• search

ಎಸ್ಸೆಸ್ಸೆಲ್ಸಿ ಸಪ್ಲಿಮೆಂಟರಿ ಪರೀಕ್ಷೆ ಫಲಿತಾಂಶ

Subscribe to Oneindia Kannada
For Quick Alerts
ALLOW NOTIFICATIONS
For Daily Alerts
  D Venkateshaiah
  ಕರ್ನಾಟಕ ಎಸ್ಸೆಸ್ಸೆಲ್ಸಿ ಸಪ್ಲಿಮೆಂಟರಿ ಪರೀಕ್ಷೆ-2012 ರ ಫಲಿತಾಂಶ ಜುಲೈ ಎರಡನೇ ವಾರ ಘೋಷಣೆಯಾಗಲಿದೆ. ಸುಮಾರು 1.6 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಕಳೆದ ಜೂನ್ ತಿಂಗಳಲ್ಲಿ ನಡೆಸಲಾದ ಈ ಪರೀಕ್ಷೆಗೆ ಹಾಜರಾಗಿದ್ದರು.

  ಉತ್ತರ ಪತ್ರಿಕೆಯ ಮೌಲ್ಯಮಾಪನ ಕಾರ್ಯ ಈಗಾಗಲೇ ಪೂರ್ಣಗೊಂಡಿದ್ದು, ಮಾರ್ಕ್ ಕಾರ್ಡ್ ಸಿದ್ಧತೆ ನಡೆಯುತ್ತಿದೆ ಎಂದು ಕರ್ನಾಟಕ ಸೆಕೆಂಡರಿ ಶಿಕ್ಷಣ ಪರೀಕ್ಷಾ ಮಂಡಳಿ (KSEEB) ನಿರ್ದೇಶಕ ಡಿ ವೆಂಕಟೇಶಯ್ಯ ತಿಳಿಸಿದ್ದಾರೆ.

  ಏಪ್ರಿಲ್ ನಲ್ಲಿ ನಡೆದ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಸುಮಾರು 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ ಶೇ. 76.23 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದು, ಕರ್ನಾಟಕ ಎಸ್ಸೆಸ್ಸೆಲ್ಸಿ ಪರೀಕ್ಷೆ ಇತಿಹಾಸದಲ್ಲಿ ಸಾರ್ವಕಾಲಿಕ ದಾಖಲೆ ಎನಿಸಿದೆ.

  ಏಪ್ರಿಲ್ ನಲ್ಲಿ ನಡೆದ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದ 2 ಲಕ್ಷ ವಿದ್ಯಾರ್ಥಿಗಳಲ್ಲಿ ಸುಮಾರು 3/4 ರಷ್ಟು ವಿದ್ಯಾರ್ಥಿಗಳು ಈ ಜೂನ್ ತಿಂಗಳಲ್ಲಿ ನಡೆದ ಸಪ್ಲಿಮೆಂಟರಿ ಪರೀಕ್ಷೆ ಬರೆದಿದ್ದರು. ಉಳಿದ ಶೇ. 25 ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿರಲಿಲ್ಲ. ಎಸ್ಸೆಸ್ಸೆಲ್ಸಿ ನಂತರದ ಶಿಕ್ಷಣ ಮುಂದುವರಿಸಿದಿರುವ ಸಂಗತಿ ಇಂದಿನ ಸಾಮಾಜಿಕ-ಆರ್ಥಿಕ ಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ ಎಂದು ಡಿ ವೆಂಕಟೇಶಯ್ಯ ಅವರು 'ಒನ್ ಇಂಡಿಯಾ ಕನ್ನಡ'ಕ್ಕೆ ತಿಳಿಸಿದ್ದಾರೆ.

  ಈ ಮೊದಲು ಸಪ್ಲಿಮೆಂಟರಿ ಪರೀಕ್ಷೆಯನ್ನು ವರ್ಷಕ್ಕೆ ಎರಡು ಬಾರಿ (ಜೂನ್, ಸೆಪ್ಟೆಂಬರ್) ನಡೆಸಲಾಗುತ್ತಿತ್ತು. ಆದರೆ ಈಗ, ಒಂದು ವರ್ಷ ವಿದ್ಯಾರ್ಥಿಗಳಿಗೆ ಅನಾವಶ್ಯಕ ತಡವಾಗುವುದರಿಂದ ಏಪ್ರಿಲ್-ಜೂನ್ ತಿಂಗಳಲ್ಲೇ ನಡೆಸಲಾಗುತ್ತಿದೆ.

  ಕರ್ನಾಟಕದಲ್ಲಿ ಒಟ್ಟು 14,000 ಹೈಸ್ಕೂಲುಗಳಿವೆ. ಇವುಗಳಲ್ಲಿ 4.600 ಹೈಸ್ಕೂಲುಗಳು ಸರ್ಕಾರದ ಅನುದಾನಕ್ಕೆ ಒಳಪಟ್ಟಿವೆ. ಉಳಿದ 2,500 ಪ್ರೌಢಶಾಲೆಗಳು ಖಾಸಗಿ ಸಂಸ್ಥೆಗಳ ಅಧೀನದಲ್ಲಿವೆ. ಪ್ರತಿ ಜಿಲ್ಲೆ ತಲಾ ಒಂದೊಂದು ಮೊರಾರ್ಜಿ ದೇಸಾಯಿ ಹೈಸ್ಕೂಲ್ ಗಳನ್ನು ಹೊಂದಿದ್ದಲ್ಲದೇ ಕೆಲವು ಪಟ್ಟಣ ಕಾರ್ಪೋರೇಷನ್ ಅಧೀನಕ್ಕೆ ಒಳಪಟ್ಟ ಪ್ರೌಢಶಾಲೆಗಳೂ ಇವೆ. (ಒನ್ ಇಂಡಿಯಾ ಕನ್ನಡ)

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  The results of Karnataka SSLC Supplementary examination 2012 will be announced in the second week of July. Over 1.6 lack students had appeared for the examination conducted in June. D Venkateshaiah the Director of Karnataka Secondary Education Examination Board ( KSEEB), told that the valuation of answer papers is completed and data processing of marks is under way.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more