• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಷ್ಟ್ರಪತಿ ಹುದ್ದೆಗೆ ಪ್ರಣಬ್ ಅನರ್ಹ: ಜೇಠ್ಮಲಾನಿ

By Mahesh
|
ಹೈದರಾಬಾದ್, ಜೂ.29: ಯುಪಿಎ ಅಭ್ಯರ್ಥಿಯಾಗಿರುವ ಪ್ರಣಬ್ ಮುಖರ್ಜಿ ಅವರು ರಾಷ್ಟ್ರಪತಿ ಹುದ್ದೆಗೆ ಅನರ್ಹರಾಗಿದ್ದಾರೆ ಎಂದು ಸುಪ್ರೀಂಕೋರ್ಟಿನ ಖ್ಯಾತ ನ್ಯಾಯವಾದಿ, ಬಿಜೆಪಿ ಸಂಸದ ರಾಮ್ ಜೇಠ್ಮಲಾನಿ ಅವರು ಹೇಳಿದ್ದಾರೆ. ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ಜಗನ್ ಮೋಹನ್ ರೆಡ್ಡಿ ಪರ ವಕೀಲರಾಗಿರುವ ಜೇಠ್ಮಲಾನಿ ಅವರು ಪ್ರಣಬ್ ವಿರುದ್ಧ ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ವಿದೇಶಗಳಲ್ಲಿ ಕಪ್ಪು ಹಣ ಇಟ್ಟಿರುವವರ ಹೆಸರುಗಳನ್ನು ಬಹಿರಂಗಪಡಿಸಲು ಮುಖರ್ಜಿ ವಿಫಲರಾಗಿದ್ದಾರೆ. ಅಸಲಿಗೆ ಸುಪ್ರೀಂ ಕೋರ್ಟ್ ಆದೇಶವಿದ್ದರೂ ಫ್ರಾನ್ಸ್, ಜರ್ಮನಿ ಹಾಗೂ ಸ್ವಿಸ್ ಸರ್ಕಾರಗಳು ನೀಡಿದ್ದ ಭಾರತೀಯ ತೆರಿಗೆ ಕಳ್ಳರ ಹೆಸರುಗಳನ್ನು ಬಹಿರಂಗಪಡಿಸದೆ ಮುಖರ್ಜಿ ಮರೆಮಾಚಿದರು. ಇಂತಹ ವ್ಯಕ್ತಿ ರಾಷ್ಟ್ರಪತಿ ಸ್ಥಾನಕ್ಕೆ ಅರ್ಹನಲ್ಲ. ಎಂದು ಜೇಠ್ಮಲಾನಿ ಹೇಳಿದ್ದಾರೆ.

ಇದಲ್ಲದೆ, ಪ್ರಣಬ್ ಅವರಿಗೆ ಜೇಠ್ಮಲಾನಿ ಬಹಿರಂಗ ಪತ್ರ ಬರೆದು ಅವರ ಮೇಲೆ ಗುರುತರ ಆರೋಪಗಳನ್ನು ಮಾಡಿದ್ದಾರೆ. ತುರ್ತು ಪರಿಸ್ಥಿತಿಗೆ ಬೆಂಬಲಿಸಿದ್ದು, ಶಾ ಆಯೋಗಕ್ಕೆ ಬೆಂಬಲ ನೀಡದಿರುವುದು, ಕಾರ್ಪೊರೆಟ್ಸ್, ಬಂಡವಾಳಶಾಹಿಗಳಿಗೆ ನೆರವು, ಹಸನ್ ಅಲಿ ಪ್ರಕರಣದಲ್ಲಿ ನಿರಾಸಕ್ತಿ, ಸ್ವಿಸ್ ಬ್ಯಾಂಕ್ ಕಳ್ಳರ ಹೆಸರು ಬಹಿರಂಗ ಪಡಿಸದಿರುವುದು, ಗ್ವಾಲಿಯರ್ ನಲ್ಲಿ ಗಾಯತ್ರಿ ದೇವಿ ಹಾಗೂ ರಾಜಮಾತಾ ವಿಜಯ ರಾಜೆ ಅವರು ಅಕ್ರಮವಾಗಿ ಪಟ್ಟಕ್ಕೇರುವಂತೆ ಮಾಡಿದ್ದು ಇವೇ ಮುಂತಾದ ಆರೋಪಗಳನ್ನು ಪ್ರಣಬ್ ಮೇಲೆ ಹೊರೆಸಲಾಗಿದೆ.

ಆದರೆ, ಎನ್ ಸಿಪಿ ನಾಯಕ ಎನ್ ಡಿಎ ಅಭ್ಯರ್ಥಿ ಪಿಎ ಸಂಗ್ಮಾ ಪರ ಪ್ರಚಾರ ನಡೆಸಲು ನಾನು ಹೈದರಾಬಾದಿಗೆ ಬಂದಿಲ್ಲ ಎಂದು ಜೇಠ್ಮಲಾನಿ ಸ್ಪಷ್ಟಪಡಿಸಿದರು. ಕಾರ್ಪೊರೆಟ್ ಸಮೂಹಗಳಿಗೆ ನೆರವು ನೀಡುತ್ತಾ ದೇಶದ ಆರ್ಥಿಕತೆ ಪಾತಾಳ ಕಾಣುವಂತೆ ಮಾಡಿದ ಪ್ರಣಬ್ ಅವರನ್ನು ರಾಷ್ಟ್ರಪತಿಯಾಗಿ ಕಾಣುವುದು ಕಷ್ಟಕರ. ಸುಮಾರು 1500 ಬಿಲಿಯನ್ ಯುಎಸ್ ಡಾಲರ್ ಕಾಳಧನವನ್ನು ಭಾರತಕ್ಕೆ ವಾಪಸ್ ತರಿಸುವ ಭರವಸೆ ನೀಡಿ ಮೋಸ ಮಾಡಿದ್ದಾರೆ. ಈ ಮೊತ್ತ ಭಾರತದ ಬಡತನ ನೀಗಿಸಲು ಸಾಕಾಗುತ್ತಿತ್ತು ಎಂದು ಜೇಠ್ಮಲಾನಿ ಅಭಿಪ್ರಾಯಪಟ್ಟಿದ್ದಾರೆ.

ಯುಪಿಎ ಸಂಪುಟದ ಪ್ರಮುಖ ಸದಸ್ಯರ ಐಟಿ ರಿಟರ್ನ್ಸ್ ಬಗ್ಗೆ ಯುಪಿಎ ಚೇರ್ಮನ್ ಸೋನಿಯಾ ಗಾಂಧಿ ಅವರು ಮೌನ ವಹಿಸಿರುವುದಾದರೂ ಏಕೆ? ಸೋನಿಯಾ ಅವರೇ ಅನಗತ್ಯವಾಗಿ ವಿದೇಶಗಳಲ್ಲಿ ಪ್ರವಾಸ ಮಾಡುತ್ತಿದ್ದು, ಆಸ್ಪತ್ರೆ ಖರ್ಚು, ವೈದ್ಯಕೀಯ ವೆಚ್ಚ ಎಂದು ಹೇಳಿದ್ದು ಎಷ್ಟರಮಟ್ಟಿಗೆ ಸರಿ ಎಂದು ಜೇಠ್ಮಲಾನಿ ಪ್ರಶ್ನಿಸಿದ್ದಾರೆ.

ಆಗಸ್ಟ್ ನಲ್ಲಿ ಪ್ರಣಬ್ ರಾಷ್ಟ್ರಪತಿ ಕಚೇರಿ ಹೊಕ್ಕರೆ ಪಶ್ಚಿಮ ಬಂಗಾಳದ ದಿಗ್ಗಜರಾದ ಬಂಕಿಮ್ ಚಂದ್ರ ಚಟರ್ಜಿ, ಸ್ವಾಮಿ ವಿವೇಕಾನಂದ, ಚಿತ್ತರಂಜನ್ ದಾಸ್ ಹಾಗೂ ಶ್ರೀ ಅರವಿಂದೋ ಅವರ ಘನತೆ ಅಗೌರವಪೂರ್ವಕವಾಗಿ ನಡೆದುಕೊಂಡಂತೆ ಎಂದು ಜೇಠ್ಮಲಾನಿ ಹೇಳಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಪ್ರಣಬ್ ಮುಖರ್ಜಿ ಸುದ್ದಿಗಳುView All

English summary
In spite of the fact that there is a considerabale consensus on former Finance Minister Pranab Mukherjee's candidature for the Presidential poll, Noted Supreme Court lawyer and BJP MP Ram Jethmalani is of the opinion that Pranab was not qualified to contest for the top job.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more