• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇವಕಣ ಬೆಟ್ ಸೋತ ಅಭಿನವ ಐನ್ ಸ್ಟೈನ್

By Mahesh
|
ಲಂಡನ್, ಜು.6: ಅಭಿನವ ಐನ್ ಸ್ಟೈನ್ ಎಂದೇ ಖ್ಯಾತಿಯಾಗಿರುವ ಖಗೋಳ ಭೌತ ವಿಜ್ಞಾನಿ, ಗಣಿತಜ್ಞ ಸ್ಟೀಫನ್ ಹಾಕಿಂಗ್ ಅವರು 'ದೇವಕಣ' ದ ಮೇಲೆ ಬೆಟ್ಟಿಂಗ್ ಕಟ್ಟಿ 100 ಡಾಲರ್ ಸೋತಿದ್ದಾರೆ.

ಆದರೆ, ದೇವಕಣ ಶೋಧನೆಗೆ ಆಧಾರವಾದ ಪೀಟರ್ ಹಿಗ್ಸ್ ಆವರಿಗೆ ನೊಬೆಲ್ ಪರಿತೋಷಕ ಸಲ್ಲಲೇಬೇಕು ಎಂದು ಹಾಕಿಂಗ್ಸ್ ಅಭಿಪ್ರಾಯಪಟ್ಟಿದ್ದಾರೆ.

ಹಿಗ್ಸ್ ಬೊಸನ್ ಅಥವಾ ದೇವಕಣ ಪತ್ತೆ ಅಸಾಧ್ಯ ಎಂದು 70 ವರ್ಷದ ಸ್ಟೀಫನ್ ಹಾಕಿಂಗ್ ಬೆಟ್ ಕಟ್ಟಿದ್ದರು. ಮಿಚಿಗನ್ ವಿಶ್ವವಿದ್ಯಾಲಯದ ಗಾರ್ಡನ್ ಕೇನ್ ಜೊತೆ ನಾನು ಹಿಗ್ಸ್ ಕಣ ಪತ್ತೆಯಾಗುವುದಿಲ್ಲ ಎಂದು ಬೆಟ್ ಕಟ್ಟಿದ್ದೆ. ಈಗ ನೋಡಿದರೆ ನನ್ನ 100 ಡಾಲರ್ ಬೆಟ್ಟಿಂಗ್ ಹಣ ಕಳೆದುಕೊಳ್ಳಬೇಕಿದೆ ಎಂದು ಹಾಕಿಂಗ್ ಸಂತಸದಿಂದ ಹೇಳಿದ್ದಾರೆ.

ಇಡೀ ದೇಹದಲ್ಲಿ ಒಂದೆರಡು ಬೆರಳು ಮಾತ್ರ ಅಲುಗಾಡಿಸಬಲ್ಲ ಸಾಮರ್ಥ್ಯ ಮಾತ್ರವುಳ್ಳ ಆದರೆ, ತನ್ನ ಸಿದ್ಧಾಂತಗಳ ಮೂಲಕ ಜಗತ್ತನ್ನು ಅಚ್ಚರಿಗೊಳಿಸಿರುವ ಸ್ಟೀಫನ್ ಹಾಕಿಂಗ್ ಜೀವಂತ ದಂತಕಥೆಯಾಗಿದ್ದಾರೆ.

ವಾಯ್ಸ್ ಸಿಂಥಸೈಜರ್ ಮೂಲಕ ಮನಸ್ಸಿನ ಮಾತನ್ನು ಪರದೆ ಮೇಲೆ ಮೂಡಿಸುತ್ತಾ ನೂರಾರು ಉಪನ್ಯಾಸಗಳನ್ನು ನೀಡಿರುವ ಹಾಕಿಂಗ್ ಅವರ ಅವರ ಮೆದುಳನ್ನು ಹ್ಯಾಕ್ ಮಾಡಿ ಮಾಹಿತಿಗಳನ್ನು ಕಲೆ ಹಾಕುವ ವಿಶಿಷ್ಟ ಪ್ರಯತ್ನಕ್ಕೆ ಕೂಡಾ ಮುಂದಾಗಲಾಗಿತ್ತು.

ಭೌತಶಾಸ್ತ್ರದ ಮೂಲ ನಿಯಮಗಳನ್ನು ಬುಡಮೇಲು ಮಾಡಬಲ್ಲ ಹಿಗ್ಸ್ ಸಿದ್ಧಾಂತ ಮೊಟ್ಟ ಮೊದಲ ಬಾರಿಗೆ ಹೊರ ಬಿದ್ದಾಗ ಸಮಕಾಲೀನ ವಿಜ್ಞಾನಿಗಳು, ಪತ್ರಿಕೆಗಳು ಭಾರಿ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಹಿಗ್ಸ್ ಗೆ ತನ್ನ ಸಿದ್ಧಾಂತವನ್ನು ಪ್ರಮಾಣೀಕರಿಸಿ ತೋರಿಸಲು ಸಾಧ್ಯವಾಗಿರಲಿಲ್ಲ. ಜಿನಿವಾದ CERN ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಜೀವ ಸೃಷ್ಟಿಗೆ ಕಾರಣವಾದ ಅಣುಕಣವನ್ನು ಶೋಧಿಸಿದ್ದಾರೆ. ದೇವಕಣ ಎಂದು ಕರೆಯಲ್ಪಡುವ subatomic ಕಣವನ್ನು ಹಿಗ್ಸ್ ಬೋಸನ್ ಇರುವಿಕೆ ಬಗ್ಗೆ ಖಾತ್ರಿ ಪಡಿಸಿದ್ದಾರೆ.

ಪ್ರಪಂಚವು ಈ ದೇವಕಣದಿಂದ ಸೃಷ್ಟಿಯಾಗಿದೆ ಎಂದು ಸ್ವಿಜರ್ಲೆಂಡ್ ಹಾಗೂ ಫ್ರಾನ್ಸಿನ ವಿಜ್ಞಾನಿಗಳು ಹೇಳಿದ್ದಾರೆ. ಇದರಿಂದ ಬ್ರಹ್ಮಾಂಡ ಹೇಗೆ ಸೃಷ್ಟಿಯಾಯಿತು ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಫ್ರಾನ್ ಗಡಿಯಲ್ಲಿ 55 ಸಾವಿರ ಕೋಟಿ ರು ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಬೃಹತ್ ಹ್ಯಾಡ್ರನ್ ಕೊಲೈಡರ್(Large Hadron Collider (LHC) ) ನಲ್ಲಿ ಅತ್ಯಧಿಕ ಶಕ್ತಿಯುಳ್ಳ ಪ್ರೋಟಾನ್ ಗಳನ್ನು ಡಿಕ್ಕಿ ಹೊಡೆಸಿ ದೇವಕಣದ ಇರುವಿಕೆಯ ಬಗ್ಗೆ ಖಾತ್ರಿ ಪಡಿಸಿಕೊಳ್ಳಲಾಗಿದೆ.

ಬಿಗ್ ಬ್ಯಾಂಗ್ ಮೂಲಕ ಶತಕೋಟಿ ವರ್ಷಗಳ ಹಿಂದೆ ಬ್ರಹ್ಮಾಂಡ ಸೃಷ್ಟಿಯಾಯಿತು ಎಂದು ತಿಳಿದಿದ್ದರೂ ಬಿಗ್ ಬ್ಯಾಂಗ್ ಪ್ರಕ್ರಿಯೆ ಬಗ್ಗೆ ಪ್ರತ್ಯಕ್ಷ ಸಾಕ್ಷಿ ಇರಲಿಲ್ಲ.

ಪ್ರಪಂಚದ ಹುಟ್ಟಿನಲ್ಲಿ ಹಿಗ್ಸ್ ಬೋಸನ್ ಎಂಬ ಧಾತು ನಿರ್ಣಾಯಕ ಪಾತ್ರ ವಹಿಸಿದೆ. ಹಿಗ್ಸ್ ಥಿಯರಿ ಮೂಲಕ ಪ್ರಪಂಚದ ಸೃಷ್ಟಿ, ನಕ್ಷತ್ರ ಮತ್ತು ಗ್ರಹಗಳ ಹುಟ್ಟು ಹಾಗೂ ಜೀವಿತಾವಧಿಯನ್ನು ನಾವು ತಿಳಿಯ ಬಹುದಾಗಿದೆ. ಒಂದು ಕಠಿಣವಾದ ಮತ್ತು ಬಲವಾದ ದೇವಕಣದಿಂದ ಬ್ರಹ್ಮಾಂಡವು ಸೃಷ್ಟಿಯಾಗಿದೆ ಎಂಬುದು ದೃಢಪಟ್ಟಿದೆ. ಇದನ್ನೇ ಹಿಗ್ಸ್ ಬೋಸನ್ ಥಿಯರಿ ಹೇಳುತ್ತದೆ ಎಂದು ಯುಕೆ ಸೈನ್ಸ್ ಅಂಡ್ ಟೆಕ್ನಾಲಜಿ ಫೆಸಿಲಿಟೀಸ್ ಕೌನ್ಸಿಲ್ ನ ಮುಖ್ಯಸ್ಥ ಜಾನ್ ವಮರ್ಸ್ಲೇ ಹೇಳಿದ್ದಾರೆ.

ಸ್ಕಾಟ್ಲೆಂಡ್ ನ ವಿಜ್ಞಾನಿ ಪೀಟರ್ ಹಿಗ್ಸ್ ಅವರು 1960ರ ದಶಕದಲ್ಲೇ ದೇವಕಣ ಇರುವಿಕೆ ಬಗ್ಗೆ ಖಚಿತ ಪಡಿಸಿದ್ದರು. ಆದರೆ, ಅದನ್ನು ದೃಢಪಡಿಸಲು ಸೂಕ್ತವಾದ ವೇದಿಕೆ ಇರಲಿಲ್ಲ. ಐರೋಪ್ಯ ಪರಮಾಣು ಸಂಶೋಧನಾ ಸಂಸ್ಥೆಯ ಖಭೌತ ವಿಜ್ಞಾನಿಗಳು Large Hadron Collider (LHC) ನಲ್ಲಿ ಬುಧವಾರ(ಜು.4) ಈ ಬಗ್ಗೆ ಪರೀಕ್ಷೆ ನಡೆಸಿ ದೃಢಪಡಿಸಿದ್ದಾರೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The 70-year-old theoretical physicist Stephen Hawking lost a 100-dollar bet as he believed that the Higgs Boson wouldn't be found.Stephen Hawking said that Peter Higgs deserved a Nobel Prize for the groundbreaking discovery of the "God particle", Scientists at the CERN research centre near Geneva

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more