• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಕ್ಕಲಿಗ ಸಿಎಂಗಳು ಯಾರೂ ಪೂರ್ಣಾವಧಿಗೆ ನಿಲ್ಲಲಿಲ್ಲ

By Srinath
|

ಬೆಂಗಳೂರು, ಜುಲೈ 9: ತಾಜಾ ಆಗಿ ಡಿವಿ ಸದಾನಂದ ಗೌಡ ಸೇರಿದಂತೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಯಾವೊಬ್ಬ ಒಕ್ಕಲಿಗ ಮುಖ್ಯಮಂತ್ರಿಯೂ ಪೂರ್ಣಾವಧಿಗೆ (5 ವರ್ಷ) ತಮ್ಮ ಅಧಿಕಾರವನ್ನು ಪೂರ್ಣಗೊಳಿಸಲಿಲ್ಲ ಎಂಬುದು ಈ ಹೊತ್ತಿನಲ್ಲಿ ನಿಜಕ್ಕೂ ದಾಖಲಾರ್ಹ ಸುದ್ದಿಯೇ. ಇದರಿಂದ ರಾಜಕಾರಣದಲ್ಲಿ ಅಪನಂಬಿಕೆಗಳು ಮತ್ತು ಮೂಢನಂಬಿಕೆಗಳಿಗೆ 'ಸದಾ' ಮಹತ್ವ ಇದ್ದೇ ಇರುತ್ತದೆ ಎಂಬುದೂ ಸಾಬೀತಾಗಿದೆ.


1956 ರಿಂದ ಈ ವಿದ್ಯಮಾನ ಜಾರಿಯಲ್ಲಿದೆ. ಒಕ್ಕಲಿಗ ಸಮುದಾಯಕ್ಕೆ ಸೇರಿದ ಕೆಂಗಲ್ ಹನುಮಂತಯ್ಯ, ಕಡಿದಾಳ್ ಮಂಜಪ್ಪ, ಎಚ್ ಡಿ ದೇವೇಗೌಡ, ಎಸ್ ಎಂ ಕೃಷ್ಣ, ಎಚ್ ಡಿ ಕುಮಾರಸ್ವಾಮಿ ಮತ್ತು ಇದೀಗ ಸದಾನಂದ ಗೌಡರು ಹೀಗೆ ಅವರ ಆಡಳಿತಾವಧಿಗೆ ಅನುಕ್ರಮವಾಗಿ ಯಾರೊಬ್ಬರೂ ಮುಖ್ಯಮಂತ್ರಿ ಕುರ್ಚಿಯಲ್ಲಿ ಪೂರ್ಣಾವಧಿಗೆ ಉಳಿಯಲಿಲ್ಲ.

ಕೆಂಗಲ್ ಹನುಮಂತಯ್ಯ ಅವರು 1952 ಮಾರ್ಚ್ ನಿಂದ 1956ರ ಆಗಸ್ಟ್ ವರೆಗೆ, ಏಕೀಕರಣದಿಂದಾಗಿ ಅಧಿಕಾರ ಬಿಟ್ಟುಕೊಟ್ಟರಾದರೂ ನಂತರ 1956ರಲ್ಲಿಯೂ ಸ್ವಲ್ಪ ಕಾಲ ಸಿಎಂ ಆಗಿದ್ದರು.
ಕಡಿದಾಳ್ ಮಂಜಪ್ಪ ಅವರು ಹಳೆ ಮೈಸೂರು ರಾಜ್ಯದಲ್ಲಿ 1956ರ ಆಗಸ್ಟ್ ನಿಂದ 1956ರ ಅಕ್ಟೋಬರ್ ತನಕ ಮುಖ್ಯಮಂತ್ರಿಯಾಗಿದ್ದರು. ಸ್ವತಃ ಮಂಜಪ್ಪ ಅವರೇ ಎಸ್ ನಿಜಲಿಂಗಪ್ಪ ಅವರಿಗೆ ಅಧಿಕಾರ ಬಿಟ್ಟುಕೊಟ್ಟರು.
ದೇವೇಗೌಡ1994 ರಿಂದ 1996 ರವರೆಗೆ ಸಿಎಂ ಆಗಿದ್ದರು. ಅದಾದನಂತರ ಪ್ರಧಾನಿ ಸಹ ಆದರು. ಆದರೆ ಅದೂ ಅಲ್ಪಾವಧಿಗೆ.
ಎಸ್ಎಂ ಕೃಷ್ಣ 1999 ರಿಂದ 2004ರ ವರೆಗೆ ಬಹುತೇಕ ಪೂರ್ಣಾವಧಿಗೆ ಅಧಿಕಾರಸ್ಥರಾಗಿದ್ದವರು ಇವರೊಬ್ಬರೇ. ಇನ್ನಾರು ತಿಂಗಳು ಅಧಿಕಾರಾವಧಿ ಇರುವಾಗ ಚುನಾವಣೆಗೆ ಹೋದರು.
ಎಚ್ ಡಿ ಕುಮಾರಸ್ವಾಮಿ ಜೆಡಿಎಸ್-ಬಿಜೆಪಿ ನಡುವಣ 20-20 ಒಪ್ಪಂದದಲ್ಲಿ ಮೊದಲ 20 ತಿಂಗಳು ಅಧಿಕಾರ ಅನುಭವಿಸಿದರು.

ಕಡತಯಜ್ಞಕ್ಕೆ ಎಳ್ಳುನೀರು ಬಿಟ್ಟ ಸದಾನಂದ:
ಇನ್ನೇನು ಅಧಿಕಾರ ಕೈತಪ್ಪುತ್ತಿದೆ ಎಂದು ಮನದಟ್ಟಾಗುತ್ತಿದ್ದಂತೆ ಅಧಿಕಾರಸ್ಥರು ಕಡತಯಜ್ಞಕ್ಕೆ ಕುಳಿತುಕೊಳ್ಳುತ್ತಾರೆ. ನಿದ್ದೆಗೆಟ್ಟಾದರೂ ರಾತ್ರೋ ರಾತ್ರಿ 'ತಮಗೆ ಬೇಕಾದ' ಫೈಲುಗಳಿಗೆ ಕಣ್ಮುಚ್ಚಿ ಸಹಿ ಹಾಕುತ್ತಾರೆ.

ಆದರೆ ಇದಕ್ಕೆ ಅಪವಾದವೆಂಬಂತೆ ಡಿವಿ ಸದಾನಂದ ಗೌಡರು ತಮ್ಮ ಖುರ್ಚಿ ಅಲಗಾಡುತ್ತಿದೆ ಎಂಬುದು ತಿಳಿಯುತ್ತಿದ್ದಂತೆ ಕಡತಗಳಿಗೆ ಸಹಿ ಹಾಕುವುದನ್ನೇ ನಿಲ್ಲಿಸಿದರಂತೆ! ತಮ್ಮ ಅತ್ಯಾಪ್ತ ಸಚಿವರು ಫೈಲುಗಳನ್ನು ತೆಗೆದುಕೊಂಡು ಹೋದರೂ ಸಿಎಂ ಕ್ಯಾರೇ ಅನ್ನಲಿಲ್ಲವಂತೆ. ಕೊನೆಯ ಸಂಪುಟ ಸಭೆಯಲ್ಲೂ ಸದಾನಂದರು ಮಹತ್ವದ ಕಡತಗಳಿಗೂ ಸಹಿ ಹಾಕಲಿಲ್ವಂತೆ.

ಅದೇ ಎಚ್ ಡಿ ಕುಮಾರಸ್ವಾಮಿ ಅವರು ಅಧಿಕಾರ ಕಳೆದುಕೊಳ್ಳುವ ಹಿಂದಿನ ದಿನ ವಿವಾದಿತ ಕಂಪನಿಗಳೂ ಸೇರಿದಂತೆ ಗಣಿ ಗುತ್ತಿಗೆಗೆ ಸಂಬಂಧಿಸಿದ 25 ಕಡತಗಳಿಗೆ ಆತುರಾತುರವಾಗಿ ಸಹಿ ಜಡಿದರಂತೆ.
ಇನ್ನು, ಅವರಪ್ಪ ಎಚ್ ಡಿ ದೇವೇಗೌಡರು ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿಗಿದ್ದೇ ತಡ ಮುಖ್ಯಮಂತ್ರಿ ಕುರ್ಚಿಯನ್ನು ತೆರವುಗೊಳಿಸುವ ಹಿಂದಿನ ದಿನ ಕೃಷ್ಣಾ ಮೇಲ್ದಂಡೆ ತುಂಡು ಗುತ್ತಿಗೆ ಕಡತಕ್ಕೆ ನಗುನಗುತ್ತಲೇ ಸಹಿ ಮಾಡಿದರಂತೆ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಸದಾನಂದ ಗೌಡ ಸುದ್ದಿಗಳುView All

English summary
No Vokkaliga CM completed full term in Karnataka. No Chief Minister belonging to Vokkaliga community has been able to complete their five-year term in Karnataka since 1956. Kengal Hanumanthaiah, Kadidal Manjappa, H D Deve Gowda, H D Kumaraswamy and D V Sadananda Gowda had to make way for others due to developments which have been witnessed in the state since 1956.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more