• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕ ವಿಧಾನಸಭೆ ವಿಸರ್ಜಿಸಲು ಅಡ್ವಾಣಿ ಸೂಚನೆ

By Mahesh
|
DV Sadananda Gowda and LK Advani
ನವದೆಹಲಿ, ಜು.2: ಕರ್ನಾಟಕ ರಾಜ್ಯ ಬಿಜೆಪಿ ಬಿಕ್ಕಟ್ಟಿಗೆ ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರು ಕಟ್ಟ ಕಡೆಯ ಪರಿಹಾರ ಸೂಚಿಸಿದ್ದಾರೆ.ಲಭ್ಯ ಮಾಹಿತಿ ಪ್ರಕಾರ ನಾಯಕತವ ಬದಲಾವಣೆಗೆ ಬಿಲ್ ಕುಲ್ ಒಪ್ಪದ ಹಿರಿಯ ಜೀವಿ, ವಿಧಾನಸಭೆ ವಿಸರ್ಜಿಸುವುದೊಂದೇ ಪರಿಹಾರ ಎಂದು ಸೂಚಿಸಿದ್ದಾರೆ.

ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಬಿಜೆಪಿ ತನ್ನ ತತ್ತ್ವ ನಿಷ್ಠೆಗಳನ್ನು ಎಲ್ಲೆಡೆ ಉಳಿಸಿಕೊಳ್ಳಬೇಕಿದೆ. ಸದಾನಂದ ಗೌಡರು ಉತ್ತಮ ಆಡಳಿತ ನೀಡಿದರೂ ಅನಗತ್ಯ ಭಿನ್ನಮತದಿಂದ ಸರ್ಕಾರದ ಆಡಳಿತ ಯಂತ್ರ ಕುಂಠಿತಗೊಳಿಸಲು ಯತ್ನಿಸಲಾಗಿದೆ. ಇದಕ್ಕೆ ವಿಧಾನಸಭೆ ವಿಸರ್ಜನೆ ಮಾಡುವುದು ಶಾಶ್ವತ ಪರಿಹಾರ ಎಂದು ಅಡ್ವಾಣಿ ಅಭಿಪ್ರಾಯಪಟ್ಟಿದ್ದಾರೆ.

ಅಡ್ವಾಣಿ ಈ ವಿಷಯವನ್ನು ಕಳೆದ ವಾರವೇ ವಿಧಾನಸಭೆ ವಿಸರ್ಜನೆಗೆ ಸೂಚಿಸಿದ್ದರು ಎನ್ನಲಾಗಿದೆ. ಅಡ್ವಾಣಿ ಮನದ ಇಂಗಿತ ಅರಿತ ಯಡಿಯೂರಪ್ಪ ಬಣ ರಾಜೀನಾಮೆ ನೀಡಿ ಒತ್ತಡ ತಂತ್ರ ಅನುಸರಿಸಿತ್ತು ಎಂಬ ವಿಷಯವನ್ನು ಇಂಡಿಯಾ ಟುಡೇ ಹೊರ ಹಾಕಿದೆ.

ಅದರೆ, ನಿತಿನ್ ಗಡ್ಕರಿ ಅವರಿಂದ ಭರವಸೆ ಸಿಕ್ಕ ಮೇಲೆ ರಾಜೀನಾಮೆ ಹಿಂಪಡೆದಿದ್ದ 9 ಸಚಿವರುಗಳು ಈಗ ನಿತಿನ್ ಗಡ್ಕರಿ ಅವರ ನಿರ್ಧಾರಕ್ಕಾಗಿ ಕಾದಿದ್ದಾರೆ. ಗ್ರಾಮೀಣ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸುವುದು ಅಥವಾ ಕೆಎಸ್ ಈಶ್ವರಪ್ಪ ಅವರಿಗೆ ಸಿಎಂ ಸ್ಥಾನ ನೀಡುವುದು ಬಿಎಸ್ ಯಡಿಯೂರಪ್ಪ ಬಣದ ಕಟ್ಟ ಕಡೆಯ ಬೇಡಿಕೆ ಎನ್ನಲಾಗಿದೆ.

ರಾಜೀನಾಮೆ ಹಿಂಪಡೆದ ನಂತರ ದೆಹಲಿಗೂ ಹೋಗಿ ಬಂದ ಯಡಿಯೂರಪ್ಪ ಬಣ ಸದ್ಯಕ್ಕೆ ಹೈಕಮಾಂಡ್ ಭರವಸೆಯಿಂದ ತೃಪ್ತಿಗೊಂಡಿರುವಂತಿದೆ. ಈ ಎಲ್ಲಾ ಪ್ರಸಂಗದ ಹಿಂದಿನ ಶಕ್ತಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಹೈಕಮಾಂಡ್ ಮೇಲೆ ಒತ್ತಡ ತಂತ್ರ ಹೇರಿ ಹೆದರಿಕೆ ಉಂಟು ಮಾಡುವುದು ಇವರ ತಂತ್ರ. ಯಡಿಯೂರಪ್ಪ ಅವರ ಮೇಲೆ ಇನ್ನೂ ಕೇಸುಗಳಿದೆ. ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ.

ಈ ಸಂದರ್ಭದಲ್ಲಿ ಸರ್ಕಾರ ಬೀಳಿಸುವುದು ಅಥವಾ ಯಡಿಯೂರಪ್ಪ ಹೊಸ ಪಕ್ಷ ಕಟ್ಟುವುದು ಎರಡೂ ಬೇಡದ ಸಂಗತಿಯಾಗಿದೆ. ಈ ರೀತಿ ಘಟನೆ ಸಂಭವಿಸಿದರೆ ರಾಜೀನಾಮೆ ನೀಡಿದ ಸಚಿವರ ಭವಿಷ್ಯ ಕತ್ತಲಾಗುತ್ತಿತ್ತು ಹಾಗಾಗಿ ರಾಜೀನಾಮೆ ಹಿಂಪಡೆದಿದ್ದಾರೆ. ಶೇ 70 ರಷ್ಟು ಭಿನ್ನಮತ ನಾಯಕರಿಗೆ ಮಧ್ಯಂತರ ಚುನಾವಣೆ ನಡೆಯುವುದು ಬೇಕಿಲ್ಲ ಎಂದು ಸಚಿವರೊಬ್ಬರು ಹೇಳಿದ್ದಾರೆ.

ಒಟ್ಟಾರೆ, ಯಡಿಯೂರಪ್ಪ ಬಣದ ಬೇಡಿಕೆ ಈಡೇರಿಕೆ ಬಗ್ಗೆ ಬಿಜೆಪಿ ಹೈಕಮಾಂಡ್ ನಲ್ಲೇ ಭಿನ್ನಾಭಿಪ್ರಾಯವಿದೆ. ಎಲ್ ಕೆ ಅಡ್ವಾಣಿ, ಸುಷ್ಮಾ ಸ್ವರಾಜ್, ರಾಜ್ ನಾಥ್ ಸಿಂಗ್ ಅವರಿಗೆ ಯಡಿಯೂರಪ್ಪ ಆಗಲಿ, ಅವರ ಬಣದ ನಾಯಕರಾಗಲಿ ಸಿಎಂ ಸ್ಥಾನಕ್ಕೇರುವುದು ಬೇಡ. ಯಡಿಯೂರಪ್ಪ ಪರ ಸಾಫ್ಟ್ ಕಾರ್ನರ್ ಇರುವ ನಿತಿನ್ ಗಡ್ಕರಿ ಅವರು ಅಡ್ವಾಣಿ ಬಣದ ಸಲಹೆ ತಳ್ಳುಹಾಕುವಂತಿಲ್ಲ. ಅದರೆ, ಪೂರ್ಣವಾಗಿ ಒಪ್ಪುವಂತಿಲ್ಲ ಎಂಬ ಪರಿಸ್ಥಿತಿಯಲ್ಲಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಬಿಜೆಪಿ ಬಿಕ್ಕಟ್ಟು ಸುದ್ದಿಗಳುView All

English summary
Senior BJP leader L.K. Advani reportedly favoured dissolution of the Karnataka state assembly as a permanent solution for the crisis. Advani reportedly said no change in the state BJP leadership is required as Sadananda Gowda is doing good job. not BJP can't prefer corrupt leader for CM post.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more