲಾಲ್ ಹೇಳಿದ್ದಾರೆ.
ಇನ್ಫೋಸಿಸ್ ಕಳೆದ ವರ್ಷ ಕಂಪನಿ ತನ್ನ ಉದ್ಯೋಗಿಗಳಿಗೆ ಶೇ. 10-12ರಷ್ಟು hike ನೀಡಿತ್ತು. ಆದರೆ, ಈ ಬಾರಿಯ ವೇತನ ಕಡಿತವನ್ನು ಸಮರ್ಥಿಸಿಕೊಂಡಿದ್ದ ಹಿರಿಯ ಉಪಾಧ್ಯಕ್ಷೆ ಹಾಗೂ HR ಸಮೂಹದ ಮುಖ್ಯಸ್ಥೆ ನಂದಿತಾ ಗುರ್ಜಾರ್, ಉದ್ಯೋಗಿಗಳು ಸಂಸ್ಥೆಯ ನಿರ್ಣಯಕ್ಕೆ ಸಹಕರಿಸುತ್ತಾರೆ ಎಂಬ ಭರವಸೆ ಇದೆ ಎಂದಿದ್ದಾರೆ.

2012-13 ರ ಆರ್ಥಿಕ ವರ್ಷದಲ್ಲಿ ಇನ್ಪೋಸಿಸ್ ಸಂಸ್ಥೆ ಕೇವಲ 35,000 ಟೆಕ್ಕಿಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಿದೆ. ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ 10,000 ನೇಮಕಾತಿ ಕಡಿಮೆಯಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ 45,000 ಅಭ್ಯರ್ಥಿಗಳನ್ನು ನೇಮಕ ಮಾಡಿಕೊಂಡಿತ್ತು.

1,200 ಆನ್ ಸೈಟ್ ಉದ್ಯೋಗಿಗಳು ಹಾಗೂ 35,000 ಅಭ್ಯರ್ಥಿಗಳ ನೇಮಕ ಈ ಆರ್ಥಿಕ ವರ್ಷದ ಗುರಿಯಲ್ಲಿದೆ ಎಂದು ಸಿಇಒ ಎಸ್ ಡಿ ಶಿಬುಲಾಲ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Insoys company on Thursday reported a net profit of Rs 2,290 crore in the June quarter against the street expectation of Rs 2,483 crore. It reported Rs 9,616 crore in revenue, against market expectations of Rs 9,715.2 crore.
Please Wait while comments are loading...