• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೊದಲ ರಾಷ್ಟ್ರಪತಿಯ ಬ್ಯಾಂಕ್ ಖಾತೆ ಇನ್ನೂ ಚಾಲ್ತಿಯಲ್ಲಿದೆ!

By Srinath
|
1st-president-rajendra-prasad-bank-account-still-active
ಪಟ್ನಾ, ಜುಲೈ 4: ಸ್ವತಂತ್ರ ಭಾರತದ ಮೊಟ್ಟಮೊದಲ ಪ್ರಜೆಯ ಬ್ಯಾಂಕ್ ಖಾತೆ ಇನ್ನೂ ಚಾಲ್ತಿಯಲ್ಲಿದೆ! ಯಾವುದಪ್ಪಾ ಆ ಬ್ಯಾಂಕು ಇನ್ನೂ ಅಂಥಾ ಖಾತೆಯನ್ನು ಉಳಿಸಿಕೊಂಡಿರುವುದು ಎಂದು ಆಶ್ಚರ್ಯಪಟ್ಟಿರಾ?

ಅದುವೇ ಇಲ್ಲಿನ ಪಂಜಾಬ್ ನ್ಯಾಷನಲ್ ಬ್ಯಾಂಕ್. ಇನ್ನು ರಾಷ್ಟ್ರದ ಮೊಟ್ಟಮೊದಲ ಪ್ರಜೆ ದಿವಂಗತ ಬಾಬು ರಾಜೇಂದ್ರ ಪ್ರಸಾದ್. ಅದಿರಲಿ ಈ ವಿಷ್ಯಾ ಈಗೇಕೆ ಎಂದರೆ 14ನೇ ರಾಷ್ಟ್ರಪತಿ ಪದಗ್ರಹಣದ ಕಾಲ ಸನ್ನಿಹಿತವಾಗಿದೆ. ಆದ್ದರಿಂದ ಒಂದಷ್ಟು ಹಳೆಯ ಮೆಲುಕುಗಳು...

ಸುಮಾರು 50 ವರ್ಷಗಳ ನಂತರವೂ ಸಾಕ್ಷಾತ್ ರಾಷ್ಟ್ರಪತಿಯೊಬ್ಬರ ಉಳಿತಾಯ ಖಾತೆಯನ್ನು ಉಳಿಸಿಕೊಂಡಿರುವ ಹೆಮ್ಮೆ ಬಿಹಾರದ ಪಟ್ನಾದಲ್ಲಿ Exhibition Road ನಲ್ಲಿರುವ PNB ಶಾಖೆಯದ್ದಾಗಿದೆ. ಬಾಬು ರಾಜೇಂದ್ರ ಪ್ರಸಾದ್ ಅವರು ತಾವು ಅಸುನೀಗುವುದಕ್ಕೆ ಕೆಲವೇ ತಿಂಗಳುಗಳ ಮುನ್ನ, 1962ರ ಅಕ್ಟೋಬರ್ 24ರಂದು ಈ ಖಾತೆಯನ್ನು ತೆರೆದಿದ್ದರು.

'ನಮ್ಮ ಬ್ಯಾಂಕು ಇಂದಿಗೂ ರಾಜೇಂದ್ರ ಪ್ರಸಾದ್ ಅವರ ಖಾತೆಗೆ prime customer status ಸ್ಥಾನಮಾನ ನೀಡಿದೆ. ಅದು ನಮ್ಮ ಹೆಮ್ಮೆಯೂ ಹೌದು' ಎನ್ನುತ್ತಾರೆ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎಸ್ಎಲ್ ಗುಪ್ತಾ ಅವರು.

ಶಾಖೆಯ ನೋಟಿಸ್ ಬೋರ್ಡಿನಲ್ಲಿ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರ ಭಾವಚಿತ್ರವನ್ನು ಹಾಕಿ ಅದರ ಕೆಳಗೆ ಅವರ ಬ್ಯಾಂಕ್ ಖಾತೆಯ ಸಂಖ್ಯೆಯನ್ನು 0380000100030687 ನಮೂದಿಸಿದೆ. ಅಂದಹಾಗೆ ಪ್ರತಿ ಆರು ತಿಂಗಳಿಗೊಮ್ಮೆ ಈ ಖಾತೆಗೆ ಬಡ್ಡಿ ಹಣ ಜಮೆಯಾಗುತ್ತಿರುತ್ತದೆ. ಆದರೆ ಇದುವರೆಗೂ ಯಾರೂ ಈ ಹಣ ತಮಗೆ ಸೇರಬೇಕು ಎಂದು ಕೇಳಿಕೊಂಡು ಬಂದಿಲ್ಲ.

ಸಹಜ ಕುತೂಹಲದಿಂದ ಅವರ ಖಾತೆಯಲ್ಲಿರುವ ಮೊತ್ತ ಎಷ್ಟು ಎಂದು ನೋಡಿದಾಗ ಆ ಮೊತ್ತ 1,813 ರುಪಾಯಿ. ಎಂಬುದು ಬೆಳಕಿಗೆ ಬರುತ್ತದೆ. ಬಾಬು ರಾಜೇಂದ್ರ ಪ್ರಸಾದ್ ಅವರು ಬಿಹಾರದ ಸಿವಾನ್ ಜಿಲ್ಲೆಯ ಜೆರಾಡಿ ಗ್ರಾಮದಲ್ಲಿ 1884ರ ಡಿಸೆಂಬರ್ 3ರಂದು ಜನಿಸಿದ್ದರು. ಪಟ್ನಾದಲ್ಲಿ 1963ರ ಫೆಬ್ರವರಿ 28ರಂದು ಮೃತಪಟ್ಟಿದ್ದರು. ಅವರು 1952ರಿಂದ 1962ರ ವರೆಗೆ ಭಾರತದ ಮೊದಲ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India's first president Rajendra Prasad Bank account still active bearing number 80000100030687 in Punjab National Bank's Exhibition Road branch in Patna, Bihar. The balance including interest in account is Rs. 1813.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more