ಗರಿ ಗರಿ ಮಸಾಲೆ ದೋಸೆಗೆ ಸಿಕ್ತು ವಿಶ್ವ ಗರಿಮೆ!
ನ್ಯೂಯಾರ್ಕ್, ಜುಲೈ 9: ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ಗರಿ ಗರಿ ಮಸಾಲೆ ದೋಸೆಗೆ ವಿಶ್ವ ಗರಿಮೆ ಪ್ರಾಪ್ತಿಯಾಗಿದೆ. 'ಜೀವನದಲ್ಲಿ ಒಮ್ಮೆ ನೋಡಿ ಜೋಗಾ ಗುಂಡಿ' ಎಂದು ಅಣ್ಣಾವ್ರು ಹಾಡಿರುವಂತೆ 'ಸಾಯೋಕ್ಮುಂಚೆ ಒಮ್ಮೆ ಮಸಲಾ ದೋಸೆಯನ್ನು ಮುರಿದು ಬಾಯಲ್ಲಿಟ್ಟುಕೊಂಡು ಶಿವಾ ಅನ್ನಿ!' ಎಂದಿದೆ ಖ್ಯಾತ Huffington Post ವೆಬ್ ಸೈಟ್.

ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ Viator ಎಂಬ ಬ್ಲಾಗ್ ದಾತರು Huffington Post ಪರವಾಗಿ ಪಟ್ಟೀಕರಿಸಿರುವ ಪಟ್ಟಿಯಲ್ಲಿ ಮಸಾಲೆ ದೋಸೆಗೆ ಈ ಪಟ್ಟ ಗಿಟ್ಟಿದೆ. ದಕ್ಷಿಣ ಭಾರತದ ಅದರಲ್ಲೂ ಕರ್ನಾಟಕದ ಈ ತಿಂಡಿಯನ್ನು ಒಂದೇ ಒಂದು ಬಾರಿಯಾದರೂ taste ಮಾಡಿ ಎಂದು ಪ್ರಪಂಚ ಪರ್ಯಟನಕಾರರಿಗೆ 'ಉಚಿತ' ಸಲಹೆ ನೀಡಿದೆ.
ಉಳಿದಂತೆ ಅಮೆರಿಕದ BBQ ribs, ಚೀನಾದ Peking duck ಮತ್ತು ಜಪಾನಿನ teppanyaki ತಿಂಡಿಯನ್ನೂ ನಿಮ್ಮ ಜಿಹ್ವಾ ಸಾಮರ್ಥ್ಯಕ್ಕೆ ತಕ್ಕಂತೆ ತಿನ್ನಿ ಎನ್ನುತ್ತಿದೆ Huffington Post ಸಿದ್ಧಪಡಿಸಿರುವ ಪಟ್ಟಿ.
ಪ್ಲೇಟ್ ತುಂಬಾ ಹರಡಿಕೊಳ್ಳುವ, ತೆಳುವಾದ ಈ ದೋಸೆಯನ್ನು ಅಕ್ಕಿ ಮತ್ತು ಉದ್ದಿನ ಬೇಳೆಯಿಂದ ತಯಾರಿಸಲಾಗುತ್ತದೆ. ಸುಡುವ ಕಾವಲಿಯ ಮೇಲೆ ರುಬ್ಬಿದ ಹಿಟ್ಟನ್ನು ಹರಡಿ ಈ ದೋಸೆಯನ್ನು ಎಬ್ಬಿಸಲಾಗುತ್ತದೆ. ಬೆಂದ ಆಲೂಗಡ್ಡೆ- ಈರುಳ್ಳಿಯ ಪಲ್ಯ ಮತ್ತು ಬೇಕಾದಷ್ಟು ಬೆಳ್ಳುಳ್ಳಿ ಚಟ್ನಿಯನ್ನೂ serve ಮಾಡಲಾಗುತ್ತದೆ ಎಂದು ಚಿಕ್ಕದಾಗಿ ಚೊಕ್ಕವಾಗಿ ಮಸಾಲೆ ದೋಸೆ ತಯಾರಿ ಬಗ್ಗೆ ವಿವರಣೆಯನ್ನೂ ವೆಬ್ ಸೈಟ್ ನಲ್ಲಿ ನೀಡಲಾಗಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications